ಶ್ರೀನಿವಾಸಪುರ : ನನಗೆ ಯಾರು ದ್ರೋಹ ಮಾಡಿದ್ದಾರೆ ನನ್ನೊಂದಿಗೆ ಇದ್ದು ನನ್ನ ಬೆನ್ನಿಗೆ ಯಾರು ಚೂರಿ ಹಾಕಿದ್ದಾರೆ ಹಾಗೂ ನನಗೆ ಕತ್ತು ಇಸುಕ್ಕಿದ್ದಾರೆ ಯಾರು ಮಡದಿ ಅಲ್ಲದೆ ಬೇರೆಯವರ ಜೊತೆ ಸಂಸಾರ ನಡೆಸಿದರು ಎಂಬ ಎಲ್ಲಾ ಸರ್ವಂಶಗಳು ನನಗೆ ತಿಳಿದಿದೆ ಎಂದು ಮಾಜಿ ಸಚಿವ ಹಾಗೂ ಮಾಜಿ ವಿಧಾನಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ರವರು ಸಂಕಟದಿಂದ ನುಡಿದರು.
ತಾಲೂಕಿನ ಅಡ್ಡಗಲ್ನ ಸ್ವಗೃಹದಲ್ಲಿ ಭಾನುವಾರ ನಡೆದ ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಆದರೆ ನನಗೆ ೪೫ ವರ್ಷಗಳ ಕಾಲ ನನ್ನನು ದೇವರೆಂದು ಭಾವಿಸಿ ತಂದೆ ಅಣ್ಣ ತಮ್ಮ ಮಗ ಎಂದು ಇತ್ಯಾದಿ ರೀತಿಯಲ್ಲಿ ನನ್ನನ್ನೇ ಕನಸು ಮನಸ್ಸಿನಲ್ಲಿಯೂ ಪ್ರತಿಕ್ಷಣ ಸ್ಮರಿಸುವಂತಹ ನನ್ನ ಜೊತೆ ಕಟ್ಟಾಳುಗಳಾಗಿ ನಿಂತಿರುವ ೮೫ ಸಾವಿರ ಜನರಿಗೆ ನನ್ನ ಪಾದಾಬಿ ವಂದನೆಗಳು ಮಾಡಿ ನಾನು ಅವರ ಋಣದಲ್ಲಿರುವೆನು.
ಆದರೆ ಯುದ್ಧ ಎನ್ನುತ್ತಿದ್ದಾರೆ ಯುದ್ಧದಲ್ಲಿ ಮುನ್ನುಗ್ಗಿ ಸೋತರೆ ವೀರ ಸ್ವರ್ಗವೋ ಗೆದ್ದರೆ ಸಿಂಹಾಸನದ ಅಧಿಪತ್ಯ ಹಿಡಿದು ರಾಜ್ಯಭಾರ ನಡೆಸಬಹುದು ನಾನು ಈ ಎರಡಕ್ಕೂ ಸದಾ ಸಿದ್ಧನಾಗಿ ವೀರ ಸೈನಿಕನಾಗಿರುತ್ತೇನೆ.
ನಾನು ಯಾರಿಗೂ ತಲೆಬಗ್ಗಿಸಿಲ್ಲ ನನಗೆ ದ್ರೋಹ ವಂಚನೆ ಅನ್ಯಾಯ ಮಾಡುವುದು ಲಂಚ ಗೂಳಿ ತನ ನನ್ನ ರಕ್ತದಲ್ಲಿಯೇ ಇಲ್ಲ ಗೌತಮ್ ರವರ ತಂದೆ ತಾಯಿ ಅವರ ಈ ಕ್ಷೇತ್ರದ ಮಗನನ್ನಾಗಿ ನನ್ನ ಕೈಯಲ್ಲಿ ಇಟ್ಟಿದ್ದಾರೆ ಈ ಹುಡುಗ ನಮ್ಮ ಮನೆಯ ಮಗ ಎಂದು ಪರಿಚಯಿಸುತ್ತ ಒಳ್ಳೆಯದನ್ನು ಬಯಸಿ ನಮ್ಮ ಕರ್ತವ್ಯವನ್ನು ನಾವು ಮಾಡಿ ನಮ್ಮ ತಾಯಿಯಾದಂತಹ ಇಂದಿರಾ ಗಾಂಧಿ ರವರ ಋಣವನ್ನು ನಾವು ತೀರಿಸಬೇಕಾಗಿದೆ.
