

ಕುಂದಾಪುರ: ಗೆಳೆಯರ ಸ್ವಾವಲಂಬನ ಕೇಂದ್ರದ ಆಶ್ರಯದಲ್ಲಿ ಕುಂದಾಪುರದಲ್ಲಿ ದಿನಾಂಕ 25 ಮಾರ್ಚ್ 2024 ರಂದು ಉಚಿತ ಪ್ರಾಥಮಿಕ ಹೊಲಿಗೆ ಶಿಬಿರವನ್ನು ಬೆಳಿಗ್ಗೆ 11:00 ಗಂಟೆಗೆ ಉದ್ಘಾಟಿಸಲಾಗುತ್ತದೆ. ಈ ಶಿಬಿರದಲ್ಲಿ ಪ್ರಾಥಮಿಕ ಹೊಲಿಗೆ, ವಿವಿಧ ವಿನ್ಯಾಸಗಳ ಬಟ್ಟೆ ಚೀಲಗಳ ಹೊಲಿಗೆ, ಹೊಲಿಗೆ ಯಂತ್ರದ ಚಿಕ್ಕ ಪುಟ್ಟ ರಿಪೇರಿ, ಮೋಟಾರ್ ಅಳವಡಿಸಿ ಹೊಲಿಗೆ ಇತ್ಯಾದಿ ಉಚಿತವಾಗಿ ಕಲಿಸಲಾಗುವುದು. ಯಾವುದೇ ವಯೋಮಿತಿ ಇರುವುದಿಲ್ಲ. ಸಮಯ ಬೆಳಿಗ್ಗೆ 10:30 ರಿಂದ 12:30ರ ವರೆಗೆ ಹೆಚ್ಚಿನ ವಿವರಗಳಿಗೆ ಕೇಂದ್ರದ ಅಧ್ಯಕ್ಷರಾದ ವೆಂಕಟೇಶ ಪೈ ಅವರನ್ನು 9224102053 ಮೂಲಕ ಸಂಪರ್ಕಿಸಬಹುದು ಅಥವಾ ರಮಾನಂದ ಭಟ್ ಕಂಪೌಂಡ್, ವಿಜಯಾ ಟೆಕ್ಸ್ಟೈಲ್ ಎದುರು, ರಾಮ ಮಂದಿರ ರೋಡ್, ಹೊಸ ಬಸ್ಸ್ಟ್ಯಾಂಡ್ ಸಮೀಪ, ಕುಂದಾಪುರ ಇಲ್ಲಿ ಸಂಪರ್ಕಿಸಬಹುದು ಎಂದು ಗೆಳೆಯರ ಸ್ವಾವಲಂಬನ ಕೇಂದ್ರ (ರಿ.) ಕುಂದಾಪುರ-ಮುಂಬೈ ಇದರ ಮುಖ್ಯಸ್ಥರಾದ ವೆಂಕಟೇಶ ಪೈ ತಿಳಿಸಿದ್ದು, ಎಲ್ಲರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ವಿನಂತಿಸಿದ್ದಾರೆ.