ವರ್ತಕರ ಸಮಸ್ಯೆಗಳನ್ನು ಬಗಹರಿಸುವಂತೆ ಮಳಿಗೆಗಳ ಕ್ಷೇಮಾಭಿವೃದ್ಧಿ ಸಂಘದಿಂದ  ಶ್ರೀನಿವಾಸಪುರ ಪುರಸಭೆಯ ಎದುರು ಪ್ರತಿಭಟನೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ 1 : ಪಟ್ಟಣದ ಪುರಸಭೆಯ ಎದುರು ಮಂಗಳವಾರ ಪುರಸಭೆ ಮಳಿಗೆಗಳ ಕ್ಷೇಮಾಭಿವೃದ್ಧಿ ಸಂಘವು ಮಳಿಗೆಗಳ ವರ್ತಕರು ಸಮಸ್ಯೆಗಳನ್ನು ಬಗಹರಿಸುವಂತೆ ಪುರಸಭೆಯ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಮಾಡಿದರು.
ಪುರಸಭೆಯ ಮಳಿಗೆಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪರೆಡ್ಡಿ ಮಾತನಾಡಿ ಎಂಜಿ ರಸ್ತೆಯಲ್ಲಿ ಹಳೆ ಸರ್ಕಾರಿ ಆಸ್ಪತ್ರೆಯನ್ನು ಕೆಡವಿ ಪುರಸಭೆಯು ಅಂಗಡಿ ಮಳಿಗೆಗಳನ್ನು ಕಟ್ಟಿದೆ. ಆದರೆ ಮಳಿಗೆಗಳಿಗೆ ಕರೆಂಟ್ ಸಂಪರ್ಕ ಇಲ್ಲ, ಏಳು ದಿನಗಳಿಂದ ವ್ಯಾಪಾರಸ್ಥರು ಪರದಾಡುವಂತಾಗಿದೆ. ಪುರಸಭೆಯವರು ಅಂಗಡಿ ಮಳಿಗೆಗಳನ್ನು ಹಂಚಿಕೆ ಮಾಡಿ ಇಲ್ಲಿಗೆ ಮೂರು ವರ್ಷಗಳು ಕಳೆದಿವೆ. ಇಲ್ಲಿಯವರೆಗೂ ಆಂಗಡಿಗಳಿಗೆ ಕೆಇಬಿ ಮೀಟರ್‍ಗಳನ್ನು ಆಳವಡಿಸದೆ , ಹಾಗೂ ಕಾಂಪೆಲಕ್ಸ್‍ಗೆ ಸೆಕ್ಯುರಿಟಿಯನ್ನು ನಿಯೋಜಸದೆ ಇನ್ನು ಹಲವಾರು ಸಮಸ್ಯೆಗಳನ್ನು ಅಲ್ಲಿ ಬಗೆಹರಿಸದೆ ಮೀನಾಮೇಷ ಎಣಿಸುತ್ತಿರುವವುದು ಅಲ್ಲಿನ ವರ್ತಕರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಕಾಂಪ್ಲೆಕ್ಸ್‍ನಲ್ಲಿ 90 ಅಂಗಡಿ ಮಳಿಗೆಗಳನ್ನು ಹೊಂದಿದ್ದು, ಈ ಮಳಿಗೆಗಳ ವರ್ತಕರು ಮಂಗಳವಾರ ತಮ್ಮ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪುರಸಭೆಯ ಮುಂದೆ ಧರಣಿ ಕುಳಿತು ಪ್ರತಿಭಟಿಸಿದರು.
ಈ ವಿಷಯವಾಗಿ ಪುರಸಭಾ ಅಧಿಕಾರಿಗಳು ಇದರ ಬಗ್ಗೆ ಸ್ಪಂದಿಸಿದೆ ಇದ್ದದ್ದರಿಂದ ತಾಲೂಕಿನ ದಂಡಾಧಿಕಾರಿಗಳ ಬಳಿ ನಿಯೋಗ ಹೋಗಿ ಅವರ ಗಮನಕ್ಕೆ ತರಲಾಯಿತು. ಆನಂತರ ಪುರಸಭಾಧಿಕಾರಿಗಳು ಕೆಇಬಿಗೆ ಬಾಕಿ ಇರುವ ಕರೆಂಟ್ ಬಿಲ್ ಹಣವನ್ನು ಪಾವತಿಸಿ ಈ ಕೆರಂಟ್‍ನ್ನು ಕಾಂಪ್ಲೆಕ್ಸ್‍ಗೆ ನೀಡಲಾಗುವುದು ಎಂದು ಭರವಸೆ ಕೊಟ್ಟ ಮೇಲೆ ಧರಣಿಯನ್ನು ವಾಪಸ್ ಪಡೆಯಲಾಗಿದ್ದು,
ಪುರಸಭೆಯ ಅಧಿಕಾರಿಗಳು ನಮ್ಮ ಅಂಗಡಿಗಳಿಗೆ ಮೀಟರ್ ಅಳವಡಿಸಿ ಅಲ್ಲಿನ ಸಮಸ್ಯೆಗಳನ್ನು ಒಂದು ವಾರದೊಳಗೆ ಬಗೆಹರಿಸಿದಿದ್ದರೆ . ನಾವು ಉಗ್ರರೀತಿಯ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿ,ಧರಣಿಯನ್ನು ಹಿಂದಕ್ಕೆ ಪಡೆದಿರುತ್ತೇವೆ ಎಂದರು.
ವರ್ತಕರಾದ ಶ್ರೀನಿವಾಸ್, ನವೀನ್, ನಾರಾಯಣಸ್ವಾಮಿ, ನಜೀರ್, ವೀರಭದ್ರಸ್ವಾಮಿ, ಮನೋಹರ್, ರಫೀಕ್, ಪೃಥ್ವಿ, ಮೌಲ , ನಾಗರಾಜ್ ಇತರರು ಇದ್ದರು.