![](https://jananudi.com/wp-content/uploads/2025/02/Screenshot-946-3.png)
![](https://jananudi.com/wp-content/uploads/2025/02/10-srinivaspur-photo-.jpg)
ಶ್ರೀನಿವಾಸಪುರ : ತಾಲೂಕಿನ ಬಂಗವಾದಿ ಗ್ರಾಮದಲ್ಲಿ ಭಾನುವಾರ ಕೆರೆ ಬಳಿ ಗುಂಪು ಕಟ್ಟಿಕೊಂಡು ಕೋಳಿ ಪಂದ್ಯವಾಡುತ್ತಿದ್ದವರ ಮೇಲೆ ದಾಳಿ ನಡೆಸಿ 4 ಜನರನ್ನು ವಶಕ್ಕೆ ಪಡೆದು, ಪಂದ್ಯಕ್ಕೆ ಪಣವಾಗಿ ಇಟ್ಟಿದ್ದ 3200 ರೂ ನಗದು, ಒಂದು ಕೋಳಿ ವಶಕ್ಕೆ ಪಡೆದು 4 ಜನರ ವಿರುದ್ಧ ಪ್ರಕರಣ ದಾಖಲಿಸಿ , ನ್ಯಾಯಂಗ ಬಂದನಕ್ಕೆ ಒಪ್ಪಿಸಲಾಗಿದೆ.
ಎಸ್ಪಿ ನಿಖಿಲ್.ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರವಿಶಂಕರ್ ,ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನಂದಕುಮಾರ್ ನೇತೃತ್ವದಲ್ಲಿ ಪಿಐ ಎಂ.ಬಿ.ಗೊರವನಕೊಳ್ಳ, ಪಿಎಸ್ಐ ಜಯರಾಮ್, ಸಿಬ್ಬಂದಿಗಳಾದ ಸಂತೋಷ್, ಪತ್ರಿ ಬಸಪ್ಪ, ವಾಸು, ಸಂಪತ್ತು ತಂಡ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು