

ಕುಂದಾಪುರದ ಮುಖ್ಯ ರಸ್ತೆ ಎ.ವಿ.ಎನ್. ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ “ಜಯ ಹೆಲ್ತ್ ಕೇರ್” ಕೇಂದ್ರದಲ್ಲಿ ಸಾರ್ವಜನಿಕರಿಗಾಗಿ ಉಚಿತ ಥೈರಾಯ್ಡ್ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಮಾರ್ಚ್ 30 ರಂದು ಆದಿತ್ಯವಾರ ಈ ಉಚಿತ ತಪಾಸಣೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ ತನಕ ನಡೆಯಲಿದೆ ಎಂದು ಕನ್ಸಲ್ಟೆಂಟ್ ಸರ್ಜನ್ ಡಾ|| ಸಿದ್ಧಾರ್ಥ ಹೆಗ್ಡೆ ವೈ ತಿಳಿಸಿದ್ದಾರೆ.
ತೀವ್ರ ತೂಕ ನಷ್ಟ ಅಥವಾ ತೂಕ ಹೆಚ್ಚಾಗುವುದು, ಮಲ ವಿಸರ್ಜನಾ ತೊಂದರೆ, ನಿದ್ರಾಹೀನತೆ ಮತ್ತು ಮನಸ್ಥಿತಿ ಬದಲಾವಣೆ, ತಾಪಮಾನ ಸೂಕ್ಷ್ಮತೆ, ಕೂದಲು ಉದುರುವಿಕೆ, ಅಸಹಜ ಮುಟ್ಟಿನ ಅವಧಿ, ಹೃದಯ ತಪ್ತತೆ ಮುಂತಾದ ಆರೋಗ್ಯ ಸಮಸ್ಯೆ ಇರುವವರು ಪರೀಕ್ಷೆ ಮಾಡಿಕೊಳ್ಳಬಹುದು. ರೋಗ ಲಕ್ಷಣಗಳನ್ನು ನಿರ್ಲಕ್ಷಿಸದೇ ತಪಾಸಣೆ ಮಾಡಿಕೊಂಡು ನೆಮ್ಮದಿಯ ಪರಿಹಾರ ಪಡೆಯುವಂತೆ ವೈದ್ಯರು ಮಾಹಿತಿ ನೀಡಿದ್ದಾರೆ. ಮಾರ್ಚ್ 30 ರಂದು ಪರೀಕ್ಷೆ ಮಾಡಿಕೊಳ್ಳ ಬಯಸುವವರು 6360566857 ನಂಬರ್ಗೆ ಪೋನ್ ಮಾಡಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.