ಉಡುಪಿ,ಬಾರ್ಕುರು ; ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ.ಪ್ರಸಾದ್ ನೇತ್ರಾಲಯ.ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಮತ್ತು ನಮ್ಮ ಸಂಸ್ಥೆ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ ಬಾರ್ಕುರು ಸಹಯೋಗದಿಂದ “ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.ನಮ್ಮ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ಕ್ರಷ್ಣ ಹೆಬ್ಬಾರ್ ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಜೊತೆಯಲ್ಲಿ ನಮ್ಮ ಆಡಳಿತ ಮಂಡಳಿಯ ಐದೂ ಸಂಸ್ಥೆಗಳ ಆಡಳಿತ ಸಂಯೋಜಕರಾದ ಶ್ರೀ ಆರ್ಚೀಬಾಲ್ಡ್ ಪುರ್ಟಾಡೋ, SVVN ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ರಾಜಾರಾಮ ಶೆಟ್ಟಿ, ನಮ್ಮ ಸಂಸ್ಥೆಯ ಸಂಚಾಲಕರಾದ ಶ್ರೀ.ಬಿ.ರಾಮಚಂದ್ರ ಕಾಮತ್, ಶ್ರೀ ಗಣೇಶ್ ಸಾರ್ವಜನಿಕ ಸಂಪರ್ಕಾಧಿಕಾರಿ.ಪ್ರಸಾದ್ ನೇತ್ರಾಲಯ.ಡಾಕ್ಟರ್ ತನ್ವೀ ವೈದ್ಯರು ಪ್ರಸಾದ್ ನೇತ್ರಾಲಯ.ಹಾಗೂ ನಮ್ಮ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.ಶಿಬಿರವು ಬೆಳಿಗ್ಗೆ 9.45 ಕ್ಕೆ ಪ್ರಾರಂಭವಾಗಿ 1 ಘಂಟೆಗೆ ಮುಕ್ತಾಯಗೊಂಡಿತು. SVVN ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಕಿತಾ ಮೇಡಂ ರವರು ಪಾಲ್ಗೊಂಡಿದ್ದರು.
ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ ಬಾರ್ಕುರು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಹಾಗೂ ಹೇರಾಡಿ ಪರಿಸರದ ಸಾರ್ವಜನಿಕರು ಪ್ರಯೋಜನ ಪಡೆದುಕೊಂಡರು.
ವೆಂಕಟೇಶ ಕ್ರಮಧಾರಿ, ಪ್ರಾಂಶುಪಾಲರು, ನೇಶನಲ್ ಐಟಿಐ, ಹೇರಾಡಿ, ಬಾರ್ಕೂರು.