ಶ್ರೀನಿವಾಸಪುರ : ಈ ಹಿಂದೆ ಬಿಜೆಪಿ ಆಡಳಿತದಲ್ಲಿ ರಾಜ್ಯ ಕೆರೆ, ಕುಂಟೆ ಹಾಗೂ ಡ್ಯಾಮ್ಗಳಲ್ಲಿ ಸದಾ ನೀರು ಹರಿಯುತ್ತಿತ್ತು. ಕೆರೆಗಳ ಕಟ್ಟೆಯ ಮೇಲೆಯೂ ಹರಿಯುತ್ತಿತ್ತು. ಆದರೆ ಇಂದು ಮೂಕ ಜೀವಿಗಳು ನೀರು ಕುಡಿಯಲು ನೀರಿಲ್ಲದೆ ಪರದಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು.
ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತದ ಹೋಳೂರು ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಎನ್ಡಿಎ ಅಭ್ಯರ್ಥಿಯ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸಕಾಲದಲ್ಲಿ ಮಳೆಯಿಲ್ಲ. ಬೆಳೆಯಿಲ್ಲ, ಜನತೆ ಸುಭೀಕ್ಷವಾಗಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬಂದ ಮೇಲೆ ಅಂತೂ ರಾಜ್ಯದ ಜನತೆ ಬರವನ್ನು ಎದುರಿಸುತ್ತಿದ್ದಾರೆ. ರಾಜ್ಯಕ್ಕೆ ಸಿದ್ದರಾಮಯ್ಯನವರು ಒಂದು ರೀತಿ ಐರನ್ಲೆಗ್ ತರಹ ಎಂದರು.
ಈ ಹಿಂದೆ ರಷ್ಯಾ , ಉಕ್ರೇನ್ ನಡುವೆ ನಡೆದ ಯುದ್ದದಲ್ಲಿ ೪೮ ಗಂಟೆಗಳ ಕಾಲ ಯುದ್ದವನ್ನು ನಿಲ್ಲಿಸಿ ನಮ್ಮ ದೇಶದ ೨೩ ಸಾವಿರ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದರು. ಇದೆಲ್ಲವೂ ನರೇಂದ್ರ ಮೋದಿ ಪ್ರದಾನ ಮಂತ್ರಿ ಆದರೆ ಸಾಧ್ಯ ಎಂದರು.ನರೇAದ್ರ ಮೋದಿ ಎಂದರೆ ಎಲ್ಲಾ ಭಯೋತ್ಪಾದಕರಿಗೂ ಭಯ. ಪಾಕಿಸ್ತಾನ್, ಕೆನಡಾ, ಇರಾನ್ ದೇಶಗಳಲ್ಲಿ ೨೩ ಭಯೋತ್ಪದಾಕರು ಅಪರಚಿತ ವ್ಯಕ್ತಿ ಗುಂಡಿಗೆ ಬಲಿಯಾಗಿದ್ದಾರೆ .
ಸಿದ್ದರಾಮಯ್ಯ ನವರು ನರೇಂದ್ರ ಮೋದಿರುವ ಎಲ್ಲಾ ಸುಳ್ಳಿನ ಕಂತೆ ಎಂದು ಹೇಳುತ್ತಾರೆ ಆದರೆ ನರೇಂದ್ರ ಮೋದಿ ರವರು ಜನ್ಧನ್, ಮನೆ ಮನೆಗೆ ಶೌಚಾಲಯ, ಉಚಿತ ಗ್ಯಾಸ್ , ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಸೌಭಾಗ್ಯ ಯೋಜನೆ ಮೂಲಕ ವಿದ್ಯುತ್ ಸಂಪರ್ಕ, ಮನೆ ಮನೆಗೆ ಜಲಜೀವನ್ ಯೋಜನೆ ಅಡಿಯಲ್ಲಿ ಶುದ್ದ ನೀರು, ಕೋವಿಡ್ ಸಮಯದಲ್ಲಿ ಉಚಿತವಾಗಿ ಲಸಿಕೆ , ಗರೀಭ್ ಯೋಜನೆ ಮೂಲಕ ೧೦ ಕೆಜಿ ಅಕ್ಕಿ ಕೊಟ್ಟಿರುವುದು, ಬೀದಿ ಬದಿ ವ್ಯಾಪಾರಿಗಳಿಗೆ ಸಾಲಕೊಟ್ಟಿರುವುದು, ವಿಶ್ವಕರ್ಮ ಯೋಜನೆ ಅಡಿಯಲ್ಲಿ ೧೮ ವಿವಿಧ ಕುಲಕಸಬು ಮಾಡುತ್ತಿರುವವರಿಗೆ ೧೫ ಸಾವಿರ ಸಬ್ಸಡಿಯಲ್ಲಿ ೮೫ ಸಾವಿರ ಸಾಲ, ಆಯುಷ್ಮಾನ್ ಯೋಜನೆಯಲ್ಲಿ ಕುಟುಂಬದವರಿಗೆ ೫ಲಕ್ಷ ನೀಡುತ್ತಿರುವುದು , ಕಿಸಾನ್ ಸನ್ಮಾನ್ ಯೋಜನೆಯಲ್ಲಿ ರೈತರ ಖಾತೆ ಹಣ ಬೀಳುತ್ತಿರುವುದು ಇವೆಲ್ಲವೂ ಸುಳ್ಳ ಎಂದು ಸಿದ್ದರಾಮಯ್ಯ ರವರನ್ನ ಪ್ರಶ್ನಿಸಿದರು?
ಕೋವಿಡ್ ಸಮಯದಲ್ಲಿ ಅಮೇರಿಕಾ ದೇಶವು ಒಂದು ಬಾರಿ ಕೋವಿಡ್ ಟೆಸ್ಟ್ಗೆ ೭ ಸಾವಿರು ಚಾರ್ಜ್ ಮಾಡುತ್ತಿತ್ತು, ಆಲ್ಲದೆ ಒಮ್ಮೆ ಲಸಿಕೆ ಹಾಕಿಸಿಕೊಳ್ಳಲು ೩೪ ಸಾವಿರ, ಹಾಗೆ ೩ ಲಸಿಕೆಗಳಿಗೆ ೧.೨೦ ಸಾವಿರ ರೂಗಳು ಆಗುತ್ತವೆ. ಆದರೆ ನರೇಂದ್ರ ಮೋದಿ ರವರು ದೇಶದ ಜನತೆ ನನ್ನ ಪರಿವಾರವು ಎಂಬ ನಿಟ್ಟಿನಲ್ಲಿ ಜಾತಿ ಬೇದವಿಲ್ಲದೆ ಉಚಿತವಾಗಿ ಲಸಿಕೆಗಳನ್ನು ನೀಡಿ ದೇಶದ ಜನತೆ ಜೀವವನ್ನು ಕಾಪಾಡಿದರು ಎಂದರು.
ವ್ಯಕ್ತಿಗಿಂತ ಪಕ್ಷ ಮುಖ್ಯ , ಪಕ್ಷಕ್ಕಿಂತ ದೇಶ ಮುಖ್ಯ. ಒಂದು ಓಟಿನಿಂದ ಒಂದು ಸೀಟು ಬರಲು ಸಾಧ್ಯ. ಆ ಸೀಟಿನಿಂದ ಒಂದು ಸುಭದ್ರ ಸರ್ಕಾರ ರಚನೆ ಮಾಡಲು ಸಾಧ್ಯ. ನಾವು ಜೆಡಿಎಸ್ ಪಕ್ಷಕ್ಕೆ ಮೂರು ಕ್ಷೇತ್ರದಲ್ಲಿ ಮೂಯ್ಯೀ ಹಾಕುತ್ತೇವೆ ಆದರೆ ಜೆಡಿಎಸ್ ಪಕ್ಷ ೨೫ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮೂಯ್ಯೀ ಹಾಕುತ್ತಾರೆಂದರು. ಆದ್ದರಿಂದ ದೇಶದ ಸುಭ್ರದತೆಗಾಗಿ ಎನ್ಡಿಎ ಆಭ್ಯರ್ಥಿ ಮಲ್ಲೇಶ್ಬಾಬು ರವರನ್ನ ಅತ್ಯಧಿಕ ಮತವನ್ನು ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಸಂಸದ ಮುನಿಸ್ವಾಮಿ ಮಾತನಾಡಿ ಈ ಭಾಗದಲ್ಲಿ ೨೫ ಸಾವಿರ ಎಕರೆಯಷ್ಟು ಭೂಮಿಯನ್ನು ಅರಣ್ಯ ಇಲಾಖೆಯು ರೈತರ ಭೂಮಿಯನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ನಾನು ಅನೇಕ ಹೋರಾಟ ಮಾಡಿದ್ದೇವೆ ಈ ಹೋರಾಟಕ್ಕೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೆಂಬಲ ನೀಡಿದ್ದರು. ದೇಶದ ಹಿತಕ್ಕಾಗಿ ಎನ್ಡಿಎ ಆಭ್ಯರ್ಥಿ ಗೆಲ್ಲುಸುವಂತೆ ಮನವಿ ಮಾಡಿದರು.
ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಮಾತನಾಡಿ ನೀವು ಕಾಲಿಂದನಿAದ ಹೇಳಿದರೆ ನಮ್ಮ ಅಭ್ಯರ್ಥಿ ಕೈನಿಂದ ಮಾಡುವಂತಹ ಸ್ವಭಾವ ಆದ್ದರಿಂದ ಮಲ್ಲೇಶ ಬಾಬು ರವರಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು ನನ್ನನ್ನು ಯಾವ ರೀತಿ ಗೆಲ್ಲಿಸಿದರು ಅದೇ ರೀತಿಯಾಗಿ ಮಲ್ಲೇಶ್ ಬಾಬುರವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಎನ್ಡಿಎ ಅಭ್ಯರ್ಥಿ ಮಲ್ಲೇಶ್ ಬಾಬುರವರು ಮಾತನಾಡಿ ದೇಶಕ್ಕೆ ನರೇಂದ್ರ ಮೋದಿ ರವರು ಮತ್ತೊಮ್ಮೆ ಪ್ರಧಾನಮಂತ್ರಿಗಳು ಆಗಬೇಕೆಂದು ಇಂದಿನ ಚುನಾವಣೆಯು ಕೇವಲ ದೇಶದ ಜನತೆ ನೋಡುತ್ತಿಲ್ಲ ಇಡೀ ಪ್ರಪಂಚವೇ ಕಾದು ನೋಡುತ್ತಿದೆ. ಇಂತಹ ನಾಯಕತ್ವ ದೇಶಕ್ಕೆ ಬೇಕಾಗಿದೆ ಪ್ರಪಂಚದ ನಾಯಕರು ಮೋದಿ ಅವರಿಗೆ ಮತ ಹಾಕಲು ಕೇವಲ ನಮಗೆ ಮಾತ್ರ ಅದೃಷ್ಟವಂತರು . ಕೋಲಾರಕ್ಕೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾಡಬೇಕು ಎಂದು ನನ್ನ ಯೋಜನೆಯಲ್ಲಿ ಇದೆ ಹಾಗೂ ರೈತರಿಗೆ ಉದ್ಯೋಗ ಬೇಕಾದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವ ಸರ್ಕಾರ ಬರಬೇಕು ನಾನು ಈಗಾಗಲೇ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಅತೀ ಕಡಿಮೆ ಅಂತರದಲ್ಲಿ ಸೋತಿದ್ದೇನೆ ಇಂದು ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ಮಾಡಿದರು.
ಯಲ್ದೂರು, ಹೋಳೂರು, ದಳಸನೂರು, ಸುಗುಟೂರು ಗಳಲ್ಲಿ ಅಭ್ಯರ್ಥಿ ಮತಯಾಚನೆ ಮಾಡಿದರು. ಎಂಎಲ್ಸಿ ಗೋವಿಂದರಾಜು, ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ, ಜೆಡಿಎಸ್ ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ತಾಲೂಕು ಬಿಜೆಪಿ ಅಧ್ಯಕ್ಷ ರೋಣೂರು ಚಂದ್ರಶೇಖರ್, ಎಪಿಎಂಸಿ ಮಾಜಿ ನಿರ್ದೇಶಕ ಸುಗುಟೂರು ಚಲಪತಿ,ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಇಂದಿರಾಭವನ್ ರಾಜಣ್ಣ, ಶ್ರೀನಿವಾಸ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗೊತ್ಗುಂಟೆ ಕೃಷ್ಣಾರೆಡ್ಡಿ, ಮುಖಂಡರಾದ ಕೆ.ವಿ.ಶಿವಾರೆಡ್ಡಿ, ಎಸ್.ಬಿ.ಮುನಿವೆಂಕಟಪ್ಪ, ಎಸ್ಎಲ್ಎನ್ ಮಂಜುನಾಥ್, ಗಣೇಶ್, ಬ್ಯಾಲಹಳ್ಳಿ ಶಂಕರೇಗೌಡ, ಕೃಷ್ಣಾರೆಡ್ಡಿ, ಯಲ್ದೂರು ಮಣಿ, ಹೊಸಹಳ್ಳಿ ಬಾಬು, ಷೋರೂಂ ನಾರಾಯಣಸ್ವಾಮಿ , ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಎನ್. ನಾರಾಯಣಗೌಡ ಹಾಗು ಕಾರ್ಯಕರ್ತರು ಇದ್ದರು.