ಕುಂದಾಪುರ;ಫ್ರೆಂಡ್ಸ್ ಗ್ರೂಪ್ ಖಾರ್ವಿಕೇರಿ ಕುಂದಾಪುರ ಇವರು ಶ್ರೀ ಮಹಾಕಾಳಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಟಿವಿ ಮತ್ತು ಮ್ಯಾಜಿಕ್ ಸ್ಲೇಟ್, ಕ್ರೇಯಾನ್ಸ್, ಡ್ರಾಯಿಂಗ್ ಬುಕ್ ಹಸ್ತಾಂತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಗ್ರೂಪಿನ ಅಧ್ಯಕ್ಷರಾದ ಯೋಗೇಶ್ ಖಾರ್ವಿ ವಹಿಸಿದ್ದರು ಉದ್ಘಾಟಕರಾಗಿ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಅಜಂತ್ ಖಾರ್ವಿ, ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಯೋಜನಾಧಿಕಾರಿ ಶ್ರೀಯುತ ಉಮೇಶ್ ಟಿ, ಮೇಲ್ವಿಚಾರಕಿಯಾದ ಶ್ರೀಮತಿ ಲಲಿತ ,ಪುರಸಭೆ ಸದಸ್ಯರಾದ ಎಚ್ ಎನ್ ಚಂದ್ರಶೇಖರ್ ಖಾರ್ವಿ, ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ದಾಮೋದರ್, ಬಾಲಾ ವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಐಶ್ವರ್ಯ ಮತ್ತು ಅಂಗನವಾಡಿಯ ಕಾರ್ಯಕರ್ತೆ ಶ್ರೀಮತಿ ಪ್ರೇಮ, ಅಂಗನವಾಡಿ ಸಹಾಯಕಿ ಶ್ರೀಮತಿ ಯಮುನ ಹಾಗೂ ಫ್ರೆಂಡ್ಸ್ ಗ್ರೂಪಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು