ಕುಂದಾಪುರ, ಜೂ.2: ಹೋಲಿ ರೋಜರಿ ಚರ್ಚಿನ ಸಮೂಹ ವಿಧ್ಯಾ ಸಂಸ್ಥಗಳಾದ ಸಂತ ಮೇರಿಸ್ ಕಿ.ಮತ್ತು ಹಿ.ಪ್ರಾರ್ಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆ, ಸಂತ ಮೇರಿಸ್ ಪಿ.ಯು. ಕಾಲೇಜ್ ಮತ್ತು ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಗಳಿಂದ ನೂತನವಾಗಿ ಆಯ್ಕೆಯಾದ ಕುಂದಾಪುರ ರೋಜರಿ ಚರ್ಚಿನ ಕಥೊಲಿಕ್ ವಿಧ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಅಂ|ವಂ|ಫಾ|ಪಾವ್ಲ್ ರೇಗೊ ಅವರಿಗೆ ಹ್ರತಪೂರ್ವಕ ಸ್ವಾಗತ ನೀಡಲಾಯಿತು.
ಜೂನ್ 1 ರಂದು ಹೋಲಿ ರೋಜರಿ ಚರ್ಚ್ ನಡೆಸುತ್ತೀರುವ ಈ ಎಲ್ಲಾ ಶಾಲೆಗಳ ಪರವಾಗಿ ಅಂ|ವಂ|ಫಾ|ಪಾವ್ಲ್ ರೇಗೊ ಅವರನ್ನು ಶಾಲಾ ಬ್ಯಾಂಡು ವಾದ್ಯಗಳ ಮೂಲಕ ಸ್ವಾಗತಿಸಿ, ಎಲ್ಲಾ ಶಾಲೆಗಳ ಮುಖ್ಯಸ್ಥರು, ಮತ್ತು ಶಾಲಾ ನಾಯಕಿ, ನಾಯಕರು ಅವರನ್ನು ಪುಷ್ಪಗಳನ್ನು ನೀಡಿ ಗೌರವಿಸಿದರು.
ಅಂ|ವಂ|ಫಾ|ಪಾವ್ಲ್ ರೇಗೊ ಮಾತನಾಡಿ ‘ನಮ್ಮ ಎಲ್ಲ ಶಾಲೆಗಳು ಪ್ರಗತಿಯಲ್ಲಿವೆ, ನಾನು ನಮ್ಮ ಶಾಲೆಗಳ ಬಗ್ಗೆ ತಿಳಿದುಕೊಂಡಿದ್ದೇನೆ, ಎಲ್ಲಾ ಶಾಲೆಗಳಿಗೆ ಉತ್ತಮ ಫಲಿತಾಂಶ ದೊರಕಿದೆ, ನಮ್ಮ ಶಾಲೆಗಳಲ್ಲಿ ನಿಸ್ವಾರ್ಥ ಮನೋಭಾವದಿಂದ ಶಿಕ್ಷಣ ದಾನ ನೀಡುವ ಶಿಕ್ಷಕ ಶಿಕ್ಷಕಿಯವರಿದ್ದಾರೆ, ನಾನು ಇನ್ನು ಹೆಚ್ಚಿನ ಪ್ರಗತಿಗೆ ಪ್ರೋಹಾತ್ಸ ನೀಡುತ್ತೇನೆ, ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ, ಉತ್ತಮ ಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳಬೇಕು, ಮುಂದೆ ಉತ್ತಮ ನಾಗರಿಕಾನಾಗಿ ಬೆಳೆಯಬೇಕು’ ಎನ್ನುವುದು ನಮ್ಮ ಆಶೆ’ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಲ್ಲ ವಿಧ್ಯಾ ಸಂಸ್ಥೆಗಳ ಮುಖ್ಯಸ್ಥರು ವೇದಿಕೆಯಲ್ಲಿದ್ದರು, ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿ ಆರಾನ್ಹಾ ಜೂನ್ 2 ರಂದು ಭಡ್ತಿ ಹೊಂದಿ ಉಡುಪಿ ಧರ್ಮಪ್ರಾಂತ್ಯದ ಅನುಗ್ರಹಕ್ಕೆ ‘ಯಾಜಕತ್ವ ಅಹ್ವಾನ’ ಕೇಂದ್ರ ಮತ್ತು ಬಾಲಯೇಸು ಪಂಗಡದ ನಿರ್ದೇಶಕರಾಗಿ ನಿರ್ಗಮಸಲಿರುವ ಅವರನ್ನು ಎಲ್ಲಾ ಶಾಲೆಗಳ ಪರವಾಗಿ ಗೌರವಿಸಲಾಯಿತು. ಸಂತ ಮೇರಿ ಕಿ. ಮತ್ತು ಹಿ.ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ಇವರ ಸ್ಥಾನಕ್ಕೆ ಮುಖ್ಯೋಪಾಧ್ಯಾಯಿನಿ ಆಗಿ ಆಯ್ಕೆಯಾದ ಶಿಕ್ಷಕಿ ಶಾಂತಿ ರಾಣಿ ಬರೆಟ್ಟೊ ಇವರನ್ನು ಜಂಟಿ ಕಾರ್ಯದರ್ಶಿಗಳು ಗೌರವಿಸಿದರು. ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ ಸ್ವಾಗತಿಸುವ ನುಡಿಗಳನ್ನಾಡಿದರು.ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಚಂದ್ರಶೇಖರ ಬಿಜಾಡಿ ನಿರೂಪಿಸಿ ವಂದಿಸಿದರು.