ಕನ್ನಡವನ್ನು ಉಳಿಸಿ ಬೆಳೆಸಲು ಕನ್ನಡದ ಮಹನೀಯರ ದತ್ತಿನಿಧಿಯಿಂದ – ಕನ್ನಡದ ದತ್ತಿ ಕಾರ್ಯಕ್ರಮ : ಗೋಪಾಲ್ ಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕನ್ನಡವನ್ನು ಉಳಿಸಿ ಬೆಳೆಸಲು ಕನ್ನಡದ ಅಭಿಮಾನ ಉದಾರ ಉಳ್ಳ ಮಹನೀಯರು ದತ್ತಿನಿಧಿಯನ್ನು ಇಡಲಾಗಿದ್ದು ಅವರ ಆಶಯಗಳು ಈಡೇರಿಸುವಹಾಗೆ ನಾವು ಕನ್ನಡದ ದತ್ತಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಕಸಾಪ ಜಿಲ್ಲಾದ್ಯಕ್ಷ ಎನ್.ಬಿ ಗೋಪಾಲ್ ಗೌಡ ತಿಳಿಸಿದ್ದಾರೆ.
ತಾಲ್ಲೂಕಿನ ಕಲ್ಲೂರು ಆದರ್ಶ ವಿದ್ಯಾಸಂಸ್ಥೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾದ್ಯಕ್ಷ ಎನ್.ಬಿ ಗೋಪಾಲ್ ಗೌಡ ಕನ್ನಡದ ಅಭಿಮಾನಿಗಳಿಂದ ಕನ್ನಡವನ್ನು ಕಟ್ಟಿ ಉಳಿಸಿ ಬೆಳೆಸಲು ದತ್ತಿಯನ್ನು ಇಟ್ಟಿರುವ ಕನ್ನಡ ಮನಸ್ಸುಗಳಿಗೆ ಕೃತಜ್ನತೆಗಳನ್ನು ಸಲ್ಲಿಸಿ ಅವರ ಆಶಯಗಳಿಗೆ ತಕ್ಕಂತೆ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಸ್ಲಾಘನೀಯವಾಗಿದ್ದು ಮೀನಾಕ್ಷಿ ದತ್ತಿ, ಗಿಣಿಯ ಹೆಸರಿನಲ್ಲಿ ಇಟ್ಟಿರುವ ವಿಶೇಷತೆಯನ್ನು ತಿಳಿಸಿ ದತ್ತಿಯ ಮಹತ್ವವನ್ನು ವಿಸ್ಥಾರವಾಗಿ ತಿಳಿಸಿದರು.
ಉಪನ್ಯಾಸಕ ಡಾ|| ಮೃತ್ಯುಂಜಯ ಮಾತನಾಡಿ ಕುವೆಂಪು ರವರ ಕತಾಸಾಹಿತ್ಯದ ವೈಶಿಷ್ಟತೆಗಳಬಗ್ಗೆ ತಿಳಿಸುತ್ತಾ ಸನ್ಯಾಸಿ, ನನ್ನ ದೇವರು ಮತ್ತಿತರ ಕತೆಗಳ ಬಗ್ಗೆ ವಿವರಿಸಿ ಕುವೆಂಪು ರವರ 17 ಕಥೆಗಳಲ್ಲಿ ಪ್ರಮುಖ ವಾದ ದನ್ವಂತರಿ ಚಿಕಿಸ್ಥೆ, ಯಾರೂ ಅರಿಯದ ವೀರ, ಇವುಗಳ ಸಾರಾಂಶವನ್ನು ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ನೀಡಿದರು.
ಹನುಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೊಪಾದ್ಯಾಯ ಬಿ.ಕೆ ನಾಗರಾಜ್ ಮಾತನಾಡಿ ಕನ್ನಡಸಾಹಿತ್ಯದಲ್ಲಿ ವಚನಸಾಹಿತ್ಯಕಾರರಾದ ಜೇಡರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾದೇವಿ ವಚನಗಳ ಮಹತ್ವ ವಚನಸಾಹಿತ್ಯದಲ್ಲಿ ಸಮಾಜದಮೇಲೆ ಆಗಿರುವ ಕ್ರಾಂತಿಯ ಬಗ್ಗೆ ವಿವರಿಸಿದರು.
ಇಓ ಆನಂದ್ ಮಾತನಾಡಿ ಮಂಕು ತಿಮ್ಮ ಕಗ್ಗಗಳ ತಾತ್ಪರ್ಯವನ್ನು ವಿವರಿಸಿದರು.
ಇದೇ ವೇಳೆಯಲ್ಲಿ ದಿವಂಗತ ವೈ.ಆರ್ ರಾಮಯ್ಯ ಶೆಟ್ಟಿ, ಮತ್ತು ವೈ.ಆರ್ ಸುಬ್ಬಲಕ್ಷ್ಮಯ್ಯ ದತ್ತಿ, ದತ್ತಿ ದಾನಿಗಳಾದ ವೈ.ಆರ್ ಶಿವಪ್ರಕಾಶ್ ಮತ್ತು ವೈ.ಆರ್ ನಾಗೇಂದ್ರ ಬಾಬು, ಹಾಗು ತಾಲ್ಲೂಕು ಜಿಲ್ಲೆಯ ದತ್ತಿಗಳನ್ನು ಇಟ್ಟಿರುವ ಮಹನೀಯರನ್ನು ಕಾರ್ಯಕ್ರಮದಲ್ಲಿ ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅದ್ಯಕ್ಷಿಣಿ ಪಿ.ಎಸ್ ಮಂಜುಳಾ, ಪದಾದಿಕಾರಿಗಳಾದ ಶಿವರಾಮೇಗೌಡ, ಜಿ.ಕೆ ನಾರಾಯಣಸ್ವಾಮಿ, ವೇಣುಗೋಪಾಲ್, ಮುಖ್ಯ ಶಿಕ್ಷಕಿ ಮಮತಾ ರಾಣಿ, ಶಿಕ್ಷಕರು ಮತ್ತಿತರರು ಹಾಜರಿದ್ದರು.