ಶ್ರೀನಿವಾಸಪುರ : ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದು ತಾ.ಪಂ. ಮಾಜಿ ಸದಸ್ಯ ಕೆ.ಕೆ.ಮಂಜುನಾಥ್ ಹೇಳಿದರು.
ತಾಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್ ಹೈಸ್ಕೂಲ್ ಶಾಲಾವರಣದಲ್ಲಿ ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ರವರ ಸಾರಥ್ಯದಲ್ಲಿ ಶುಕ್ರವಾರ ಬೆಂಗಳೂರಿನ ವೈದೇಹಿ ಆಸ್ಪತ್ರೆ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಈ ಹಿಂದಿನ ದಿನಗಳಲ್ಲಿ ನಮ್ಮಲ್ಲಿವಾಂತಿ-ಬೇದಿ, ಟೈಫಾಯಿಡ್, ಕ್ಷಯ, ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು.
ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಮೊಣಕಾಲು ಸಮಸ್ಯೆ , ಮೂತ್ರಕೋಶ ಸಮಸ್ಯೆ, ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತಖಾಯಿಲೆಗಳಾಗಿದ್ದು, ಆದ್ದರಿಂದ ಗ್ರಾಮೀಣ ಭಾಗದ ಸಾರ್ವಜನಿಕರು ಇಂತಹ ಶಿಬಿರಗಳಲ್ಲಿ ಪಾಲ್ಗೂಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಜೀವನವನ್ನು ನಡೆಸುವಂತೆ ಸಲಹೆ ನೀಡಿದರು.
ತಾ.ಪಂ.ಮಾಜಿ ಸದಸ್ಯ ಶ್ಯಾಗತ್ತೂರು ಸುಧಾಕರ್ ಮಾತನಾಡಿ ತಪಾಸಣೆ ಶಿಬಿರದಲ್ಲಿ ಸಮಸ್ಯೆ ಇದ್ದಲ್ಲಿ , ವೈದೇಹಿ ಆಸ್ಪತ್ರೆಯವರೇ ಉಚಿತ ಹೆಚ್ಚಿನ ಚಿಕಿತ್ಸೆ ನೀಡುತ್ತಾರೆ ಇದನ್ನ ಸಾರ್ವಜನಿಕರು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರಗೌಡ , ಪಿಡಿಒ ಕೆ.ಪಿ.ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಮೋಹನ್ಬಾಬು, ಮಾಜಿ ಅಧ್ಯಕ್ಷರಾದ ಕೆ.ಟಿ.ಜಯಣ್ಣ, ಜಿ.ಎನ್.ಕೋದಂಡರಾಮಯ್ಯ, ಸದಸ್ಯರಾದ ನಾಗರಾಜ್, ಅಂಬರೀಶ್, ಶ್ರೀನಾಥ್, ಶೆಟ್ಟಿಹಳ್ಳಿ ಹಾಲು ಡೈರಿ ಅಧ್ಯಕ್ಷ ನಾಗರಾಜ್, ಮುಖಂಡರಾದ ಗಾಜಲಪಲ್ಲಿ ಚಂದ್ರಪ್ಪ, ಹರಳಕುಂಟೆ ಶಶಿಕುಮಾರ್, ರಮೇಶ್ ಬಾಬು, ಸಮಾಜ ಸೇವಕ ಅಂಬರೀಶ್, , ಕೊಳತರೂ ಗ್ರಾ.ಪಂ.ಅಧ್ಯಕ್ಷ ನಾಗಮಣಿವೆಂಕಟರಾಜು, ಅರುಣ್ಕುಮಾರ್, ನಿವೃತ್ತ ಶಿಕ್ಷಕ ಹರಿಕುಮಾರ್, ವೈದೇಹಿ ಆಸ್ಪತ್ರೆಯ ಸಂಯೋಜಕ ಡಾ|| ಪಿ.ಎ.ಲೋಕೇಶ್ಭರಣಿ, ವೈದ್ಯರಾದ ಡಾ|| ಶ್ರಾವಣಿ, ಡಾ|| ದೀಪಕ್ ಕುಮಾರ್, ಡಾ|| ಹೈದರಾಲಿ ಇದ್ದರು.