ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ವೆಂಕಟಶಿವಾರೆಡ್ಡಿ ರವರಿಂದ ಸೌಹಾರ್ದತ ಇಪ್ತಿಯಾರ್ ಕೂಟ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ಏ. 28 ಲಕ್ಷ್ಮೀಪುರದ ನೂರಾನಿ ಮಸೀದಿಯಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಶಿವಾರೆಡ್ಡಿ ಇಪ್ತಿಯಾರ್ ಕೂಟ ಆಯೋಜಿಸಿ ಹಿಂದು-ಮುಸ್ಲಿಂ ಬಾಂಧವರು ಸಹಭಾಗಿಯಾಗಿ ಆಚರಿಸುವ ಮೂಲಕ ಸೌಹಾರ್ದತೆ ಮೆರದಿದ್ದಾರೆ.
ತಾಲೂಕಿನ ಲಕ್ಷ್ಮೀಪುರ ನೂರಾನಿ ಮಸೀದಿಯಲ್ಲಿ ನಡೆದ ಪವಿತ್ರ ರಂಜಾನ್ ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರಿಗೆ ವಿಶೇಷ ಉಪವಾಸ ಹಾಗೂ ಮಸೀದಿಯಲ್ಲಿ ಇಪ್ತಿಯಾರ್ ಮಾಡಿಸುವ ಮೂಲಕ ಹಿಂದೂ-ಮುಸ್ಲಿಂ ಸೌಹಾರ್ದತೆಯಿಂದ ಇದ್ದೀವಿ ಎಂಬ ಮನೋಭಾವ ಶಿವಾರೆಡ್ಡಿ ತೋರಿಸಿ ಮಾತನಾಡಿದ ಅವರು ಇಸ್ಲಾಂನ 5 ತತ್ವಗಳಲ್ಲಿ ರಂಜಾನ್ ಹಬ್ಬ ಎನ್ನುವುದು ಅತಿ ಪವಿತ್ರವಾದದು ಇದರಲ್ಲಿ ಮುಸ್ಲಿಂ ಬಾಂಧವರು ಅತಿ ಕಠಿಣವಾದ ಉಪವಾಸವನ್ನು ಆಚರಿಸುತ್ತಿದ್ದಾರೆ ನಾವು ದೇವರನ್ನು ಪ್ರಾರ್ಥಿಸುವಂತೆ ಮುಸ್ಲಿಂ ಬಾಂಧವರು ಅಲ್ಲಾ ವು ನನ್ನು ಪ್ರಾರ್ಥಿಸುತ್ತಾರೆ. ಆದರೆ ಎಲ್ಲರ ಬೇಡಿಕೆಗಳು ಒಂದೇ ಇರುತ್ತವೆ ಆದ್ದರಿಂದ ಸೌಹಾರ್ದತೆಯುತವಾಗಿ ಜೀವನ ಮಾಡಿದರೆ ತಪ್ಪಾಗುವುದಿಲ್ಲ ವಿನಾ ಕಾರಣ ಸಮಾಜದಲ್ಲಿ ಅಶಾಂತಿ ಸೃಷ್ಠಿ ಮಾಡುವ ವ್ಯಕ್ತಿಗಳ ಮಾತಿಗೆ ಬೆಲೆ ಕೊಡದೆ ಸಮಾಜದ ಸಾಮರಸ್ಯಕ್ಕಾಗಿ ಜೀವಿಸಬೇಕು ಎಂದು ಕರೆ ನೀಡಿದರು.
ಈ ವೇಳೆಯಲ್ಲಿ ಲಕ್ಷ್ಮೀಪುರ ಗ್ರಾ.ಪಂ. ಅಧ್ಯಕ್ಷ ಚಾಂದ್‍ಪಾಷ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗೌಸ್‍ಸಾಬ್, ಮ್ಯಾಂಗೋ ಮರ್ಚೆಂಟ್ ಅಪ್ಸರ್, ನಿವೃತ್ತ ಶಿಕ್ಷಕ ಲತೀಫ್, ಡಾ|| ಹೈದರ್ ಸಾಬ್ ಇತರರು ಇದ್ದರು.