ಮಾನವ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡಿದ ಪರಿಣಾಮ ಕಾಲ – ಕಾಲಕ್ಕೆ ಮಳೆಯಾಗಿದೆ:ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ : ಮಾನವ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡಿದ ಪರಿಣಾಮ ಕಾಲ – ಕಾಲಕ್ಕೆ ಮಳೆಯಾಗಿದೆ ಸಂಕಷ್ಟ ಎದುರಾಗಿದ್ದು, ಇಂದಿನ ಪರಿಸ್ಥತಿಯಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಹೊದಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಆರ್.ತಿಮ್ಮಸಂದ್ರ ಗ್ರಾಮದ ಸಮೀಪ ಡಾ|| ಬಿ.ಆರ್ ಅಂಬೇಡ್ಕರ್ ವಸತಿಶಾಲೆಯ ಆವರಣದಲ್ಲಿ ಶನಿವಾರ ವನಮಹೋತ್ಸವ ಹಾಗು ಕೋಟಿ ವೃಕ್ಷಾರೋಹಣ ಸಸಿ ನೆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಬಾಲ್ಯದಿಂದಲೇ ಪರಿಸರದ ಬಗ್ಗೆ ಹೆಚ್ಚಿನ ಅರಿವನ್ನು ಮೈಗೂಡಿಸಿ ಕೊಳ್ಳಬೇಕು ಹಾಗೆಯೇ ಪರಿಸರ ಮಾಲಿನ್ಯ ತಡೆಗಟ್ಟಲು ಪ್ರತಿಯೊಬ್ಬರೂ ಶ್ರಮಿಸಬೇಕು, ಪರಿಸರದ ಉಳಿವುಗಾಗಿ ತಮ್ಮನ್ನು ತೊಡಗಿಸಿಕೊಂಡು ಪರಿಸರ ನಾಶವನ್ನು ತಡೆಯಬೇಕಾಗಿದೆ ಗಿಡಗಳನ್ನು ನೆಡುವುದು ಮುಖ್ಯವಲ್ಲಾ ಅದನ್ನು ಕಾಪಾಡಿಕೊಂಡಾಗ ಮಾತ್ರ ಪರಿಸರ ಉಳಿಯುತ್ತದ್ದೆ ಎಂದರು.
ಪರಿಸರವನ್ನು ಸಂರಕ್ಷಿಸದಿದ್ದರೆ ಮುಂದೆ ಕಠಿಣ ದಿನಗಳನ್ನು ಎದುರಿಸಲು ಸಿದ್ಧವಾಗಬೇಕಾಗುತ್ತದೆ. ಗಿ-ಮರಗಳನ್ನು ಬೆಳುಸುವುದರಿಂದ ಶುದ್ದ ಗಾಳಿ ದೊರೆಯುವ ಜೊತೆಗೆ ಸಕಾಲದಲ್ಲಿ ಮಳೆಬೆಳೆಯಾಗುತ್ತದೆ. ಇದರಿಂದ ರೈತರು ಮತ್ತು ಜನಸಾಮಾನ್ಯರು ಸಮೃದ್ಧಿಯಿಂದ ಜೀವನ ನಡೆಸಲು ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಪರಿಸರ ದಿನಾಚರಣೆ ವನಮಹೋತ್ಸವ ಕಾರ್ಯಕ್ರಮಗಳು ಆಚರಣೆಗೆ ಮಾತ್ರ ಸೀಮಿತವಾಗಬಾರದು ಪರಿಸರ ಕುರಿತು ಮುಂದಿನ ಯುವ ಪೀಳಿಗೆಗೆ ನಾವೆಲ್ಲರೂ ತಿಳಿಸಿಕೊಡಬೇಕು ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ಎನ್ ರವಿಕೀರ್ತಿ ಮಾತನಾಡಿ ಪ್ರಕೃತಿಯ ರಕ್ಷಣೆಗೆ ಮಾನವನಕೊಡುಗೆ ಅಗತ್ಯವಾಗಿದೆ ಅರಣ್ಯ ಇಲಾಖೆಯೊಂದಿಗೆ ಜನಸಾಮಾನ್ಯರಿಗೂ ಪ್ರಕೃತಿ ರಕ್ಷಣೆ ಮಾಡುವ ಜವಾಬ್ದಾರಿ ಇದೆ ಐಷಾರಾಮಿ ಜೀವನಕ್ಕೆ ಪ್ರಕೃತಿಯನ್ನು ಬಲಿಕೊಡದೇ ಅದರಿಂದ ಸಿಗುವ ಕೊಡುಗೆಗಳ ಕುರಿತು ಯೋಚಿಸಿ ಅದರ ರಕ್ಷಣೆಗೆ ಮುಂದಾಗಬೇಕೆಂದು ತಿಳಿಸಿದರು.
ಇದೇ ಸಮಯದಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳಿಂದ ಕಲ್ಲೂರು ಸಮೀಪ ನಿರ್ಮಾಣವಾಗುತ್ತಿರುವ ನೂತನ ನ್ಯಾಯಾಲಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಈ ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಮಹೇಶ್, ಪಿಡಿಓ ಕೆ.ಪಿ. ಶ್ರೀನಿವಾಸರೆಡ್ಡಿ, ಸಮಾಜಿಕ ವಲಯ ಅರಣ್ಯಾಧಿಕಾರಿ ಕಛೇರಿಯ ಸಿಬ್ಬಂದಿ ಜಾವೀದ್, ನರಸಿಂಹ, ಇನ್ನಿತರರು ಉಪಸ್ಥಿತರಿದ್ದರು.