ಕುಂದಾಪುರ : ಡಿಸೆಂಬರ್ 25 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಇವರ ಸಹಾಯೋಗದೊಂದಿಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಲಾಡಿ ಇವರ ನುರಿತ ವೈದ್ಯಾಧಿಕಾರಿಗಳಿಂದ ಊರ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಪ್ರೊ. ನವೀನ್ ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಕುಂದಾಪುರ ಮತ್ತು ಪ್ರಾಂಶುಪಾಲರು ಆರ್. ಎನ್. ಶೆಟ್ಟಿ ಕಾಲೇಜು ಪದವಿ ಪೂರ್ವ ಕಾಲೇಜು ಕುಂದಾಪುರ ಇವರು ಕಾರ್ಯಕ್ರಮವನ್ನ ಉದ್ಘಾಟಿಸಿ ಶಿಬಿರಕ್ಕೆ ಶುಭ ಹಾರೈಸಿದರು.
ಭಂಡಾರಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಇನ್ನೂರಕ್ಕೂ ಹೆಚ್ಚು ಗ್ರಾಮಸ್ಥರು ಆರೋಗ್ಯ ತಪಾಸಣೆಯ ಉಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ.ಯಶ್,ಕೆ. ಎಂ. ಸಿ ಮಣಿಪಾಲ್, ಡಾ. ರಾಜೇಶ್ ಮಿತ್ರ ಕ್ಲಿನಿಕ್ ಕೋಟೇಶ್ವರ, ಡಾ. ಹೇಮಂತ್ ಭಟ್, ಪ್ರಾಥಮಿಕ ಆರೋಗ್ಯ್ ಕೇಂದ್ರ ಹಾಲಾಡಿ, ಶಂಕರ್ ಶೆಟ್ಟಿ ಲಯನ್ಸ್ ಕ್ಲಬ್ ಕೋಶಾಧಿಕಾರಿ, ಸಂಜೀವ ನಾಯ್ಕ ಮುಖ್ಯಪಾಧ್ಯಾಯರು ಸ. ಹಿ. ಪ್ರಾ. ಶಾಲೆ ಮುದೂರಿ, ರೇಖಾ ಅಂಗನವಾಡಿ ಕಾರ್ಯಕರ್ತೆ, ಗಣೇಶ್ ಎಂ. ಅಧ್ಯಕ್ಷರು ಸ. ಹಿ. ಪ್ರಾ. ಶಾಲೆ ಮುದೂರಿ, ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿರುವಂತಹ ರಾಮಚಂದ್ರ ಆಚಾರ್ ಮತ್ತು ಅರುಣ್. ಎ. ಎಸ್ ಉಪಸ್ಥಿತರಿದ್ದರು.
ಶಿಬಿರಾರ್ಥಿಯರಾದ ಸ್ನೇಹ ಸ್ವಾಗತಿಸಿ,ಸುದೀಪ್ ವಂದಿಸಿ ಮತ್ತು ಸಿಂಚನ ನಿರೂಪಿಸಿ ಕಾರ್ಯಕ್ರಮ ನಿರ್ವಹಿಸಿದರು.