ಕೋಲಾರ, ಆ.11: ಅರಣ್ಯ ಭೂಮಿ ಎರಡನೇ ಒತ್ತುವರಿ ಕಾರ್ಯಚಾರಣೆ ಮುಂದುವರೆಸಿ ಬಲಾಡ್ಯ ಶ್ರೀಮಂತರಿಗೂ ಬಡವರಿಗೂ ಕಾನೂನು ಒಂದೇ ಎಂದು ಸಾಭೀತುಪಡಿಸಬೇಕೆಂದು ರೈತ ಸಂಘದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲುರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಆಕ್ರಮ ದರಕಾಸ್ತ್ ಕಮಿಟಿ ಮೂಲಕ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ 30 -40 ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಮಂಜೂರಾತಿ ನೆಪದಲ್ಲಿ 3200 ಎಕರೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾತ್ರ ಒತ್ತುವರಿ ಕಾರ್ಯಚಾರಣೆ ಮಾಡುವ ಮುಖಾಂತರ ಉಪ್ಪು ತಿಂದವರು ನೀರು ಕುಡಿಯಲೇಬೇಕೆಂಬ ಗಾದೆಯಂತೆ ಮೊದಲನೇ ಹಂತದಲ್ಲಿ 1550 ಎಕರೆ ಅರಣ್ಯ ಭೂಮಿಯನ್ನು ಬಲಾಡ್ಯ ಭೂಗಳ್ಳರಿಂದ ವಶಪಡಿಸಕೊಂಡ ಅರಣ್ಯ ಅಧಿಕಾರಿಗಳಿಗೆ ರೈತ ಸಂಘದಿಂದ ಅಭಿನಂದನೆ ಸಲ್ಲಿಸಿ ಎರಡೇ ಹಂತದ ಕಾರ್ಯಾಚಾರಣೆ ಪ್ರಾರಂಭ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಅರಣ್ಯ ಒತ್ತುವರಿ ತೆರೆವುಗೊಳಿಸುತ್ತಿರುವ ಅಧಿಕಾರಿಗಳ ವಿರುದ್ದ ತನ್ನ ಪ್ರತಾಪವನ್ನು ತೋರಿಸುವ ಜೊತೆಗೆ ಬಲಾಡ್ಯ ಭೂಗಳ್ಳರ ಪರ ನಿಂತು ದೌರ್ಜನ್ಯ ದಬ್ಬಾಳಿಕೆ ಮಾಡುತ್ತಿರುವ ಸಂಸದರ ಒತ್ತಡಕ್ಕೆ ಅರಣ್ಯ ಅಧಿಕಾರಿಗಳು ಮಣಿದಿದ್ದೀರಾ ಎಂದು ಪ್ರಶ್ನೆ ಮಾಡಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ಅರಣ್ಯ ಅಧಿಕಾರಿಗಳು ಶ್ರೀಮಂತರಿಗೆ ಒಂದೇ ಕಾನೂನು ಪಾಲನೆ ಮಾಡಬೇಕು ಅದನ್ನು ಬಿಟ್ಟು ಸಣ್ಣ ಪುಟ್ಟ ರೈತರ ಭೂ ಒತ್ತುವರಿ ತೆರೆವುಗೊಳಿಸಿ ನೂರಾರು ಎಕರೆ ಒತ್ತುವರಿದಾರರ ಒತ್ತುವರಿ ತೆರೆವುಗೊಳಿಸದೆ ದಿನಗಳು ಕಳೆಯುವುದು ಸಾರ್ವಜನಿಕರು ಅರಣ್ಯ ಇಲಾಖೆಯ ಮೇಲಿಟ್ಟಿರುವ ಕಳೆದು ಕೊಳ್ಳುವಂತಾಗುತ್ತದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಹೆಚ್ಚಿನ ಪೋಲಿಸ್ ಭದ್ರತೆ ಪಡೆದು ಎರಡನೇ ಅರಣ್ಯ ಒತ್ತುವರಿ ಕಾರ್ಯಚಾರಣೆ ಪ್ರಾರಂಭ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅರಣ್ಯ ಉಪ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲು ರವರು ಅರಣ್ಯ ಭೂಮಿ ನನ್ನ ಜನ್ಮ ಕೊಟ್ಟ ತಾಯಿಗೆ ಸಮಾನ ಅರಣ್ಯ ಭೂಮಿ ಉಳಿವಿಗಾಗಿ ನನ್ನ ಪ್ರಾಣವನ್ನು ಬೇಕಾದರೂ ಒತ್ತೆ ಇಡುತ್ತೇನೆಹೊರತು ಒಂದಿಚು ಅರಣ್ಯ ಭೂಮಿ ಭೂಗಳ್ಳರ ಪಾಲಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಮನವಿ ನೀಡುವಾಗ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ರಾ.ಪ್ರ. ಕಾರ್ಯದರ್ಶಿ ಫಾರೂಖ್ ಪಾಷ, ಜುಬೇರ್‍ಪಾಷ, ಬಂಗಾರಿ ಮಂಜು, ಭಾಸ್ಕರ್, ವಿಜಯ್ ಪಾಲ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ರಾಮಸಾಗರ ವೇಣು, ಸುರೇಶ್‍ಬಾಬು, ಕದಿರಿನತ್ತ ಅಪ್ಪೋಜಿರಾವ್, ಯಾರಂಘಟ್ಟ ಗಿರೀಶ್, ಹೆಬ್ಬಣಿ ಆನಂದರೆಡ್ಡಿ, ಮಂಗಸಂದ್ರ ನರಸಿಂಹಯ್ಯ, ತೆರ್ನಹಳ್ಳಿ ಆಂಜಿನಪ್ಪ ಸುಪ್ರೀಂಚಲ, ವಿನುತ್‍ಗೌಡ, ಶೈಲಜ, ರಾಧಮ್ಮ, ಚೌಡಮ್ಮ, ಶೋಭ, ಮುಂತಾದವರಿದ್ದರು.