ದೇವರಾಜ್ ಅರಸ್ ರವರ ಋಣವನ್ನು ಸಹ ನಾವು ತೀರಿಸಬೇಕಾಗಿದೆ. ಉಳಿದವರೆಲ್ಲರ ಲೆಕ್ಕ ಚುಕ್ಕ ಮಾಡುವುದು ನನ್ನ ಬಳಿಯೇ ಇಲ್ಲ ನನ್ನ ಲೆಕ್ಕದಲ್ಲಿಯೂ ಇಲ್ಲ ಎಂದು ಹೇಳಿ ಜನರ ಚಪ್ಪಾಳೆಗಳನ್ನು ಹರ್ಷೋದ್ಗಾರದಲ್ಲಿ ಮಗ್ನ ರಾಗುವಂತೆ ಕೆಆರ್ ರಮೇಶ್ ಕುಮಾರ್ ರವರು ಕಾರ್ಯಕರ್ತರನ್ನು ಹುರಿದುಂಬಿಸಿದರು.
ನಾನು ದೇಶದಲ್ಲಿ ರಸೀದಿ ಬುಕ್ಕನ್ನು ಹಿಡಿದು ದೇವಾಲಯ ನಿರ್ಮಾಣ ಮಾಡುತ್ತೇವೆ ಎಂದು ಮತ ಕೇಳುವುದು ಪ್ರಜಾಪ್ರಭುತ್ವದಲ್ಲಿ ವಿಪರ್ಯಾಸವಾಗಿದೆ ಮೋದಿ ರವರು ದೇಶದಲ್ಲಿ ನೂತನವಾಗಿ ಅವರ ಅವಧಿಯಲ್ಲಿ ಕೈಗಾರಿಕೆಗಳ ಪ್ರಾರಂಭವಾಯಿತೆ? ನಿರುದ್ಯೋಗ ಸಮಸ್ಯೆ ನಿವಾರಣೆಯಾಯಿತೇ? ಬಡವರ ಪರ ಧ್ವನಿ ಎತ್ತಲಾಯಿತೆ?ರೈತರ ಪರ ಧ್ವನಿ ಎತ್ತಲಾಯಿತೆ? ಈ ಎಲ್ಲಾ ಪ್ರಶ್ನೆಗಳು ಸೇರಿದಂತೆ ಜನಪರ ಕಾಳಜಿ ಉಳ್ಳ ಸರ್ಕಾರವಾದರೂ ನಡೆಯಿತೆ ಎಂದರೆ ಎಲ್ಲದಕ್ಕೂ ಶೂನ್ಯ. .
ನಮ್ಮ ಮೋದಿ ದೊರೆಯವರು ಶ್ರೀ ರಾಮನ ಜಪ ಮಾಡಿ ಮತ ಕೇಳಲು ಯಾವ ರೀತಿಯಾಗಿ ಅರ್ಹರೋ ನನಗೆ ತಿಳಿಯುತ್ತಿಲ್ಲ. ಭಾರತ ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರ ಜನಪರ ಯೋಜನೆಗಳನ್ನು ತರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಕೆಆರ್ ರಮೇಶ್ ಕುಮಾರ್ ರವರು ಕರೆ ನೀಡಿದ್ದಾರೆ.
ಇದೇ ತಿಂಗಳ ೧೩ರ ರಂದು ೧೧ ಗಂಟೆಗೆ ಶ್ರೀನಿವಾಸಪುರ ಪಟ್ಟಣದ ಮ್ಯಾಂಗೋ ಮಂಡಿಯಲ್ಲಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದ್ದು ಎಲ್ಲಾ ಕಾರ್ಯಕರ್ತರು ತಪ್ಪದೇ ಸಭೆಗೆ ಭಾಗವಹಿಸಬೇಕೆಂದು ಕರೆ ನೀಡಿದರು.
ನಾನು ನನ್ನ ಸ್ವಾರ್ಥಕ್ಕಾಗಿ ಏನು ಮಾಡಿಕೊಂಡಿರುವುದಿಲ್ಲ, ನನ್ನ ಮತದಾರರಿಗಾಗಿ ನನ್ನ ದೇಹದಲ್ಲಿನ ಶಕ್ತಿಯನ್ನು ನಿಮಗಾಗಿ ದಾರೆ ಎರೆದಿದ್ದೇನೆ ಎಂದರು.
ಅಭ್ಯರ್ಥಿ ಅಲ್ಲಿ , ಇಲ್ಲಿ ಬರಬೇಕು ಎಂದು ಒತ್ತಡ ಹಾಕಬೇಡಿ, ನಾನೇ ಅಭ್ಯರ್ಥಿ ಎಂದು ತಿಳಿದು ನನ್ನ ಬಳಿ ಬನ್ನಿ ಎಂದರು.ಅಲ್ಲದೆ ನಾನು ಯಾವುದೇ ಊರಿಗೆ ಬಂದು ಮಾತಯಾಚನೆ ಮಾಡುವುದಿಲ್ಲ ನಿಮಗೆ ನೀತಿ . ನಿಜಾಯಿತಿ ಇದ್ದರೆ, ದ್ರೋಹದ ಪ್ರಾಯಿಶ್ಚಿತ್ತ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಹಾಕುವಂತೆ ಕಾರ್ಯಕರ್ತರಿಗೆ ಸೂಚಿಸಿದರು.
