ಕೋಲಾರ,ಜ.04: ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿರುವ ಪೊಲೀಸ್ ಹೊರ ಠಾಣೆಯನ್ನು ನರಸಾಪುರ ಕೇಂದ್ರ ಸ್ಥಾನದಲ್ಲಿಯೇ
ನರಸಾಪುರ ಮದರ್ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ನರಸಾಪುರ ಹೋಬಳಿಯ ಗ್ರಾಮಸ್ಥರು ಹಾಗೂ ಯುವ ಮುಖಂಡ ಎನ್.ವಿ.ಗೋಪಿ ಅವರ ನೇತೃತ್ವದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಕೋಲಾರ ತಾಲ್ಲೂಕು ನರಸಾಪುರ ಗ್ರಾಮದಲ್ಲಿ ಪೊಲೀಸ್ ಹೊರ ಠಾಣೆ ಇದ್ದು ಇದನ್ನು ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೆ ಏರಿಸಬೇಕಾಗಿರುತ್ತದೆ. ಕಾರಣ ನರಸಾಪುರ ಕೈಗಾರಿಕಾ ಪ್ರದೇಶ ಸ್ಥಾಪನೆಗೊಂಡಿದ್ದು, ಕಾರ್ಖಾನೆಗಳು ಸ್ಪಾಪನೆಯಾಗಿ ಸುಮಾರು 10 ರಿಂದ 15 ವರ್ಷಗಳಾಗಿದ್ದು, ಪ್ರಸಿದ್ದ ಕಂಪನಿಗಳಾದ ಹೋಂಡಾ ಮೋಟಾರ್ಸ್ ಲಿಮಿಟೆಡ್, ವಿಸ್ಟ್ರಾನ್ (ಐಪೋನ್), ಎಕ್ಸಿಡಿ, ಬಡವೆ, ಸ್ಕ್ಯಾನಿಯಾ, ಲುಮ್ಯಾಕ್ಸ್ ಹಾಗೂ ಮಹೀಂದ್ರ ಏರೋ ಸ್ಪೇಸ್ ಹಾಗೂ 50 ಕ್ಕಿಂತಹೆಚ್ಚು ಇನ್ನು ಇತರ ಹಲವಾರು ರಾಷ್ಟ್ರೀಯ ಮತ್ತು ಅಂತರ ರಾಷ್ರೀಯ ಕಂಪನಿಗಳು ಇದ್ದು ಲಕ್ಷಾಂತರ ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ, ಇದರಿಂದಕೈಗಾರಿಕಾ ಪ್ರದೇಶದಲ್ಲಿ ವಿವಿಧ ಕಂಪನಿಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಸ್ಪಂದಿಸಿ, ಕಾರ್ಯೋನ್ಮುಕವಾಗಲು ತುಂಬಾ ತಡವಾಗುತ್ತದೆ, ಹಾಗೂ ನರಸಾಪುರ ಹೋಬಳಿಯಲ್ಲಿ ಸುಮಾರು 40 ರಿಂದ 45 ಸಾವಿರ ಮಂದಿ ವಾಸ ಮಾಡುತ್ತಿರುತ್ತಾರೆ, ಜೊತೆಗೆ ಈ ಕೇಂದ್ರ ಹತ್ತಿರವಾಗಿ ಕೆಲವು ವಕ್ಕಲೇರಿ ಹೋಬಳಿಯ ಗ್ರಾಮಗಳು ಇದ್ದು ಅಲ್ಲಿಯೂ ಸಹ ಸುಮಾರು 35 ರಿಂದ 40 ಜನ ವಾಸಿಸುತ್ತಿರುತ್ತಾರೆ, ಈ ಗ್ರಾಮಗಳಿಗೆ ಸಂಬಂಧಿಸಿದಂತೆ ವ್ಯಾಜ್ಯಗಳು ಹಾಗೂ ಇನ್ನು
ಇತರೇ ಪ್ರಕರಣಗಳು ಉಂಟಾದಾಗ 14 ರಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಇರುವ ಕೋಲಾರಕ್ಕೆ ಹೋಗಬೇಕಾಗುತ್ತದೆ.
