

ಅಮ್ರೇಲಿಃ ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಲಾಕ್ ಹಾಕಿಕೊಂಡು ಕಾರಿನೊಳಗೆ ಆಟವಾಡುತ್ತಿದ್ದ ಮಕ್ಕಳು ಉಸಿರುಗಟ್ಟಿ ಸಾವಿಗೀಡಾದ ಘಟನೆ ಜಿಲ್ಲೆಯ ರಾಂಧಿಯಾ ಗ್ರಾಮದಲ್ಲಿ ನಡೆದಿದೆ. 2 ರಿಂದ 7 ವರ್ಷದೊಳಗಿನ ಈ ಮಕ್ಕಳು ಲಾಕ್ ಹಾಕಿದ ಕಾರಿನೊಳಗೆ ಉಸಿರುಗಟ್ಟಿ ಸತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಕ್ಕಳ ಹೆತ್ತವರು ಭರತ್ ಮಂದಾನಿ ಕೃಷಿ ತೋಟದಲ್ಲಿ ಕೆಲಸ ಮಾಡಲು ಅಂದು ಬೆಳಗ್ಗೆ 7.30ರ ವೇಳೆಗೆ ಹೋಗಿದ್ದರು. ಆಗ ಅವರ ಏಳು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟುಹೋಗಿದ್ದರು. ಅವರಲ್ಲಿ ನಾಲ್ವರು ಮಕ್ಕಳು ಮನೆ ಸಮೀಪ ನಿಲ್ಲಿಸಿದ್ದ ತೋಟದ ಮಾಲೀಕನ ಕಾರಿನೊಳಗೆ ಹೋಗಿ ಆಟವಾಡ ತೊಡಗಿದರು.
ಆದರೆ ಅಂದು ಸಂಜೆ ಮಕ್ಕಳ ಹೆತ್ತವರು ಹಾಗೂ ಮಾಲೀಕರು ವಾಪಸ್ ಬಂದಾಗ ಕಾರಿನೊಳಗೆ ಮಕ್ಕಳ ಮೃತದೇಹಗಳು ಕಂಡುಬಂದವು. ಅಮ್ರೇಲ್ ಪೊಲೀಸ್ ಠಾಣೆಯಲ್ಲಿ ಇದೊಂದು ಅಚಾನಕ್ ಆಗಿ ಸಂಭವಿಸಿದ ಘಟನೆ ಎಂದು ದಾಖಲಾಗಿದ್ದು ತನಿಖೆ ಮುಂದುವರಿದಿದೆ