ಕುಂದಾಪುರ ಅ.9: ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ ಬಹಳ ಹೆಸರುವಾಸಿಯಾದ, ಅತ್ಯಂತ ಹೆಚ್ಚು ಹಿಂಬಾಲಿಕರಿರುವ ಫಾ|ನೊಯೆಲ್ ಮಸ್ಕರೆನ್ಹಾಸ್ ಮತ್ತು ಬ್ರದರ್ ಪ್ರಕಾಶ್ ಡಿಸೋಜಾ ಇವರ ಪಂಗಡದಿಂದ ಮೂರು ದಿನಗಳ ಅಧ್ಯಾತ್ಮಿಕ (ಇದೆ ತಿಂಗಳ ತಾರೀಕು 4,5,6 ರಂದು) ಧ್ಯಾನ ಕೂಟ ನಡೆಯಿತು. ಮೊದಲನೇ ದಿವಸವೇ ಈ ಧ್ಯಾನಕೂಟಕ್ಕೆ ಅತ್ಯಧಿಕ ಜನ ಹಾಜರಾಗಿದ್ದರು, ಮೊದಲ ದಿನ ಕೌಟುಂಬಿಕ ಜೀವನ ಮತ್ತು ಇತರ ಅನೇಕಪ್ರಾರ್ಥನ ವಿಧಿಗಳು ನಡೆದವು. ಎರಡನೇ ದಿನ ನಮ್ಮ ಜೀವನದಲ್ಲಿ ಪಾಪಗಳು ಹೇಗೆ ಹುಟ್ಟುತ್ತವೆ, ತಪ್ಪು ಮಡಿದವರನ್ನು ಕ್ಷಮಿಸುವುದರ ಬಗ್ಗೆ ತಿಳುವಳಿಕೆ ನೀಡಲಾಯಿತು, ಹಾಗೇ ಮಕ್ಕಳಿಗೆ ಹಾಗೂ ಯುವಜನರಿಗಾಗಿ ಪ್ರಾರ್ಥನೆಗಳು ನಡೆದವು, ಈ ದಿವಸದಲ್ಲಿ ಮಕ್ಕಳು ಮತ್ತು ಯುವಜನರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದುದು ವೀಶೆಷವಾಗಿತ್ತು. ಮೂರನೆ ದಿವಸ ಅಸ್ವಸ್ತರಿಗೆ, ಅನಾಥರಿಗೆ, ಕೆಟ್ಟ ಅಭ್ಯಾಸಗಳಿದ್ದವರಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಪಾಲನ ಮಂಡಳಿಯವಿಗೆ, ಧಾರ್ಮಿಕ ಸಹೋಹದರ ಸಹೋದರಿಯರಿಗಾಗಿ ಬ್ರದರ್ ಪ್ರಕಾಶ್ ಪ್ರಾರ್ಥನೆಗಳನ್ನು ನಡೇಸಿಕೊಟ್ಟರು. ಪ್ರಾರ್ಥನೆಗಳನ್ನು ಹೇಗೆ ಮಾಡಬೇಕೆಂದು ಫಾ|ನೊಯೆಲ್ ತಿಳಿಸಿಕೊಟ್ಟು ಪ್ರಾರ್ಥನೆಯಲ್ಲಿ ಎಷ್ಟೊಂದು ಶಕ್ತಿಯಿದೆ ಎಂದು ಸಂದೇಶದ ಮೂಲಕ ತಿಳಿಸಿಕೊಟ್ಟರು.
ಮೂರು ದಿವಸಗಳಲ್ಲಿ ಪವಿತ್ರ ಬಲಿದಾನ ನಡೆಯಿತು, ಜೊತೆಗೆ ಪರಮ ಪ್ರಸಾದದ ಆರಾಧನೆ ನಡೆಯಿತು, ಇದರಲ್ಲಿ ಮಾಲ್ಗೊಂಡ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಎಲ್ಲರಿಗೂ ಹರ್ತಪೂರ್ವಕ ವಂದನೆಗಳನ್ನು ಸಲ್ಲಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಸಹಕರಿಸಿದರು. ಈ ಅಧ್ಯಾತ್ಮಿಕ ಧ್ಯಾನಕೂಟಕ್ಕೆ, ತಾಲೂಕು ಆಲ್ಲದ್ದೆ ಹೋರ ಜಿಲ್ಲೆಗಳಿಂದಲೂ ಭಕ್ತಾಧಿಗಳು ಆಗಮಿಸಿದ್ದು, ಇದುವರೆಗೆ ನಡೆದ ಅಧ್ಯಾತ್ಮಿಕ ಧ್ಯಾನಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮ ಸೇರಿ, ಈ ಧ್ಯಾನಕೂಟ ಒಂದು ದಾಖಲೆಯಾಗಿ ಮಾರ್ಪಟ್ಟಿತು.