ಜು.11 ರಿಂದ ಪ್ರಾಥಮಿಕ ಶಾಲಾ ಶಿಕ್ಷಕ,ಮುಖ್ಯಶಿಕ್ಷಕ , ಪ್ರೌಢಶಾಲಾ ಶಿಕ್ಷಕರಕೋರಿಕೆ,ಪರಸ್ಪರ ಜಿಲ್ಲೆಯೊಳಗೆ ವರ್ಗಾವಣೆ ಕೌನ್ಸಿಲಿಂಗ್-ಡಿಡಿಪಿಐ ಕೃಷ್ಣಮೂರ್ತಿ

ಕೋಲಾರ:- 2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-2 ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಮತ್ತು ವಿಶೇಷ ಶಿಕ್ಷಕರ ಜಿಲ್ಲೆಯೊಳಗಿನ ಕೋರಿಕೆ, ಪರಸ್ಪರ ವರ್ಗಾವಣೆಗಳು ಹಾಗೂ ನಿರ್ದಿಷ್ಟ ಪಡಿಸಿದ ವೃಂದದ (ಕನಿಷ್ಠ 03 ರಿಂದ 05 ವರ್ಷದೊಳಗಡೆ) ಶಿಕ್ಷಕರ ಗಣಕೀಕೃತ ಕೌನ್ಸಿಲಿಂಗ್ ತಮ್ಮ ಕಚೇರಿಯ ಎಸ್.ಎಸ್.ಎ. ವಿಭಾಗದಲ್ಲಿ ಜು.11 ರಿಂದ ನಡೆಯಲಿದ್ದು, ಅದರ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಜು.11 ರಂದು ಕೋರಿಕೆ ವರ್ಗಾವಣೆಯ ಅಂತಿಮ ಜೇಷ್ಠತಾ ಪಟ್ಟಿಯಂತೆ ಪ್ರಾಥಮಿಕ ಮು.ಶಿ ಪಟ್ಟಿಯಲ್ಲಿನ ಕ್ರ.ಸಂ 1 ರಿಂದ ಅದ್ಯತಾ ಪಟ್ಟಿಯ ಅಂತ್ಯದ ವರೆಗೆ, ಪ್ರಾಥಮಿಕ ದೈಹಿಕ ಶಿಕ್ಷಣ ಶಿಕ್ಷಕರ ಕ್ರ.ಸಂ 1 ರಿಂದ ಅದ್ಯತಾ ಪಟ್ಟಿಯ ಅಂತ್ಯದ ವರೆಗೆ ಹಾಗೂ ಪ್ರಾಥಮಿಕ ಶಿಕ್ಷಕರ ಕ್ರ.ಸಂ 1 ರಿಂದ 600 ರವರೆಗೆ ಹಾಜರಾಗತಕ್ಕದ್ದು ಎಂದು ತಿಳಿಸಿದ್ದಾರೆ. ಜು.12 ರಂದು ಪಟ್ಟಿಯಲ್ಲಿನ ಕ್ರ.ಸಂ 601 ರಿಂದ ಮುಂದುವರೆದು. ಅದ್ಯತಾ ಪಟ್ಟಿಯ ಅಂತ್ಯದ ವರೆಗಿನ ಶಿಕ್ಷಕರು ಹಾಜರಾಗತಕ್ಕದ್ದು ಎಂದು ತಿಳಿಸಿದ್ದಾರೆ.
ಜು.15 ರಂದು ಪೂರ್ವಾಹ್ನ ಪ್ರಾಥಮಿಕ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಕ್ರ.ಸಂ 1 ರಿಂದ ಅದ್ಯತಾ ಪಟ್ಟಿಯ ಅಂತ್ಯದ ವರೆಗೆ ನಡೆಯಲಿದ್ದು, ಜು.17 ರಂದು ಕನಿಷ್ಠ(03 ರಿಂದ 05 ವರ್ಷದೊಳಗಡೆ) ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಕ್ರ.ಸಂ 1 ರಿಂದ ಅದ್ಯತಾ ಪಟ್ಟಿಯ ಅಂತ್ಯದ ವರೆಗಿನ ಕ್ರಮ ಸಂಖ್ಯೆಯ ಅಭ್ಯರ್ಥಿಗಳು ಹಾಜರಾಗತಕ್ಕದ್ದು ಎಂದು ತಿಳಿಸಿದ್ದಾರೆ.
ಪ್ರೌಢಶಾಲಾ ಶಿಕ್ಷಕರು
ಜು.13 ರಿಂದ ಪ್ರಕ್ರಿಯೆ
ಜು.13 ರಂದು ಕನಿಷ್ಠ(03 ರಿಂದ 05 ವರ್ಷದೊಳಗಡೆ) ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಕ್ರ.ಸಂ 1 ರಿಂದ ಅದ್ಯತಾ ಪಟ್ಟಿಯ ಅಂತ್ಯದ ವರೆಗೆ ಹಾಗೂ ಜು.14 ರಂದು ಪ್ರೌಢ ಶಾಲಾ ಸಹ ಶಿಕ್ಷಕರ ಪಟ್ಟಿಯಲ್ಲಿನ ಕ್ರ.ಸಂ 101 ರಿಂದ ಅದ್ಯತಾ ಪಟ್ಟಿಯ ಅಂತ್ಯದ ವರೆಗೆ ಇರುವ ಅಭ್ಯರ್ಥಿಗಳು ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಜು.15 ರಂದು ಅಪರಾಹ್ನ ಪ್ರೌಢ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಕ್ರ.ಸಂ 1 ರಿಂದ ಅದ್ಯತಾ ಪಟ್ಟಿಯ ಅಂತ್ಯದವರೆಗೆ ಹಾಗೂ ಜು.17 ಶುಕ್ರವಾರ ಕನಿಷ್ಠ(03 ರಿಂದ 05 ವರ್ಷದೊಳಗಡೆ) ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಕ್ರ.ಸಂ 1 ರಿಂದ ಅದ್ಯತಾ ಪಟ್ಟಿಯ ಅಂತ್ಯದವರೆಗೆ ಕ್ರಮ ಸಂಖ್ಯೆಯ ಶಿಕ್ಷಕರು ಪಾಲ್ಗೊಳ್ಳಲು ಸೂಚಿಸಿದ್ದಾರೆ.