ಕುಂದಾಪುರ,ಅ. 14: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆ ಹಾಗೂ ನ್ರತ್ಯ ಸ್ಪರ್ಧೆ ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು, ಘಟಕದ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಸ್ಟ್ಯಾನಿ ತಾವ್ರೊ ಮಾತನಾಡಿ ದೇಶ ಪ್ರೇಮ ಬಾಯಿ ಮಾತಿನಿಂದ ತೊರ್ಪಡಿಸುವುದಲ್ಲ ನಾವು ನಮ್ಮ ಕರ್ತವ್ಯ, ನಡತೆ, ನಮ್ಮ ಕಾರ್ಯಗಳಿಂದ ಆಗಬೇಕಿದೆ” ಎಂದು ವಿಜೇತರಿಗೆ ಬಹುಮಾನಗಳನ್ನು ವಿತರಣೆ ಮಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ರಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷ ಹರಿಪ್ರಸಾದ್ ಕಾನ್ಮಕ್ಕಿ ಶೆಟ್ಟಿ ಮಾತನಾಡಿ “ ಅಂದು ಅಂದು ನಮಗೆ ಸ್ವಾತಂತ್ರ ದೊರಕಲು ಹಲವಾರು ಹಿರಿಯರು ಅವರ ಆಸ್ತಿ ಪಾಸ್ತಿ, ಜೇವವೂ ಕೂಡ ಬಲಿದಾನ ನೀಡಿದ್ದಾರೆ, ಆದರೆ ಇವತ್ತಿನ ಕಾಲ ಘಟ್ಟದಲ್ಲಿ ದೇಶ ಪ್ರೇಮ, ಚರಿತ್ರೆ, ಧ್ವಜದ ಬಗ್ಗೆ ತಿರುಚಿ ಸಮಾಜದಲ್ಲಿ ಗೊಂದಲ ಮೂಡಿಸುತಿದ್ದಾರೆ, ಅದರ ಬದಲು ಇಂತಹ ದೇಶ ಭಕ್ತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದಾರೆ ಒಳಿತಿ” ಎಂದು ಹೇಳಿದರು. ಕಥೊಲಿಕ್ ಸಭಾ ಕುಂದಾಪುರದ ವಲಯ ಸಮಿತಿಯ ಅಧ್ಯಕ್ಷೆ ಶಾಂತಿ ಪಿರೇರಾ, ಕುಂದಾಪುರ ಘಟಕದ ಪೂರ್ವಾಧ್ಯಕ್ಷ ಬರ್ನಾಡ್ ಡಿಕೋಸ್ತಾ, ಡಾ| ಸೋನಿ ಡಿಕೋಸ್ತಾ, ವಾಲ್ಟರ್ ಡಿಸೋಜಾ, ವಿಲ್ಸನ್ ಡಿಆಲ್ಮೇಡಾ ಮೊದಲಾದ ಘಟಕದ ಪದಾಧಿಕಾರಿಗಳು ಉಪಸ್ಥಿರಿದ್ದರು.
ತೀರ್ಪುದಾರರಾಗಿ ಗುರುರಾಜ್ ಶ್ರೀನಿವಾಸ ಶೇಟ್ ಮತ್ತು ಡಾ|ರಜತ್ ರಾವ್ ಆಗಿದ್ದು ಅವರ ಅಭಿಪ್ರಾಯಗಳನ್ನು ಅವರು ಹಂಚಿಕೊಂಡರು. ಕಥೊಲಿಕ್ ಸಭಾದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು, ಕಾರ್ಯದರ್ಶಿ ಅಲ್ಡ್ರಿನ್ ಡಿಸೋಜಾ ವಂದಿಸಿದರು. ವಿನೋದ್ ಕ್ರಾಸ್ಟೊ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಿಜೇತ ಶಾಲ ತಂಡಗಳು
ಸಮೂಹ ಗೀತೆ ವಿಭಾಗದಲ್ಲಿ: ಎಚ್.ಎಮ್.ಎಮ್ ಹಾಗೂ ವಿ ಕೆ ಆರ್ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಪ್ರಥಮ, ಸಂತ ಮೇರಿ ಪ್ರೌಢ ಶಾಲೆ, ಕುಂದಾಪುರ ದ್ವೀತಿಯ, ಸಂತ ಜೋಸೆಫ್ ಪ್ರೌಢ ಶಾಲೆ, ಕುಂದಾಪುರ. ತ್ರತೀಯ ಸ್ಥಾನ ಪಡೆಯಿತು.
ಸಮೂಹ ನ್ರತ್ಯ ವಿಭಾಗದಲ್ಲಿ:ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ,ಪ್ರಥಮ ಸ್ಥಾನ, ಸಂತ ಮೇರಿ ಪ್ರೌಢ ಶಾಲೆ, ಕುಂದಾಪುರ ದ್ವೀತಿಯ, ಪಿ.ವಿ.ಎಸ್. ಸರೋಜಿನಿ ಮಧುಕುಶನ್ ಕುಶೆ ಸರಕಾರಿ ಪ್ರೌಢ ಶಾಲೆ, ಕುಂದಾಪುರ. ತ್ರತೀಯ ಸ್ಥಾನ ಪಡೆಯಿತು.