ನರಸಾಪುರ ಮುಖ್ಯ ಕೇಂದ್ರದಿಂದ ವಕ್ಕಲೇರಿ ಮುಖ್ಯಕೇಂಧ್ರಕ್ಕೆ ಅಂದಾಜು ಕೇವಲ 7 ಕಿ.ಮೀ ಮಾತ್ರ ಇರುವುದರಿಂದ ವಕ್ಕಲೇರಿಯ ಕೆಲವು
ಗ್ರಾಮಗಳನ್ನು ಹಾಗೂ ನರಸಾಪುರ ಹೋಬಳಿ ಎಲ್ಲಾ ಗ್ರಾಮಗಳನ್ನು ಸೇರಿಸಿ ನರಸಾಪುರ ಗ್ರಾಮ ಪೊಲೀಸ್ ಠಾಣೆಯ ವ್ಯಾಪ್ತಿಗೆ ತಂದು ನರಸಾಪುರ ಹೊರಠಾಣೆಯನ್ನು ಮೇಲ್ದರ್ಜೇಗೆ ಏರಿಸಿ ಅವುಗಳಲ್ಲಿ ವಿಲೀನ ಮಾಡಬೇಕು ಹಾಗೂ ನರಸಾಪುರ ಹೊರ ಠಾಣೆ ಸರಹದ್ದು ಸೂಕ್ಷ್ಮ ಪ್ರದೇಶವಾದ್ದರಿಂದ, ಮತ್ತು ನರಸಾಪುರ ಹೊರ ಠಾಣಾ ಸರಹದ್ದಿನಲ್ಲಿ 8 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ 75 ಯ
ನಾಲ್ಕು ಪತದ ರಸ್ತೆ ಹಾದು ಹೋಗಿದ್ದು ರಸ್ತೆ ಅಪಘಾತಗಳು ಆಗಿಂದ್ದಾಗೆ,ಸಂಭವಿಸಿ ಹೆಚ್ಚಿನ ಸಂಖೆಯಲ್ಲಿ ಸಾವು ನೋವುಗಳು ಸಂಭವಿಸುತ್ತಿರುವುದರಿಂದ ಹಾಗೂ ಇತರೇ ಅಪರಾಧಗಳು ಆಗಿಂದ್ದಾಗೆ ಸಂಭವಿಸುತ್ತಿರುವುದರಿಂದ, ಹಾಗೂ ನರಸಾಪುರ ಹೊರ ಠಾಣಾ ವ್ಯಾಪ್ತಿಯಲ್ಲಿ ಜಲ್ಲಿ ಕ್ರಷರ್ ಪ್ಯಾಕ್ಟರಿಗಳು ಇರುತ್ತವೆ, ಹೆಚ್ಚಿನ ವ್ಯಾಪಾರ ವಹಿವಾಟು ಹಾಗೂ ಸಿವಿಲ್ ವ್ಯಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವುಗಳಿಗೆ ರಕ್ಷಣೆ ಕೊಡುವುದು, ಹಾಗೂ ಅಪಘಾತ ನಡೆದಸಂಧರ್ಭದಲ್ಲಿ ಕೂಡಲೇ ಸ್ಥಳಕ್ಕೆ ದಾವಿಸಿ ಕ್ರಮ ಕೈಗೊಳ್ಳಲು ಹಾಗೂ ಇತರೇ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವುದು ಅತ್ಯವಶ್ಯಕತೆ ಇರುತ್ತೆ, ಅದ್ದರಿಂದ ಕೂಡಲೇ ಎಲ್ಲಾ ಅಂಶಗಳನ್ನು ಪರಿಗಣಿಸಿ, ಈ ಹಿಂದೆ ಇದ್ದಂತಹ ಮಾನ್ಯ ಗೃಹ
ಮಂತ್ರಿಗಳಿಗೂ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಮನವಿಯನ್ನು ಸಲ್ಲಿಸಿದ್ದು ಏನು ಪ್ರಯೋಜನವಾಗಿರುವುದಿಲ್ಲ ಎಂದರು.
ಈ ವೇಮಗಲ್ ಪೊಲೀಸ್ ಠಾಣಾ ಮತ್ತು ನರಸಾಪುರ ಹೊರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ ನಕಲು ಪ್ರತಿಯನ್ನು ಲಗತ್ತಿಸಿದೆ, ತಾವುಗಳು ದಯವಿಟ್ಟು ನರಸಾಪುರ ಹೊರ ಠಾಣೆಯನ್ನು ನರಸಾಪುರ ಕೇಂದ್ರ ಸ್ಥಾನದಲ್ಲಿಯೇ ಪೊಲೀಸ್
ಠಾಣೆಯನ್ನಾಗಿ ಮೇಲ್ದರ್ಜೇಗೆ ಏರಿಸಬೇಕೆಂದು ಹಾಗೂ ನರಸಾಪುರ ಹೋಬಳಿ ಕುರ್ಕಿ ಗ್ರಾಮದ ಸರ್ವೇ ನಂಬರು 119 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಂದಾಜು 2.20.0ಎಕರೆ ಸರ್ಕಾರಿ ಸ್ಥಳ ಇರುತ್ತದೆ ಪೊಲೀಸ್ ಠಾಣೆಗೆ ಮೀಸಲಿರಿಸಿ ಪೊಲೀಸ್ ಠಾಣೆಯನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವಿಕರಿಸಿದ ಶಾಸಕ ಕೊತ್ತೂರು ಮಂಜುನಾಥ್ ಅವರು ತಮ್ಮ ಪತ್ರದಲ್ಲಿ ನರಸಾಪುರ ಕೇಂದ್ರ ಸ್ಥಾನದಲ್ಲಿಯೇ ಪೊಲೀಸ್ ಹೊರ
ಠಾಣೆಯನ್ನು ಮೇಲ್ದರ್ಜೇಗೆ ಏರಿಸಬೇಕೆಂದು ಗ್ರಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿ ಗೃಹಮಂತ್ರಿಗಳು ಕ್ರಮ ವಹಿಸುವುದಾಗಿ ತಿಳಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸೊಸ್ಯಟಿ ಮುನಿರಾಜು, ಸಿ.ಎಂ.ಎಂ.ಮಂಜುನಾಥ್, ಎಸ್.ನಾರಾಯಣಸ್ವಾಮಿ, ವಾಸೀಮ್, ಶ್ರೀನಾಥ್, ನಾ.ಲೋಕೇಶ್, ಶಾಂತಮ್ಮ ಇನ್ನಿತರರು ಇದ್ದರು.