ಕುಂದಾಪುರ,ಆ.11:ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆ ಹಾಗೂ ನ್ರತ್ಯ ಸ್ಪರ್ಧೆಗಳು (ಆ.10 ರಂದು) ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಜರಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಅಗಮಿಸಿದ ಕುಂದಾಪುರ ತಾಲುಕಿನ ತಹಸಿಲ್ದಾರ್ ಶೋಭಲಕ್ಷ್ಮಿ ಮಾತನಾಡಿ ‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಸಾವಿರ ಅಲ್ಲ ಲಕ್ಷಾಂತರರ ಲಕ್ಷಾಂತರ ಜನ ಹೋರಾಡಿದ್ದಾರೆ, ನಮ್ಮ ದೇಶದ ಸ್ವಾತಂತ್ರ್ಯಕಾಗಿ ಜೀವ ಬಲಿದಾನವನ್ನು ಅರ್ಪಿಸಿದ್ದಾರೆ, ನಮಗೆ ದೊರೆತ ಸ್ವಾತಂತ್ರದ ಸವಿ ನೆನಪಿಗೆ ದೇಶ ಭಕ್ತಿ ಗೀತೆ ಮತ್ತು ನ್ರತ್ಯ ಸ್ಫರ್ಧೆಯನ್ನು ಕಥೊಲಿಕ್ ಸಭಾ ಏರ್ಪಡಿಸಿದೆ, ನಿಜ್ಜಕ್ಕೂ ಉತ್ತಮ ಕಾರ್ಯಕ್ರಮ, ಮಕ್ಕಳು ಸೊಗಸಾಗಿ, ಗೀತೆಗಳನ್ನು ಹಾಡಿದರು, ಚೆಂದವಾಗಿ ನ್ರತ್ಯ ಮಾಡಿದರು, ಮಕ್ಕಳು ನಾವು ಎನಾಗಬೇಕು ಎಂದು ಬಯಸುತ್ತೀರೊ, ಅದರಂತೆ ನೆಡಯಬೇಕು, ನಮ್ಮ ಗುರಿ ಸಾಧಿಸಿವ ಛಲವನ್ನು ಹೂಂದಬೇಕು, ವಿಧ್ಯೆಗೆ ಎಂದೂ ಬಡತನವಿಲ್ಲ ವಿಧ್ಯೆ ಎಲ್ಲರಿಗೂ ಸಮಾನವಾಗಿರುತ್ತದೆ, ಸ್ವಾತಂತ್ರ್ಯದ ಉತ್ಸಾಹ ಸ್ವಾಂತಂತ್ರ್ಯದ ದಿನ ಮಾತ್ರವಲ್ಲದೆ, ಸದಾಕಾಲ ಇದ್ದು ನಿಮ್ಮ ಜೀವನ ಉದ್ದಕ್ಕೂ ಸ್ವಾಂತಂತಕ್ಕೆ ಮಹತ್ವ ಕೊಡಬೇಕು’ ಎಂದು ಅವರು ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದದ್ದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು, ಘಟಕದ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಪಾವ್ಲ್ ರೇಗೊ ಮಾತನಾಡಿ ”ಸ್ವಾತಂತ್ರ್ಯದ ಪ್ರಯುಕ್ತ ಎರ್ಪಡಿಸಿದ ಈ ದೇಶ ಭಕ್ತಿ ಗೀತೆ ಮತ್ತು ನ್ರತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಉತ್ಸಾಹ, ಸ್ಪೂರ್ತಿ ನೋಡಿ ತುಂಬಾ ಖುಷಿಯನ್ನು ನೀಡಿದೆ, ಎಲ್ಲರೂ ಸ್ಫರ್ಧೆಯಲ್ಲಿ ಜಯಿಸಬೇಕೆಂದು ಭಾಗವಹಿಸಿದ್ದೀರಿ, ಬಹುಮನ ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ, ಸ್ಪರ್ಧಿಗಳಿಗೆ, ನಿಮಗೆ ಕಲಿಸಿದ ಅಧ್ಯಾಪಕರಿಗೆ, ಸ್ಫರ್ಧೆ ಎರ್ಪಡಿಸಿದವರಿಗೆ ಎಲ್ಲರಿಗೂ ಅಭಿನಂದನೆಗಳು’ ಎಂದು ಶುಭ ಹಾರೈಸಿದರು. ಸ್ಫರ್ಧೆಯ ತೀರ್ಪುದಾರರಾದ ವಿಲ್ಸನ್ ಒಲೆವೆರಾ ತಮ್ಮ ಅನ್ನಿಸಿಕೆಯನ್ನು