ಕುಂದಾಪುರ ಕಥೊಲಿಕ್ ಸಭಾದಿಂದ – ಸ್ವಾತಂತ್ರ್ಯೊತ್ಸವದ ಪ್ರಯುಕ್ತ ದೇಶ ಭಕ್ತಿ ಗೀತೆ ಹಾಗೂ ನ್ರತ್ಯ ಸ್ಪರ್ಧೆ


ಕುಂದಾಪುರ,ಆ.13 : ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆ ಹಾಗೂ ನ್ರತ್ಯ ಸ್ಪರ್ಧೆಗಳು (ಆ.12 ರಂದು) ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು, ಘಟಕದ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಸ್ಟ್ಯಾನಿ ತಾವ್ರೊ ಮಾತನಾಡಿ ”ಸ್ವಾತಂತ್ರ್ಯದ ಪ್ರಯುಕ್ತ ಎರ್ಪಡಿಸಿದ ಈ ದೇಶ ಭಕ್ತಿ ಗೀತೆ ಮತ್ತು ನ್ರತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಉತ್ಸಾಹ, ಸ್ಪೂರ್ತಿ ನೋಡಿ ತುಂಬಾ ಖುಷಿಯನ್ನು ನೀಡಿದೆ, ನೀವು ನಮ್ಮ ಭಾರತದ ಮುಂದಿನ ಪ್ರಜೆಗಳು, ನಿಮ್ಮಲ್ಲಿರುವ ದೇಶಪ್ರೇಮ ಮತ್ತಷ್ಟು ಬೆಳೆಯಲಿ” ಎಂದು ವೀಜೆತರಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಮುಖ್ಯ ಅತಿಥಿಯಾಗಿ ಕುಂದಾಪುರ ವಲಯದ ಡಿವೈಎಸ್ಪಿ ಬೆಳ್ಳಿಯಪ್ಪ ಆಗಮಿಸಿ ಬಹುಮಾನಗಳನ್ನು ವಿತರಿಸುತ್ತಾ “ದೇಶದ ಸ್ವಾತಂತ್ರ್ಯ ಸಂಭ್ರಮದ ಪ್ರಯುಕ್ತ ನಡೆದಂತಹ ಈ ಸ್ಪರ್ಧೆ ನಿಜಕ್ಕೂ ದೇಶ ಪ್ರೇಮದ ಉತ್ಸಾಹ ಕಂಡು ಈ ಕಾರ್ಯಕ್ರಮ ಇನ್ನಷ್ಟು ನೋಡಬೇಕಿನ್ನಿಸಿತು. ಮಕ್ಕಳಲ್ಲಿ ಇಂತಹ ದೇಶಭಕ್ತಿ ಇರಲೇಬೇಕು. ಈ ದೇಶ ಭಕ್ತಿ ಬೆಳೆಸಿಕೊಂಡು ಮುಂದೆ ನೀವು ಭಾರತ ದೇಶದ ಉತ್ತಮ ಪ್ರಜೆಗಳಾಬೇಕು’ ಎಂದು ಕಿವಿ ಮಾತು ಹೇಳಿದರು. ಮತ್ತೋರ್ವ ಅಥಿತಿ ದಾನಿ ಸೈಂಟ್ ಅಂಟೋನಿ ಕನ್ಸಟ್ರಕ್ಷನ್ ಕಂಪೆನಿಯ ಮೆನೇಜಿಂಗ್ ಡೈರೆಕ್ಟರಲ್ಲಿ ಒಬ್ಬರಾದ ಕಿರಣ್ ಡಿಕೋಸ್ತಾ ಬಹುಮಾನಗಳನ್ನು ವಿತರಿಸಿದರು. ಕಥೊಲಿಕ್ ಸಭಾ ಕುಂದಾಪುರದ ವಲಯ ಸಮಿತಿಯ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ , ಕುಂದಾಪುರ ಘಟಕದ ಕಾರ್ಯದರ್ಶಿ ವಾಲ್ಟರ್ ಡಿಸೋಜಾ, ನಿರ್ಗಮನ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಮೊದಲಾದ ಘಟಕದ ಪದಾಧಿಕಾರಿಗಳು ಉಪಸ್ಥಿರಿದ್ದರು.
ತೀರ್ಪುಗಾರಾಗಿ ಅಶೋಕ್ ಸಾರಂಗ್, ಮುಕಾಂಬಿಕಾ ಉಡುಪ ಮತ್ತು ಪ್ರಶ್ನಾ ಹೆಗ್ಡೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕಥೊಲಿಕ್ ಸಭಾದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು, ಆಶಾ ಕರ್ವಾಲ್ಲೊ ವಿಜೇತರ ಹೆಸರನ್ನು ವಾಚಿಸಿದರು ವಿನಯಾ ಡಿಕೋಸ್ತಾ, ಜೂಲಿಯೆಟ್ ಪಾಯ್ಸ್ ಸ್ಪರ್ಧೆ ನೆಡೆಸುವಲ್ಲಿ ಸಹಕರಿಸಿದರು. ವಿನೋದ್ ಕ್ರಾಸ್ಟೊ ಕಾರ್ಯಕ್ರಮವನ್ನು ನಡೆಸಿಕೊಟ್ಟು ವಂದಿಸಿದರು.
ವಿಜೇತ ಶಾಲ ತಂಡಗಳು
ಸಮೂಹ ಗೀತೆ ವಿಭಾಗದಲ್ಲಿ: ವಿ ಕೆ ಆರ್ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಪ್ರಥಮ, ಹೋಲಿ ರೋಜರಿ ಆಂಗ್ಲಾ ಮಾದ್ಯಮ ಶಾಲೆ, ಕುಂದಾಪುರ ದ್ವೀತಿಯ, ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಶಾಲೆ, ಕುಂದಾಪುರ. ತ್ರತೀಯ ಸ್ಥಾನ ಪಡೆಯಿತು.
ಸಮೂಹ ನ್ರತ್ಯ ವಿಭಾಗದಲ್ಲಿ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ, ಪ್ರಥಮ ಸ್ಥಾನ, ಪಿ.ವಿ.ಎಸ್. ಸರೋಜಿನಿ ಎಮ್.ಕುಶೆ ಸರಕಾರಿ ಪ್ರೌಢ ಶಾಲೆ, ದ್ವೀತಿಯ ಸ್ಥಾನ ಕುಂದಾಪುರ. ವಿ ಕೆ ಆರ್ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ತ್ರತೀಯ ಸ್ಥಾನ ಪಡೆಯಿತು.