

ನವದೆಹಲಿ: ಪಹಲ್ಲಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು “ಆಪರೇಷನ್ ಸಿಂಧೂರ್’ ಆರಂಭಿಸಿ ಒಟ್ಟು
9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಿ ಹೊಡೆದುರುಳಿಸಿದೆ.
ಆಪರೇಷನ್ ಸಿಂಧೂರ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮ್ಯಾಂಡರ್
ವ್ಯೋಮಿರಾ ಸಿಂಗ್ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಆಪರೇಷನ್ ಸಿಂದೂರ್ ಬ್ರೀಫಿಂಗ್ನಲ್ಲಿ ಅಧಿಕಾರ ವಹಿಸಿಕೊಂಡ ಅಲಂಕೃತ ಸೇನಾ ಅಧಿಕಾರಿಕರ್ನಲ್ ಸೋಫಿಯಾ ಖುರೇಷಿ ಮುಂದೇ ಪಾಕ್ ಬಾಲಬಿಚ್ಚಿದ್ದರೆ ನಾವು ಎಲ್ಲ ರೀತಿಯಲ್ಲೂ ಸಿದ್ಧವಾಗಿದ್ದೇವೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಉಗ್ರರ ನೆಲೆಗಳ ಮೇಲಿನ ದಾಳಿ ಸಂದರ್ಭದಲ್ಲಿ ಭಾರತೀಯ ಸೇನೆಯೂ ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ವಾರ್ ಹೆಡ್ಗಳ
ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಲಾಗಿದೆ. ಇದು ಭಾರತೀಯ ಸೇನೆಯ ಸಾಮರ್ಥ್ಯವನ್ನು ತೋರಿಸುತ್ತಿದ್ದು, ಟಾರ್ಗೆಟ್ ಗಳು
ಖಚಿತವಾಗಿ ಉಗ್ರರ ಅಡುಗು ತಾಣಗಳು, ನಿಖರ ಕಟ್ಟಡಗಳು ಮತ್ತು ಕಂಪ್ಲೆಕ್ಷಗಳಾಗಿತ್ತು. ಭಾರತ ಸೇನೆಯ ಆಪರೇಷನ್ ಹಾಗೂ ಕಾರ್ಯಚರಣೆ ದಕ್ಷತೆಯನ್ನು ಈ ದಾಳಿ ತೋರಿಸುತಿದ್ದು. ಭಾರತೀಯ ಸೇನೆಯೂ ಪಾಕಿಸ್ತಾನ ಕೈಗೊಳ್ಳುವ ಯಾವುದೇ ಪ್ರತಿದಾಳಿಗೂ
ಸಿದ್ಧವಾಗಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.