ಕುಂದಾಪುರ, .2 : ಉಡುಪಿ ಧರ್ಮಪ್ರಾಂತ್ಯದಲ್ಲೆ ಹಿರಿಯ ಇಗರ್ಜಿಯಾದ 454 ವರ್ಷದ ಇತಿಹಾಸ ಇರುವ ಹೋಲಿ ರೋಜರಿ ಚರ್ಚಿನಲ್ಲಿ ತೆನೆ ಹಬ್ಬ ಮೇರಿ ಮಾತೆಯ ಹುಟ್ಟು ಹಬ್ಬದ ಪ್ರಯುಕ್ತ (ಸೆ.8) ತಯಾರಿಗಾಗಿ 9 ದಿನಗಳ ನೊವೆನಾ ಅಗೋಸ್ತ್ 2 ರಂದು ಆರಂಭವಾಗಿದ್ದು, ಇಂದು 2-9-24 ರಂದು 4 ನೇ ದಿನದ ನೊವೆನಾವನ್ನು ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನ ಅರ್ಪಿಸಿದ ತರುವಾಯ ನೊವೆನಾವನ್ನು ಮಕ್ಕಳು ಮತ್ತು ದೊಡ್ಡವರ ಜೊತೆ ಆಚರಿಸಿದರು. ಮಕ್ಕಳು ಮತ್ತು ದೊಡ್ಡವರು ಭಕ್ತಿಯಿಂದ, ಗಾಯನದೊಂದಿಗೆ ಹೂ ಗಳನ್ನು ಬಾಲ ಮೇರಿ ಮಾತೆಗೆ ಅರ್ಪಿಸಿದರು.