ಪಿಜ್ಜಾ ಡೆಲಿವರಿ ಯುವತಿಯ ಮೇಲೆ ನಾಲ್ವರು ಯುವತಿಯರೇ ಮಾರಣಾಂತಿಕ ಹಲ್ಲೆ

JANANUDI.COM NETWORK

ಇಂದೋರ್‌: ಪಿಜ್ಜಾ ಡೆಲಿವರಿ ಯುವತಿಯ ಮೇಲೆ ನಾಲ್ವರು ಯುವತಿಯರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ
ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ.

ನಂದಿನಿ ಯಾದವ್‌ ಎನ್ನುವ ಡೊಮಿನೋಸ್‌ ಮಿಜ್ವಾ ಡೆಲಿವರಿ ಯುವತಿ ಮನೆಯೊಂದಕ್ಕೆ ಪಿಜ್ಜಾ ತಲುಪಿಸಲು ತೆರಳಿದ್ದಾಗ ನಾಲ್ವರು ಯುವತಿಯರು ಕ್ಷುಲ್ಲಕ ಕಾರಣಕ್ಕೆ ಕೈಗಳಿಂದ ಯದ್ವ ತದ್ವ ಹೊಡೆದು ನೆಲಕ್ಕೆ ಉರುಳಿಸಿ ಬೆತ್ತದಿಂದ ಅಮಾನುಷವಾಗಿ ನಯನಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಯನಾ ಕೂಗಾಡಿದರೂ ಅವಳ ಮೇಲೆ ಕನಿಕರ ಪಡದೆ ಹಲ್ಲೆ ಮುಂದುವರಿಸಿದ್ದಾರೆ. ಈ ವೇಳೆ ಯಾರೂ ಕೂಡ ನಯಳ ಸಹಾಯಕ್ಕೆ ಬರಲಿಲ್ಲ.

ಪಿಜ್ಜಾ ಡೆಲಿವರಿ ಕೊಡುವಾಗ ಮಾತಿಗೆ ಮಾತು ಬೆಳೆದು ಯುವತಿಯರು ನಯನಾ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ. ಟ್ವಿಟರ್‌ನಲ್ಲಿ ದೀಪಿಕಾ ಭಾರದ್ವಾಜ ಎನ್ನುವವರು ವಿಡಿಯೊ ಹಂಚಿಕೊಂಡಿದ್ದಾರೆ. ನಂದಿನಿ ಯಾದವ್‌ ಯುವತಿಯರ ವಿರುದ್ಧ ಸ್ಥಳಿಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.