ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
![](https://jananudi.com/wp-content/uploads/2021/05/1.-h-1024x576.jpg)
ಶ್ರೀನಿವಾಸಪುರ: ಇಲ್ಲಿನ ಇಂದಿರಾ ಕ್ಯಾಂಟೀನ್ನಲ್ಲಿ ನಿರಾಶ್ರಿತರಿಗೆ, ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಉಚಿತ ಆಹಾರ ಪೊಟ್ಟಣಗಳನ್ನು ವಿರಿಸಲಾಯಿತು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದಿದ್ದ ಜನ ಕೋವಿಡ್ ನಿಯಮಾನುಸಾರ ಸಾಲಿನಲ್ಲಿ ನಿಂತು ಆಹಾರದ ಪೊಟ್ಟಣ ಪಡೆದುಕೊಂಡರು.
ಕ್ಯಾಂಟೀನ್ನಲ್ಲಿ ಆಹಾರದ ಪೊಟ್ಟಣ ಪಡೆದವರು ಸಮೀಪದ ಮರದ ಕೆಳಗೆ ಕೋವಿಡ್ ನಿಯಮಾನುಸಾರ ದೂರ ದೂರ ಕುಳಿತು, ಆಹಾರ ಸೇವಿಸಿದರು. ಸ್ಥಳೀಯರು ತಾವು ಪಡೆದುಕೊಂಡ ಪೊಟ್ಟಣಗಳನ್ನು ಮನೆಗಳಿಗೆ ಕೊಂಡೊಯ್ದರು.
ಪುರಸಭೆ ಮುಖ್ಯಾಧಿಕಾರಿ ಡಿ.ಶೇಖರರೆಡ್ಡಿ, ಆರೋಗ್ಯ ನಿರೀಕ್ಷಕ ಪೃಥ್ವಿರಾಜ್, ಸಿಇಒ ರಾಜೇಶ್ವರಿ, ಕಂದಾಯ ನಿರೀಕ್ಷಕ ಶಂಕರ್, ನಾಗೇಶ್, ಸುರೇಶ್, ಸುರೇಶ್ ಕುಮಾರ್ ಇದ್ದರು.