ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ತೀವ್ರ ವಾಗ್ದಾಳಿ ರಮೇಶ್ ಕುಮಾರ್ ಚರಿತ್ರೆ ಬಹಿರಂಗ ಪಡಿಸುವ ಸಮಯ ಬಂದಿದೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ಕೋಲಾರ : ಶಾಸಕ ರಮೇಶ್ ಕುಮಾರ್ ತಾಳ್ಮೆ ಮೀರಿ ಆಟ ಆಡುತ್ತಿದ್ದಾರೆ . ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿ ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಮೇಲೆ ಒಲವು ತೋರು ತಿದ್ದಾರೆ . ಅವರ ಚರಿತ್ರೆ ಬಹಿರಂಗ ವಾಗಿ ಬಿಚ್ಚಿಡುವ ಸಮಯ ಬಂದಿದೆ ಎಂದು ಮಾಜಿ ಸಂಸದ ಕೆ.ಎಚ್ . ಮುನಿಯಪ್ಪ ಎಚ್ಚರಿಕೆ ನೀಡಿದರು . ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ನನ್ನ ರಾಜಕೀಯ ಜೀವನದಲ್ಲಿ ಕಾಂಗ್ರೆಸ್‌ನಿಂದ ಆರಂಭಿಸಿ 7 ಭಾರಿ ಲೋಕಸಭಾ ಸದಸ್ಯನಾಗಿದ್ದೆನೆ . ರಾಮೇಶ್ ಕುಮಾರ್ ಕಾಂಗ್ರೆಸ್ ನಿಂದ ದೇವೇಗೌಡರ ಜೊತೆಗೆ ಹೋಗಿದ್ದರು . ಮತ್ತೆ ಕಾಂಗ್ರೆಸ್‌ಗೆ ಬಂದು ಅಧಿಕಾರ ಸಿಕ್ಕಿದ್ದರು ತೆವಲಿಗೆ ಹೇಳಿಕೆಗಳನ್ನು ಕೊಡುವು ದನ್ನು ಬಿಟ್ಟಿಲ್ಲ . ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ದೂರಿದರು . ಕಳೆದ ಚುನಾವಣೆಯಲ್ಲಿ ಕಾಂಗ್ರೇಸ್ ಸರಿ ಇಲ್ಲ ಎಂದು ಬಿಜೆಪಿಯನ್ನು ಗೆಲ್ಲಿಸಿದೆಯಲ್ಲ ಈಗಾ ಬಿಜೆಪಿಗೆ ಹೋಗು ಚುನಾವಣೆಗೆ ನಿ ೦ ತಿಕೊ ನಾನು ನೋಡೆ ಬಿಡುತ್ತೇನೆ ಎಂದ ಅವರು ಇನ್ನು ಕಾಂಗ್ರೇಸ್ ಪಕ್ಷದಲ್ಲಿ ಏಕೆ ಇದ್ದೀಯ ? ನಿನಗೆ ಮಾನ ಮಾರ್ಯದೆ ಏನಾದರೂ ಇದೆಯಾ ? ಈಗಾ ಮತ್ತೇ ಕಾಂಗ್ರೇಸ್ ಪಕ್ಷದ ಬಗ್ಗೆ ಮಾತನಾಡುತ್ತೀಯಾ ನಿನಗೆ ಸ್ವಲ್ಪವಾದರೂ ನಾಚಿಕೆಯಾಗಲ್ಲವಾ ಎಂದು ಪ್ರಶ್ನಿಸಿದರು . ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರ ಮೇಲೆ ಒಬ್ಬರನ್ನು ಎತ್ತಿಕೊಟ್ಟು ಆಟ ಆಡುತ್ತಿದ್ದೀಯಾ ? ಶ್ರೀನಿವಾಸ ಪುರಕ್ಕೆ ಬಂದು ಬಹಿರಂಗ ಸಭೆ ಯಲ್ಲಿ ಮಾತನಾಡುತ್ತೇನೆ , ನಿನ್ನ ಬಣ್ಣ ಬಯಲು ಮಾಡುತ್ತೇನೆ . ನಾನು ಮುಳುಗುತ್ತಿದ್ದೇನೆ . ಇದ್ದವರನ್ನು ಜೊತೆಯಲ್ಲಿಯೇ ಮುಳುಗಿಸುತ್ತೇಯಾ , ಕಾಂಗ್ರೇಸ್ ಪಕ್ಷವನ್ನು ಮುಳುಗಿಸಬೇಕೆಂದು ತೀರ್ಮಾನಿಸಿದ್ದಿಯಾ ? ಎಂದು ಪ್ರಶ್ನಿಸಿದ ಅವರು ಕಾಂಗ್ರೇಸ್ ಬಿಜೆಪಿಗೆ ಮಾಡಿದ್ದು ಇತಿಹಾಸದ ಲ್ಲಿಯೇ ಇಲ್ಲ . ಇದರ ಕೀರ್ತಿ ನಿಮಗೆ ಸಲ್ಲುತ್ತದೆ ರಮೇಶ್ ಕುಮಾರ್ ಎಂದು ಗರ್ಜಿಸಿದರು . ಕೊತ್ತೂರು ಮಂಜುನಾಥ್ ಸುಳ್ಳು ಜಾತಿ ಪತ್ರ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದೆ , ಹೈ ಕೋರ್ಟಿನಲ್ಲಿ ಛೀಮಾರಿ ಹಾಕಿಸಿ ಕೊ ೦ ಡಿದ್ದಾಯಿತು . ಹೋದರೂ ಅಷ್ಟೆ ಸತ್ಯಕ್ಕೆ ಗೆಲುವು ಸಿಗುದು . ಮುನಿಯಪ್ಪ ಅವರನ್ನೆ ಸೋಲಿಸುವುದೇ ನನ್ನ ಗುರಿ ಎಂದು ಹೇಳಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿದವರು ಈಗಾ ಕಾಂಗ್ರೇಸ್ ಪಕ್ಷಕ್ಕೆ ಬರಬೇಕೆಂದು ಶತಪ್ರಯತ್ನ ಮಾಡುತ್ತಿದ್ದೀರಾ ನಿಮಗೆ ನಾಚಿಕೆ ಅಗಲ್ಲವೇ ಎಂದು ಟೀಕಿಸಿದರು . ರೈತ ನಾಯಕರನ್ನು ದರಿದ್ರ ಎನ್ನುತ್ತೀಯ ನೀವು ದರಿದ್ರವನ್ನು ತಂದು ಹಾಕಿದ್ದೀರ ಮೊದಲು ಅದನ್ನು ಕ್ಷೇತ್ರದಿಂದ ಹೊರಹಾಕಿ ಸ್ವಚ್ಚ ಪಡೆಸಿ , ನನ್ನ ಬಗ್ಗೆ ಅಧಿಕಾರ ದಲ್ಲಿದ್ದಾಗ ರಸ್ತೆ , ರೈಲು , ಕೈಗಾರಿಕ ‘ ಗಳು , ಉದ್ಯೋಗ ಖಾತ್ರಿ ಸೇರಿ ದಂತೆ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಇತಿಹಾಸ ತಿಳಿಸುತ್ತದೆ ಎಂದರು . ಸ್ವಾತಂತ್ರ್ಯವಾಗಿ ಗೆಲ್ಲುವು ದಾಗಿ ಹೇಳುತ್ತಿರುವಾಗ ಕಾಂಗ್ರೇಸ್ ಪಕ್ಷಕ್ಕೆ ಏಕೆ ಬರುತ್ತಿದ್ದೀಯ ? ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು . ಎಷ್ಟು ಮನೆಗಳನ್ನು ಹಾಳು ಮಾಡಿದ್ದೀಯಾ ? ಎಷ್ಟು ಅಟ್ರಾಸಿಟಿ ಕೇಸ್‌ಗಳು ಹಾಕಿಸಿದ್ದಾರೆ . ನಾನು 7 ಭಾರಿ ಲೋಕಸಭೆ ಚುನಾವಣೆ ಯಲ್ಲಿ ಗೆದ್ದಿದ್ದರೂ ಸಹ ಒಂದು ಬಾರಿಯೂ ಅಟ್ರಾಸಿಟಿ ಕೇಸ್ ಹಾಕಿಸಿಲ್ಲ . 30 ವರ್ಷಗಳ ರಾಜಕೀಯ ಮಾಡಿದ್ದೇನೆ , ಜಗಜೀವನ್ ರಾಮ್ ಮತ್ತು ಶಂಕರನಂದ ಹೊರತು ಪಡೆಸಿದರೆ 7 ಭಾರಿ ಕಾಂಗ್ರೆಸ್ ಪಕ್ಷದಲ್ಲಿಗೆದ್ದಿಲ್ಲ ಎಂದು ಯಾರೂ ಹೆಮ್ಮೆಯಿಂದ ನುಡಿದ ಅವರು ನಾನು ಇರುವವರೆಗೂ ನಿಮ್ಮ ಆಟಗಳು ನಡೆಯುವುದಿಲ್ಲ ಎಂದು ಎಚ್ಚರಿಸಿದರು . ಡಾ.ಸುಧಾಕರ್‌ ಅವರ ಕುಟುಂಬವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಾಗಿತ್ತು , ಅವರ ತಾತ , ಅವರ ತಂದೆ ಚೌಡರೆಡ್ಡಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾಗಿ ದ್ದವರು . ಅಪಪ್ರಚಾರಗಳಿಗೆ ಕಿವಿ ಕೊಟ್ಟು ದೂರ ಸರಿದಿದ್ದಾರೆ ಎಂದ ಅವರು ಇಂದು ಬಿಜೆಪಿಯನ್ನು ಗೆಲ್ಲಿಸಿದವರು ಬಹುತೇಕ ಪಶ್ಚಾತಾಪ ಪಡುತ್ತೀರಿ , ಮುಸ್ಲಿಂ ಭಾಂದವರಿಗೆ ಇಂದು ನೆಮ್ಮದಿ ಶಾಂತಿಗಳು ಇಲ್ಲವಾಗಿದೆ ಎಂದರು . ಮುಂಬರಲಿರುವ ಚುನಾವ ಣೆಯಲ್ಲಿ ಕೋಲಾರ ಮತ್ತು ಚಿಕ್ಕ ಬಳ್ಳಾಪುರ ಸೇರಿದಂತೆ 11 ಕ್ಷೇತ್ರ ಗಳಲ್ಲೂ ಕಾಂಗ್ರೆಸ್ ಶಾಸಕರು ಆಯ್ಕೆಯಾಗುವುದು ಖಚಿತ , ಅಲ್ಪಸಂಖ್ಯಾತರಿಗೆ ಒಂದು ಸ್ಥಾನ , ಹಿಂದುಳಿದ ವರ್ಗದವರಿಗೆ ಒಂದು ಸ್ಥಾನ ಕೊಡಲೇ ಬೇಕು . ಕಳೆದ ಭಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಸೋತರು ಸಹ ನಮಗೆ 9 ಕ್ಷೇತ್ರ ಗಳಲ್ಲಿ ಗೆಲುವು ಸಾಧ್ಯವಾಯಿತು . ಕಾಂಗ್ರೇಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ . ಕಾಂಗ್ರೇಸ್ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಅಲ್ಪಸಂಖ್ಯಾತರು , ದಲಿತರು , ಹಿಂದುಳಿದವರ್ಗದವರು ಇದ್ದಾರೆ ಅವರಿಗೆ ಸಮಾಜಿಕ ನ್ಯಾಯ ನ್ಯಾಯಾ ದೊರಕಿಸಿ ಕೊಡ ಬೇಕಾಗಿದೆ . ಸಮಾನತೆ ಕಲಿಸ ಬೇಕಾಗಿದೆ . ಶಾಂತಿ ಸೌಹಾರ್ದತೆ ಯನ್ನು ಕಾಪಾಡ ಬೇಕಾಗಿದೆ ಎಂದರು . ಜೆಪಿಗೆ ಅಧಿಕಾರದ ಅಮಲು ಏರಿ ಹಾದಿ ತಪ್ಪಿ ನಡೆಯುತ್ತಿದೆ . ಬಿಜೆಪಿಯನ್ನು ಗೆಲ್ಲಿಸಿ ಈಗಾ ಕಾಂಗ್ರೆಸ್ ಕಡೆ ಮುಖ ಮಾಡುತ್ತಿ ರುವರು ಕಾಂಗ್ರೇಸ್ ಸೇರಲು ನಾಲಯಕ್ಕಾಗಿದ್ದಾರೆ . ಇಂಥಹವರಿ ಕಾಂಗ್ರೇಸ್ ಪಕ್ಷಕ್ಕೆ ಅಗತ್ಯವಿಲ್ಲ ಎಂದ ಅವರು ತಾಳ್ಮೆ ಮಿತಿ ಮೀರಿದ ಹಿನ್ನಲೆಯಲ್ಲಿ ತುಟಿ ಬಿಚ್ಚಬೇಕಾಗಿ ಕ ಬಂದಿದೆ . ನನಗೂ ಮಾತನಾಡು ವುದಕ್ಕೆ ಬರುತ್ತದೆ ಎಂದರು ಪ್ರಶ್ನೆಯೊಂದಕ್ಕೆ ಕಾಂಗ್ರೇಸ್ ಪಕ್ಷವು ಸಮುದ್ರ ಇದ್ದಂತೆ , 10 ಮಂದಿ ಅಕಾಂಕ್ಷಿಗಳಿಗೆ ಸಂಘಟನೆ ಮಾಡಲು ತಿಳಿಸಿದ್ದರೂ ಸಹ ಅವರಲ್ಲಿ ಉತ್ತಮರಾದ ಒಬ್ಬರಿಗೆ ಮಾತ್ರ ನೀಡಲು ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು . ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯಶಂಕರ್ , ಶೇಷಾ ಪುರ ಗೋಪಾಲ್ , ರಾಮಲಿಂಗಾ ರೆಡ್ಡಿ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ದಳಸನೂರು ಗೋಪಾಲ ಕೃಷ್ಣ , ಮುನಿರಾಜು , ಮಾಜಿ ಕೆಯುಡಿಎ ಅಧ್ಯಕ್ಷ ಅಥಾವ ಯಲ್ಲಾ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ . ಮಾಜಿ ನಗರಸಭಾ ಸದಸ್ಯ ಲಾಲ್ ಬಹುದ್ದೂರ್ ಶಾಸ್ತ್ರಿ , ಯಲ್ಲಪ್ಪ , ಎಸ್.ಟಿ. ಘಟಕದ ಅಧ್ಯಕ್ಷ ನಾಗರಾಜ್ ಜಯಕೃಷ್ಣ , ಶಿವ ಕುಮಾರ್‌ ಹಾಜರಿದ್ದರು .Attachments area