ವ್ಯಕ್ತಪಡಿಸಿದರು, ಪಾರ್ವತಿ ಕೊತ್ವಾಲ್ ಮತ್ತು ಆಶರ್ ಅಂಟೋನಿ ಮೆಂಡೊನ್ಸಾ ಇನ್ನಿಬ್ಬರು ತೀರ್ಪುದಾರರಾಗಿದ್ದಾರು. ಕಥೊಲಿಕ್ ಸಭಾ ಕುಂದಾಪುರದ ವಲಯ ಸಮಿತಿಯ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ ಅತಿಥಿಗಳನ್ನು ಪುಷ್ಪ ನೀಡಿ ಸ್ವಾಗತಿಸಿದರು. ಸ್ಪರ್ಧೆಯನ್ನು ನಿರ್ಗಮನ ಅಧ್ಯಕ್ಷೆ ಶೈಲಾ ಡಿಆಮೇಡಾ ನೆಡೆಸಿಕೊಟರು. ಕಥೊಲಿಕ್ ಸಭಾ ಕುಂದಾಪುರ ಘಟಕರ ಪದಾಧಿಕಾರಿಗಳು ಉಪಸ್ಥಿತರಿದ್ದು, ಸ್ಪರ್ಧೆ ನೆಡೆಸುವಲ್ಲಿ ಸಹಕರಿಸಿದರು. ವಿನೋದ್ ಕ್ರಾಸ್ಟೊ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು.
ವಿಜೇತ ಶಾಲ ತಂಡಗಳು
ಸಮೂಹ ಗೀತೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಪ್ರಥಮ, ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್, ಕುಂದಾಪುರ ದ್ವೀತಿಯ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ. ತ್ರತೀಯ ಸ್ಥಾನ ಪಡೆಯಿತು.
ಸಮೂಹ ನ್ರತ್ಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ: ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ, ಪ್ರಥಮ ಸ್ಥಾನ, ಸಂತ ಜೋಸೆಫ್ ಪ್ರಾಥಮಿಕ ಶಾಲೆ ಕುಂದಾಪುರ, ದ್ವೀತಿಯ ಸ್ಥಾನ, ಯು.ಬಿ.ಎಮ್.ಸಿ. ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ತ್ರತೀಯ ಸ್ಥಾನ ಪಡೆಯಿತು.
ಸಮೂಹ ಗೀತೆ ಪ್ರೌಢ ಶಾಲಾ ವಿಭಾಗದಲ್ಲಿ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಪ್ರಥಮ, ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಕುಂದಾಪುರ ದ್ವೀತಿಯ, ವಿಕೆ.ಆರ್. ಆಚಾರ್ಯ ಮೆಮೊರಿಯಲ್ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ, ತ್ರತೀಯ ಸ್ಥಾನ ಪಡೆಯಿತು.
ಸಮೂಹ ನ್ರತ್ಯ ಪ್ರೌಢ ಶಾಲಾ ವಿಭಾಗದಲ್ಲಿ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಪ್ರಥಮ ಸ್ಥಾನ, ವಿಕೆ.ಆರ್. ಆಚಾರ್ಯ ಮೆಮೊರಿಯಲ್ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ, ದ್ವೀತಿಯ ಸ್ಥಾನ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ. ತ್ರತೀಯ ಸ್ಥಾನ ಪಡೆಯಿತು. ವಿಜೇತರರನ್ನು ಅತಿಥಿಗಳು ಬಹುಮಾನಗಳನ್ನು ನೀಡಿ ಸತಕರಿಸಿದರು.