ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ : ಸಂವಿಧಾನ ರಚನೆಯಾಗಿ ಸುಮಾರು 70 ವರ್ಷಗಳು ಕಳೆದರೂ ಇಂದಿಗೂ ಸಮಾಜದಲ್ಲಿ ಅಸ್ಪೃಶ್ಯತೆ , ಅಸಮಾನತೆ ಹಾಗೂ ಅಪಮಾನಗಳು ಶೋಷಿತ ವರ್ಗದವರಿಗೆ ನಿರಂತರವಾಗಿ ನಡೆಯುತ್ತಿವೆ ಇದನ್ನು ಹೋಗಲಾಡಿಸಲು ವಿದ್ಯಾವಂತ ಯುವ ಪೀಳಿಗೆ ಮುಂದಾಗಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌತಮಿ ಮುನಿರಾಜು ಕರೆ ನೀಡಿದರು . ನೆಲವಂಕಿ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ಶಿಲ್ಪಿ ಡಾ // ಬಿ.ಆರ್ . ಅಂಬೇಡ್ಕರ್ ರವರ 130 ನೇ ಜಯಂತಿ ಹಾಗೂ ನಿವೃತ್ತ ಜಲಗಾರರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ವತಂತ್ರ ಪೂರ್ವ ದಲ್ಲಿ ದೇಶದಲ್ಲಿ ಕಂಡ ಅಸಮಾನತೆಯನ್ನು ಹೋಗಲಾಡಿಸಲು ಬಾಲ್ಯ ಜೀವನ ದಿಂದಲೇ ಕನಸು ಕಂಡಿದ್ದ ಅಂಬೇಡ್ಕರ್ ನಿರಂತರ ವಿಧ್ಯಾಭ್ಯಾಸದಲ್ಲಿ ತೊಡಗಿ ಸಂವಿಧಾನ ರಚನೆ ಮಾಡುವ ಮೂಲಕ ಎಲ್ಲಾ ವರ್ಗಗಳಿಗೂ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ , ಮಹಿಳೆಯರಿಗೆ ಸಮಾನ ಅವಕಾಶ , ಮೂಲಭೂತ ಹಕ್ಕುಗಳ ರಕ್ಷಣೆ , ಪ್ರಜಾಪ್ರಭುತ್ವ ವ್ಯವರ್ಸತೆ ಯನ್ನು ಜಾರಿಗೊಳಿಸಿ ಸಾಮಾಜಿಕ , ಆರ್ಥಿಕ ಹಾಗೂ ರಾಜಕೀಯವಾಗಿ ಸರ್ವರು ಸಮಾನ ಎಂಬ ಸಂದೇಶವನ್ನು ನೀಡಿದ ಕಾರಣ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನತೆ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಜೀವಿಸಲು ಸಾಧ್ಯವಿದೆ ಎಂದರು . ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಮೀಳ ಶಿವಣ್ಣ ಮಾತನಾಡಿ ಅಂಬೇಡ್ಕರ್ ಕೇವಲ ಒಂದು ಜಾತಿ ಆಧಾರದ ಮೇಲೆ ಚೌಕಟ್ಟಿನ ಒಳಗೆ ನೋಡುವ ವ್ಯಕ್ತಿಯಲ್ಲಿ ಇವರು ಮಹಾನ್ ಮಾನವತವಾದಿ ಇವರ ವಿಚಾರಧಾರೆಗಳನ್ನು ಭಾರತಲ್ಲಿ ಅಲ್ಲದೆ ಪ್ರಪಂಚವೇ ಅಧ್ಯಯನ ಮಾಡುವ ಮೂಲಕ ಇಂದು ಪ್ರಪಂಚ ಜ್ಞಾನ ದಿನವೆಂದು ಎಲ್ಲಾ ರಾಷ್ಟ್ರಗಳಲ್ಲೂ ಆಚರಣೆ ಮಾಡುವ ಮೂಲಕ ಅಂಬೇಡ್ಕರ್ ರವರನ್ನು ಎಲ್ಲಾ ವರ್ಗಗಳ ದೇವತಾ ಮಾನವನೆಂದು ಬಣ್ಣಿಸಿದರೆ ತಪ್ಪಾಗಲಾರದು ಎಂದರು . ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಲಕ್ಷ್ಮೀ ಮುನಿಯಪ್ಪ , ಮಾಜಿ ಸದಸ್ಯ ಶಿವಣ್ಣ , ಸದಸ್ಯ ಬಾಬುರೆಡ್ಡಿ , ಅಂಬೇಡ್ಕರ್ ರವರ ಜೀವನ ಚರಿತ್ರೆಯ ಬಗ್ಗೆ ಗುಣಗಾನ ಮಾಡಿ ದರು . ಮಂಚಿನೀಳಕೋಟೆ ತಿರುಮಲೇಶ ಕ್ರಾಂತಿ ಗೀತೆ ಹಾಡುವ ಮೂಲಕ ಸಭೆಯನ್ನು ರಂಜಿಸಿದರು . ಪಿ.ಡಿ.ಓ. ಎಂ.ಗೌಸ್‌ಸಾಬ್ ಉಪಾಧ್ಯಕ್ಷ ಮಮತಾ ಸೋಮು , ನ ೦ ಬು ವಾರಿಪಲ್ಲಿ ವಿ.ಎಸ್.ಎಸ್ . ಎನ್ , ಅಧ್ಯಕ್ಷ ಎಂ.ಎನ್.ರೆಡ್ಡಪ್ಪ , ಗ್ರಾ.ಪಂ. ಸದಸ್ಯರಾದ ರವಾಣರೆಡ್ಡಿ , ಎಸ್.ವಿ.ಶಂಕರಪ್ಪ , ರಾಮ ಚಂದ್ರಾರೆಡ್ಡಿ , ಆಂಜೇಯರೆಡ್ಡಿ , ನಂದಿನಿ ವಿನೋದ್ , ರೆಡ್ಡಮ್ಮ . ನಾರಾಯಣ ಸ್ವಾಮಿ , ರಘುನಾಥರೆಡ್ಡಿ , ನಾಗಮ್ಮ ಕೊಂಡಪ್ಪ , ಮಾಜಿ ಅಧ್ಯಕ್ಷ ವೆಂಕಟರವಣಪ್ಪ , ಕೊಪಪವಾರಿಪಲ್ಲಿ ರಾಜ ಇತರರು ಇದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