ಎಂಎಲ್ಸಿ ಎಂ.ಎಲ್.ಅನಿಲ್ಕುಮಾರ್ ಮಾತನಾಡಿ ತಮ್ಮ ಕುಟುಂಬದ ಏಳಿಗೆಗಾಗಿ ಜೆಡಿಎಸ್ ಪಕ್ಷ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಜ್ಯಾತೀತ ಹೆಸರಿನಲ್ಲಿ ಪಕ್ಷ ಕಟ್ಟಿ ಕೋಮುವಾದಿ ಪಕ್ಷದ ಜೊತೆಗೆ ಮೈತ್ರಿ ಜೆಡಿಎಸ್ ಪಕ್ಷವು ಮೈತ್ರಿ ಮಾಡಿಕೊಂಡಿದೆ ಎಂದು ಟೀಕಿಸಿದರು.ಜೆಡಿಎಸ್ ಪಕ್ಷವು ಮೈತ್ರಿ ಹೆಸರಿನಲ್ಲಿ ೪ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ೩ ಕ್ಷೇತ್ರಗಳಲ್ಲಿ ಕುಟುಂಬಸ್ಥರೆ ಅಭ್ಯರ್ಥಿಗಳಾಗಿತರುತ್ತಾರೆ. ಕೋಲಾರವು ಮೀಸಲು ಕ್ಷೇತ್ರವಾದ್ದರಿಂದ ಬೇರೆಯವರಿಗೆ ಬಿಟ್ಟುಕೊಟ್ಟಿದೆ ಇಲ್ಲದಿದ್ದರೆ ಆ ಕ್ಷೇತ್ರವನ್ನು ತಮ್ಮ ಕುಟುಂಬದ ಸದಸ್ಯರಿಗೆ ಸೀಟು ಪಡೆಯುತ್ತಿದ್ದರೊ ಏನು ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿ ನಮ್ಮ ಭವಿಷ್ಯವನ್ನು ನಾವು ಕಟ್ಟಿಕೊಳ್ಳುವದಕ್ಕೆ ಸಂವಿಧಾನದಲ್ಲಿ ಅವಕಾವಿದ್ದು , ಈ ಸಮಯವು ಈಗ ಬಂದಿದೆ ಈ ಸಮಯವನ್ನು ನಾವು ಕಾಂಗ್ರೆಸ್ ಪಕ್ಷವನ್ನ ಕೇಂದ್ರದಲ್ಲಿ ಆಡಳಿತಕ್ಕೆ ತರೋಣ ಎಂದುಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾದ ಆರ್. ಜಿ ನರಸಿಂಹಯ್ಯ, ಕೆಕೆ. ಮಂಜುನಾಥ್ ರೆಡ್ಡಿ, ಕೋಚಿ ಮುಲ್.ಮಾಜಿ ಅಧ್ಯಕ್ಷ ಕೊಂಡಸಂದ್ರ ವೆಂಕಟಶಿವಾರೆಡ್ಡಿ, ಕಾಂಗ್ರೆಸ್ ಎಸ್ ಸಿ ಘಟಕ ದ ಜಿಲ್ಲಾ ಉಪಾಧ್ಯಕ್ಷ ಪಣಸ ಮಾಕನಹಳ್ಳಿ ವೈ.ವಿ ನರಸಿಂಹಮೂರ್ತಿ ,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಅಧ್ಯಕ್ಷ ಅಕ್ಬರ್ ಷರೀಪ್, ಗೌನಿಪಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಕ್ಷು ಸಾಬ್, ಕೂರಿಗೆಪಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ್,ರಾಯಲ್ಪಾಡ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್, ದಳಸನೂರು ಗ್ರಾ.ಪಂ ಉಪಾಧ್ಯಕ್ಷೆ ಉಮಾದೇವಿ , ಮುಖಂಡ ಸಂಜಯ್ರೆಡ್ಡಿ, ನಾಗನಾಳ ಸೋಮಣ್ಣ, ಜೆಸಿಬಿ.ಶಂಕರ,ಎಲ್. ವಿ. ಗೋವಿಂದಪ್ಪ, ಜನ್ನಘಟ್ಟ ಸತೀಶ್, ಹಾಗೂ ಕಾರ್ಯಕರ್ತರು ಇದ್ದರು.