ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಶಿವಕುಮಾರ ಸ್ವಾಮೀಜಿ ಅವರ ಸ್ಮರಣೆಯಿಂದ ಜನರ ಹೃದಯಂತಾರದೊಳಗೆ ಮೌಲ್ಯಗಳು ಸ್ಥಾಪನೆಗೊಳ್ಳುತ್ತವೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಸ್ವಾಮೀಜಿ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಅವರು ನಿಜವಾದ ಮಾನವತಾ ವಾದಿಯಾಗಿದ್ದರು. ಜಾತಿ, ಮತ ಭೇದವಿಲ್ಲದೆ ಮಕ್ಕಳಿಗೆ ಅಕ್ಷರ ನೀಡಿದರು. ಅನ್ನದಾಸೋಹ ಮಾಡಿದರು ಎಂದು ಹೇಳಿದರು.
ಅವರ ಬದುಕು ಎಷ್ಟೋ ಜನರಿಗೆ ಸ್ಫೂರ್ತಿಯ ಸೆಲೆಯಾಗಿದೆ. ಅವರ ಚೈತನ್ಯ ಶಕ್ತಿ ಸಮಾಜದಲ್ಲಿ ನೆಲೆಗೊಂಡಿದೆ. ಸ್ವಾಮೀಜಿ ಬದುಕಿಗೊಂದು ಮಾದರಿಯಾಗಿದ್ದಾರೆ. ಪ್ರತಿಯೊಬ್ಬರು ಅವರ ಮಾರ್ಗದಲ್ಲಿ ನಡೆದಾಗ ಸವi ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಪುರಸಭೆ ಅಧಿಕಾರಿಗಾಳಾ ಡಿ.ಶೇಖರರೆಡ್ಡಿ, ವಿ.ನಾಗರಾಜ್, ಎನ್.ಶಂಕರ್, ನಾಗರಾಜು, ಸಮುದಾಯದ ಮುಖಂಡರಾದ ವೇದಾಂತ್ ಶಾಸ್ತ್ರಿ, ಸತೀಶ್ ಕುಮಾರ್, ಪ್ರೇಮ್ ಕುಮಾರ್, ರಾಜಣ್ಣ, ರಾಮಲಿಂಗ, ಶಾರದ, ಮಾಲತಿ ಇದ್ದರು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.