ಕುಂದಾಪುರ ಮಿಲನ್ ಅನಾಮಿಕ ಮಧ್ಯರೋಗಿಗಳ ಬಾಂಧವ್ಯದ 25 ನೇ ವಾರ್ಷಿಕೋತ್ಸವದ (ಜನವರಿ 4 ಶನಿವಾರ) ಸಂದರ್ಭದಲ್ಲಿ ಕುಂದಾಪುರದ ಮಿಲನ್ ಎ.ಎ. ಕೂಟದ ಸದಸ್ಯರು ಹಟ್ಟಿಅಂಗಡಿ ಸಿದ್ದಿ ವಿನಾಯಕ ದೇವಸ್ಥಾನದ ವಠಾರದಲ್ಲಿ ಅಮಲುಸೇವನೆಯಿಂದ ಮುಕ್ತರಾಗಲು ಸಹಾಯ ಮಾಡುವ ಎಎ ಕಾರ್ಯಕ್ರಮದ ಬಗ್ಗೆ ಮಾಹಿತಿ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಅಮಲು ಸೇವನೆಯಿಂದ ಮುಕ್ತರಾಗಲು ಎಎ ಕಾರ್ಯಕ್ರಮದ ಸಭೆಗಳು ಪರಿಣಾಮದಾಯಕ ರೀತಿಯಲ್ಲಿ ಯಾವುದೇ ಖರ್ಚಿಲ್ಲದೆ, ಅನಾಮಿಕತೆಯನ್ನು ಕಾಪಾಡಿ ಪರಿಹಾರ ನೀಡುತ್ತದೆ. ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನದ ವ್ಯವಸ್ಥಾಪಕ ಟ್ರಸ್ಟಿ ಬಾಲಚಂದ್ರ ಭಟ್ ಇವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಮಾಜಿಕ ಪಿಡುಗು ಅಮಲು ಸೇವನೆಯಿಂದ ಮುಕ್ತರಾಗಿ ಹೊಸ ಜೀವನ ನಡೆಸಲು ಕರೆ ನೀಡಿದರು.
ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಾಜರಿದ್ದು ಕರ್ನಾಟಕಾದ್ಯಂತ ಬಂದಂತ ಸಾರ್ವಜನಿಕರಿಗೆ ಹಾಗು ಸ್ಥಳೀಯರಿಗೆ ಕರೆ ನೀಡಿದರು. ಇಂದಿನ ಕುಟುಂಬಗಳಲ್ಲಿ ಅಮಲು ವ್ಯಸನ ಬೇರೆ ಬೇರೆ ರೀತಿಯಲ್ಲಿದೊಡ್ಡ ಮಟ್ಟದ ದುಷ್ಪರಿಣಾಮ ಬಿಳುತ್ತಿದ್ದು ವಿದ್ಯಾರ್ಥಿಗಳ ಮೇಲೆ ಕೂಡ ಪರಿಣಾಮ ಬೀಳುತ್ತದೆ, ಇದರಿಂದ ಪರಿಹಾರ ಪಡೆಯುವಲ್ಲಿ ಸಮಾಜದಲ್ಲಿ ಬದುಕುತ್ತಿರುವ ನಾವು ಎಚ್ಚರ ವಹಿಸಬೇಕಗಿದೆ ಎಂದು ತಿಳಿಸಿದರು. ಇದಕ್ಕೆ ಸಹಾಯಮಾಡುವ ಎಎ ಕಾರ್ಯಕ್ರಮದ ಸಭೆಗಳು ಪ್ರತಿ ಭಾನುವಾರ ಸಂಜೆ 4 ರಿಂದ 5ಗಂಟೆ ತನಕ ಕುಂದಾಪುರದ ಸೇಂಟ್ ಮೇರಿಸ್ ಶಾಲೆಯಲ್ಲಿ ನಡೆಯುವ ಈ ಸಭೆಗಳಿಗೆ ಅಮಲು ಸೇವನೆಯಿಂದ ಬಳಲುತ್ತಿರುವ ಮನೆಯವರು ಹಾಜರಾಗಿ ಅಮುಲು ಸೇವನೆಯಿಂದ ಬಳಲುತ್ತಿದ್ದವರಿಗೆ ಸಹಾಯ ಮಾಡಬೇಕಾಗಿ ವಿನಂತಿಸಿದರು, ಎಎ ಸಭೆಗಳಿಗೆ ಮಧ್ಯಪಾನದ ಸಮಸ್ಯೆಯುಳ್ಳ ಮನೆಯವರು ಕೂಡ ಭಾಗವಹಿಸಬೇಕಾಗಿ ವಿನಂತಿಸಿದರು.
ಹಲವು ಎ ಎ ಸದಸ್ಯರು ಮದ್ಯಪಾನದ ಸಮಸ್ಯೆಗೆ ಎಎ ಸಭೆಗಳು ಪರಿಣಾಮಕಾರಿಯಾದ ಪರಿಹಾರಗಳನ್ನು ನೀಡುತ್ತವೆ ಎಂದು ತಮ್ಮ ಅನುಭವದ ಮುಖಾಂತರ ತಿಳಿಸಿದರು.
ಹೆಚ್ಚಿನ ವಿವರಗಳಿಗೆ ಕೆಳಗಿನ ಸಂಖ್ಯೆಗೆ ಸಂಪರ್ಕ ಮಾಡಿರಿ
9964280840