JANANUDI NEWS NETWORK (EDITOR : BERNARD D’COSTA)

ಜಪಾನ್‌ನ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಅಬೆ ಅವರು ನಾರಾ ನಗರದಲ್ಲಿ ಸುಮಾರು ಗುರುವಾರ ಭಾರತೀಯ ಕಾಲಮಾನ 10:30 ಗಂಟೆಗೆ ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಸುಮಾರು ಗುಂಡು ಹಾರಿಸಲಾಗಿತ್ತು.
ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಜಪಾನ್‌ನ ಮಾಜಿ ಪ್ರಧಾನಿ ಶ್ರೀ ಶಿಂಜೊ ಅಬೆ ಅವರು ನಿಧಾನ ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ ಅವರಿಗೆ 67 ವರ್ಷ ಪ್ರಾಯವಾಗಿತ್ತು.
ಪಬ್ಲಿಕ್ ಬ್ರಾಡ್‌ಕಾಸ್ಟರ್ ಎನ್‌ಎಚ್‌ಕೆ ಪ್ರಕಾರ, ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಶುಕ್ರವಾರ ದಕ್ಷಿಣ ಜಪಾನ್‌ನಲ್ಲಿ ಪ್ರಚಾರ ಮಾಡುವಾಗ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದರು.
ಅಬೆಯ ಮೇಲೆ ದಾಳಿ ಮಾಡಿದ 41 ವರ್ಷದ ತೆತ್ಸುಯಾ ಯಮಗಾಮಿ ಎಂಬಾತಾನನ್ನು ಪೋಲಿಸರು ಬಂಧಿಸಿದ್ದಾರೆ.



ಚಿತ್ರಗಳು ಎರವಲು