ಶ್ರೀನಿವಾಸಪುರ: ಯಲ್ದೂರು ಸುತ್ತಮುತ್ತಲಿನ ಗ್ರಾಮಗಳ ಸಮೀಪ ಬೆಳೆಯಲಾಗಿದ್ದ ಶ್ರೀಗಂಧದ ಮರಗಳನ್ನು ಕಳವು ಮಾಡಿದ್ದರೆಂದು ಹೇಳಲಾದ ನಾಲ್ಕು ಮಂದಿ ಆಪಾದಿತರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಚಾಂಪಲ್ಲಿ ನಾರಾಯಣಸ್ವಾಮಿ, ಕಿರುಮಣಿ ವೆಂಕಟರಾಮಪ್ಪ, ಕಿರುಮಣಿ ನಾಗರಾಜ, ಕಟ್ಟಿಗೇನಹಳ್ಳಿ ಅಬ್ದುಲ್ ಮೆಹಬೂಬ್ ಪಾಷ ಬಂಧಿತರು.
ಪಟ್ಟಣದ ಹೊರವಲಯದ ಶಿವಪುರ ಕ್ರಾಸ್ನಲ್ಲಿ ಮೊದಲ ಮೂವರು ಆರೋಪಿಗಳು ಸುಮಾರು ರೂ.2,26,400 ಮೌಲ್ಯದ 11 ಕೆಜಿ 320 ಗ್ರಾಂ ತೂಕದ 23 ಶ್ರೀಗಂಧದ ತುಂಡುಗಳನ್ನು ಅಬ್ದುಲ್ ಮೆಹಬೂಬ್ ಪಾಷಗೆ ಮಾರುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆಪಾದಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಹೆಚ್ಚುವರಿ ರಕ್ಷಣಾಧಿಕಾರಿ ಸಚಿನ್ ಘೋರ್ಪಡೆ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಜಯಶಂಕರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜಿ.ಸಿ.ನಾರಾಯಣಸ್ವಾಮಿ, ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಹಮೀದ್ ಖಾನ್, ಶಫಿವುಲ್ಲಾ, ಸಿಬ್ಬಂದಿ ಮಂಜುನಾಥ್, ಸುರೇಶ್, ವೆಂಕಟಾಚಲಪತಿ, ಎಂ.ರಾಮಚಂದ್ರ, ನಾಗರಾಜ್, ವಿ.ರಾಮಪ್ಪ, ಶ್ರೀನಾಥ್, ಸುಬಾನ್, ರವಿ, ರಿಜ್ವಾನ್, ಚಂದ್ರಶೇಖರ್ ಆರೋಪಿಗಳನ್ನು ಬಂಧಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.