ಕೋಲಾರ, ಸೆ.17: ಜಿಲ್ಲಾದ್ಯಂತ ಆಕ್ರಮ ಸಾಗುವಳಿ ಚೀಟಿ ರದ್ದು ಮಾಡಿ ಪಿ.ನಂಬರ್ ದುರಸ್ತಿ ಮಾಡಲು ವಿಶೇಷ ತಂಡ ರಚನೆ ಮಾಡಿ ಹತ್ತಾರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ರೈತರ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ರೈತ ಸಂಘದಿಂದ ಉಪ ವಿಭಾಗಧಿಕಾರಿ ಡಾ.ಮೈತ್ರಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಸೆ.2 ರಿಂದ ಚಾಲನೆ ಆಗಿರುವ ಕಂದಾಯ ಸಚಿವರ ಪಿ. ನಂಬರ್ ದುರಸ್ತಿ ಆದೇಶ ರೈತರಿಗೆ ಶಾಪವೇ? ವರದಾನವೇ! ಇಲ್ಲವೇ ರೈತರ ಹೆಸರಿನಲ್ಲಿ ಆಕ್ರಮ ದರಕಾಸ್ತ್ ಕಮಿಟಿ ದಾಖಲೆಗಳನ್ನು ಸೃಷ್ಠಿ ಮಾಡಿ ನಕಲಿ ಸಾಗುವಳಿ ಪಡೆದು ಸಾವಿರಾರು ಎಕರೆ ಸರ್ಕಾರಿ ಜಮೀನನ್ನು ಕಬಳಿಸಿರುವ ಬೆಂಗಳೂರು ಭೂಗಳ್ಳರಿಗೆ ಚಿನ್ನದ ಮೊಟ್ಟೆಯಿಡುವ ದಂದೆಯಾಗಿದೆಯೇ ಎಂದು ಉಪವಿಭಾಗಧಿಕಾರಿಗಳಿಗೆ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಪ್ರಶ್ನೆ ಮಾಡಿದರು.
ಐದಾರು ದಶಕಗಳಿಂದ ಕಾನೂನು ಬದ್ದವಾಗಿ ಮಂಜೂರಾಗಿರುವ ಸರ್ಕಾರಿ ಗೋಮಾಳ ಜಮೀನಿನ ಪಿ. ನಂಬರ್ ದುರಸ್ತಿಯಾಗದೆ ಸರ್ಕಾರದ ಆದೇಶದಂತೆ ಮಾರಾಟ ಮಾಡಲಾಗದೆ ಬ್ಯಾಂಕ್ನಲ್ಲಿ ಸಾಲ ಪಡೆಯಲಾಗದೆ ಅಧಿಕಾರಿಗಳಿಗೆ ಲಕ್ಷ ಲಕ್ಷ ಲಂಚ ನೀಡದ ಬಡ ರೈತರ ಆಸೆಗೆ ಕಂದಾಯ ಮಂತ್ರಿಗಳ ಆಧೇಶ ಜೀವವಿಲ್ಲದ ದೇಹವಾಗಿದ್ದ ರೈತನ ಕಣ್ಣಿನಲ್ಲಿ ಮತ್ತೆ ಪಿ.ನಂಬರ್ ದುರಸ್ತಿ ಆಗುತ್ತದೆ ಎಂಬ ಕಾತುರದಲ್ಲಿರುವ ರೈತರ ಆಸೆ ಈಡೇರುವುದೇ? ಹದಗೆಟ್ಟಿರುವ ವ್ಯವಸ್ಥೆಯಲ್ಲಿ ಎಂದು ಸಂಶಯ ವ್ಯಕ್ತಪಡಿಸಿದರು.
