ಕೋಲಾರ : ಕಾವ್ಯ ಕಮ್ಮಟ ಶಿಬಿರದ ಪ್ರಯೋಜನ ಪಡೆದು ಕಮ್ಮಟಾರ್ಥಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಕವಿತೆಗಳ ಕೊಡುಗೆ ನೀಡಬೇಕೆಂದು ಕೋಟಗಲ್ಲಿನ ಚಿತ್ರಬಂಧ ಕವಿ ನಾಗಸುಬ್ರಹ್ಮಣ್ಯ ಹೇಳಿದರು.
ತಾಲೂಕಿನ ಚೊಕ್ಕಹಳ್ಳಿ ಚಿನ್ಮಯ ಸಾಂಧೀಪನಿ ಆಶ್ರಮದ ಪದವಿ ಪೂರ್ವ ಕಾಲೇ ಜಿನ ನಳಂದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಎರಡು ದಿನಗಳ ಕಾವ್ಯ ಸಂಭವ ವಿಸ್ಮಯ ಕಾವ್ಯ ಕಮ್ಮಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಮ್ಮಟ ಕುರಿತಂತೆ ಮುಖನುಡಿ ಆಡಿದ ಕಸಾಪ ಗೌರವಾಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿ , ಆಧುನಿಕ , ನವೋದಯ ಸಾಹಿತ್ಯ ಪುನರ್ ಸ್ಥಾಪನೆ ಮತ್ತು ಗುಣಮಟ್ಟದ ಕಾವ್ಯ ರಚನೆಯಾಗಬೇಕು ಎಂಬ ದೂರದೃಷ್ಟಿ ಚಿಂತನೆಯಿಂದ ಕಸಾಪ ಎರಡು ದಿನಗಳ ವಸತಿ ಸಹಿತ ಕಮ್ಮಟವನ್ನು ಆಯೋಜಿಸಿದೆ.
ಈ ಕಮ್ಮಟದಲ್ಲಿ ಕಾವ್ಯ ಕಟ್ಟುವಿಕೆ , ಭಾಷೆ ಬಳಕೆ , ವಾಚನ ಯೋಗ್ಯ ಶ್ರವಣ ಯೋಗ್ಯ ಬರಹ ಮೂಡಲಿ ಎಂಬ ಕಾರಣದಿಂದ ಪರಸ್ಪರ ಗ್ರಹಿಕೆ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆಯೆಂದು ವಿವರಿಸಿದರು.
ಕಮ್ಮಟದ ನೊಗ ಹೊತ್ತ ಕವಿ ಅನುವಾದಕ ಸ.ರಘುನಾಥ್ ಮಾತನಾಡಿ , ಕಾವ್ಯ ಸಂಭವದ ಕಮ್ಮಟವೂ ಸೇರಿದಂತೆ ಇಂತಹ ಯಾವುದೇ ಕಮ್ಮಟ ಕವಿಯನ್ನು ರೂಪಿಸದು , ಕವಿತೆ ಮೂಲಕ ಆಗಬೇಕಿರುವುದನ್ನು ಕವಿಯೇದರ್ಶಿಸುವತ್ತ ತೋರು ಬೆರಳನ್ನು ಚಾಚಲು ಮಾತ್ರವೇ ಸಾಧ್ಯವಿದೆ.
ಕಮ್ಮಟಾರ್ಥಿಗಳು ಬೆರಳನ್ನು ನೋಡದೆ ಬೆರಳ ತುತ್ತ ತುದಿಯನ್ನು ನೋಡ ಬೇಕಿದೆ . ಹಾಗೆ ನೋಡಿದಾಗ ಒಂದು ಬಿಂದು ವಿನಿಂದ ಹೊರಡುವ ಕಿರಣವನ್ನು ಕಾಣಬೇಕಿದೆ , ಆ ಕಿರಣವನ್ನು ಬೆಳಕು ಮಾಡಿ ಕೊಂಡರೆ ಅದರಲ್ಲಿ ಕಾವ್ಯದೆದೆ ಕಂಡೀತು ಎಂದರು.
ಸೂಕ್ಷ್ಮ ಅತಿಥೇಯ ನುಡಿಗಳನ್ನಾಡಿದ ಚಿನ್ಮಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್.ಸಿ.ಮಂಜುನಾಥ್ ಮಾತನಾಡಿ , ಕವಿ ಕೆಲವು ವಿಚಾರಗಳಿಗೆ ಮಾತ್ರವೇ ಸೀಮಿತವಾಗಿರದೆ ಎಲ್ಲವನ್ನು ಎಲ್ಲರನ್ನೂ ಸ್ವೀಕರಿಸುವ ಮುಕ್ತ ಮನ ಸಿನ ಗುಣವನ್ನು ಹೊಂದಿರಬೇಕು , ಸಂಶೋಧನಾ ಮನಸ್ಥಿತಿಯಲ್ಲಿ ಕಾವ್ಯರಚನೆಯಾಗಲಿ , ಶ್ರವಣ ಮನನದ ನಂತರ ಕಾವ್ಯ ರಚನೆ ಮಾಡಿದರೆ ಉತ್ತಮವಾಗಿರುತ್ತದೆ. ಮಹಾಭಾರತದಲ್ಲಿ ಎಲ್ಲಾ ವರ್ಗದಸಾಹಿತ್ಯ ಪ್ರಾಕಾರಗಳಿವೆಯೆಂದರು.
ಚಿನ್ಮಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ , ರಾಧಾಮಣಿ , ಅರುಂಧತಿ , ಜಯಶ್ರೀಯವರಿಂದ ನಾಡಗೀತೆ ಗಾಯನ , ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್.ಗಣೇಶ್ ಸ್ವಾಗತಿಸಿ , ಕೋಶಾಧ್ಯಕ್ಷ ವಿನಯ್ ಗಂಗಾಪುರ ಕಸಾಪ ಅಧ್ಯಕ್ಷ ಎನ್.ಬಿ. ಗೋಪಾಲಗೌಡರ ಸಂದೇಶವನ್ನು ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಶಂಕರೇಗೌಡ ವಂದಿಸಿದರು . ವಿವಿಧ ಗೋಷ್ಠಿಗಳ ಕಮ್ಮಟದಲ್ಲಿ ಭಾಗವಹಿಸಲು ಐವತ್ತು ಮಂದಿ ನೋಂದಣಿ ಮಾಡಿಸಿ ಪಾಲ್ಗೊಂಡಿದ್ದರು.
ಎಚ್.ಎ.ಪುರುಷೋತ್ತಮ್ರಾವ್ , ಪರ ಮೇಶ್ವರ್ , ಸಿ.ಎ.ರ ಮೇಶ್ ಇತರರು ಹಾಜರಿದ್ದರು .