ಉಡುಪಿ, ಜೂ.3: ಕಳೆದ ಎರಡು ವರ್ಷದಿಂದ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸುತಿದ್ದ ಧರ್ಮಗುರು ವಂ|ಅಶ್ವಿನ್ ಆರಾನ್ನ ಅವರಿಗೆ ‘ಯಾಜಕತ್ವ ಅಹ್ವಾನ’ ಕೇಂದ್ರ ಮತ್ತು ಫೊಂತಿಫಿಕಾಲ್ ಮಿಶಿನರಿ ಮೇಳದ ನಿರ್ದೇಶಕರಾಗಿ ಭಡ್ತಿ ಪಡೆದ ಹಿನ್ನೆಲೆಯಲ್ಲಿ ಬಿಷಪ್ ಹೌಸ್ ಅನುಗ್ರಹದಲ್ಲಿ ಹುದ್ದೆ ಸ್ವೀಕರಿಸುವ ಕಾರ್ಯಕ್ರಮ ಜರುಗಿತು. ಸಂಜೆ 3 ಗಂಟೆಗೆ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಕುಂದಾಪುರದ ಭಕ್ತಾಧಿಗಳು ಸೇರಿ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಅವರ ನೇತ್ರತ್ವದಲ್ಲಿ ಫಾ|ಅಶ್ವಿನ್ ಅವರಿಗಾಗಿ ಪ್ರಾರ್ಥನೆ ನಡೆಸಲಾಯಿತು. ಫಾ|ಅಶ್ವಿನ್ ಭಕ್ತಾಧಿಗಳನ್ನು ಆಶಿರ್ವದಿಸಿ ಕುಂದಾಪುರದ ಜನತೆಗೆ ಕ್ರತ್ಞನತೆಯನ್ನು ಸಲ್ಲಿಸಿದರು. ನಂತರ ಭಕ್ತಾಧಿಗಳು ಅವರ ಜೊತೆ ಸಾಗಿ, ಅವರು ಹುದ್ದೆ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗಿಯಾದರು.
ಬಿಷಪ್ ಹೌಸ್ ಅನುಗ್ರಹದಲ್ಲಿ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರ್ಲ್ ಅ|ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಹುದ್ದೆ ಸ್ವೀಕರಿಸುವ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು, ಈ ಹಿಂದೆ, ಈ ಹುದ್ದೆಯಲ್ಲಿದ್ದ ವಂ|ಅನಿಲ್ ಕರ್ನೆಲೀಯೊ ಹುದ್ದೆಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಂದಾಪುರದ ಅ|ವಂ|ಪಾವ್ಲ್ ರೇಗೊ, ವಂ|ಸ್ಟ್ಯಾನಿ ತಾವ್ರೊ, ವಂ|ರೋಯ್ ಲೋಬೊ, ಕುಂದಾಪುರದ ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷೆ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಭಕ್ತಾಧಿಗಳು ಉಪಸ್ಥಿತರಿದ್ದರು. ಫಾ|ಅಶ್ವಿನ್ ತಮ್ಮ ಅನ್ನಿಸಿಕೆಯನ್ನು ವ್ಯಕ್ತ ಪಡಿಸಿ, ವಂದಿಸಿ, ಆಶಿರ್ವದಿಸಿದರು. ಉಡುಪಿ ಧರ್ಮಪ್ರಾಂತ್ಯದ ಶಿಕ್ಷಣ ಸಂಸ್ಥೆಗಳ ಕಾರ್ಯರರ್ಶಿ ಹಾಗೂ ಅನುಗ್ರಹದ ವ್ಯವಸ್ಥಾಕ ವಂ|ವಿನ್ಸೆಂಟ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.