ಮಾಲೂರಿನ ಸಾವಿರಾರು ಎಕರೆ ಮುಳಬಾಗಿಲಿನ ಕಿರಣಮೆಟ್ಟಿ ದೇವರಾಯ ಸಮುದ್ರ ಕಂದಾಯ ವ್ಯಾಪ್ತಿಯ ಅಕ್ರಮ ಭೂ ಮಾಪಿಯ 20 ಸಾವಿರ ಕೋಟಿಗೂ ಅಧಿಕ ವಹಿವಾಟು ಭೂ ಗಳ್ಳರ ಜೊತೆ ತಾಲ್ಲೂಕಾಡಳಿತಗಳು ರಾಜಾರೋಷವಾಗಿ ನಡೆಯುತ್ತಿದೆ. ಸರ್ಕಾರಿ ಜಮೀನು ಸ್ಥಳಿಯ ವ್ಯಕ್ತಿಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿ ಮೇಲೆ ಕಣ್ಣಿಟ್ಟು, ರಾತ್ರೋ ರಾತ್ರಿ ಹತ್ತಾರು ಜೆ.ಸಿ.ಬಿಗಳನ್ನು ಇಟ್ಟುಕೊಂಡು ಕಲ್ಲು ಬಂಡೆಗಳ ಜಮೀನನ್ನು ಮಣ್ಣು ಮುಚ್ಚಿ ನಕಲಿ ದಾಖಲೆ ಸೃಷ್ಠಿ ಮಾಡಿ ಕಾಂಪೌಂಡ್ ನಿರ್ಮಿಸಿ ಕೋಟಿ ಲೆಕ್ಕದಲ್ಲಿ ಭೂಗಳ್ಳರಿಗೆ ಮಾರಾಟ ಮಾಡುತ್ತಿದ್ದರೂ ಕಂದಾಯ ಅಧಿಕಾರಿಗಳು ಮೌನವಾಗಿರುವ ಉದ್ದೇಶ ಏನೂ ಎಂದು ಪ್ರಶ್ನೆ ಮಾಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಮುಳಬಾಗಿಲಿನಲ್ಲಿ 2 ಸಾವಿರ, ಮಾಲೂರಿನಲ್ಲಿ 3 ಸಾವಿರ, ಕೋಲಾರ ಮತ್ತಿತರ ತಾಲ್ಲೂಕುಗಳಲ್ಲಿ 15 ಸಾವಿರ ಅಕ್ರಮ ಸಾಗುವಳಿ ಚೀಟಿಗಳು ವಿತರಣೆ ಆಗಿರುವ ಬಗ್ಗೆ ಆಯಾ ತಾಲ್ಲೂಕಿನ ಶಾಸಕರೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಜಿಲ್ಲಾಡಳಿತ ಏಕೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡು ಆಕ್ರಮ ಸಾಗುವಳಿ ರದ್ದು ಮಾಡಿ ಸಾವಿರಾರು ಎಕರೆ ಸರ್ಕಾರಿ ಜಮೀನನ್ನು ಉಳಿಸಬಾರದೆಂದು ಸಲಹೆ ನೀಡಿದರು.
24 ಘಂಟೆಯಲ್ಲಿ ಜಿಲ್ಲಾದ್ಯಂತ ಆಕ್ರಮ ಸಾಗುವಳಿ ಚೀಟಿ ರದ್ದು ಮಾಡಿ ಪಿ.ನಂಬರ್ ದುರಸ್ತಿ ಮಾಡಲು ವಿಶೇಷ ತಂಡ ರಚನೆ ಮಾಡಿ ಹತ್ತಾರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ರೈತರ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಮನವಿ ನೀಡಿ ಒತ್ತಾಯಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಧಿಕಾರಿಗಳಾದ ಡಾ.ಮೈತ್ರಿರವರು ಪಿ.ನಂಬರ್ ದುರಸ್ತಿಯಲ್ಲಿ ಆಕ್ರಮ ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಮಾಡಿ ಆಕ್ರಮ ಪಿ.ನಂಬರ್ ತನಿಖೆ ಮಾಡಿ ರದ್ದು ಮಾಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಮಂಗಸಂದ್ರ ತಿಮ್ಮಣ್ಣ, ಗೀರೀಶ್, ಪುತ್ತೇರಿ ರಾಜು, ಮುಂತಾದವರಿದ್ದರು.