ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಎಸ್ಸಿ , ಎಸ್ಟಿಗಳಿಗೆ ಸರ್ಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ಹಿಂದುಳಿದ ಜಾತಿಗಳ ಜನಾಂಗದವರಿಗೂ ಒದಗಿಸಬೇಕೆಂದು ಪ್ರವರ್ಗ ೧ ಜಾತಿಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಆರ್.ಜೋಗಮಲ್ ಆಗ್ರಹಿಸಿದರು . ಸುದ್ದಿಗಾರರೊಂದಿಗೆ ಮಾತನಾಡಿ , ೧೯೯೪ ರವರೆಗೆ ಸರ್ಕಾರ ಹಿಂದುಳಿದ ಜಾತಿಗಳ ಜನಾಂಗದವರಿಗೆ ಎಸ್ಸಿ , ಎಸ್ಟಿಗಳ ಮಾದರಿಯಲ್ಲಿ ಸೌಲಭ್ಯಗಳನ್ನು ಒದಗಿಸಿದ್ದರೂ ನಂತರದಲ್ಲಿ ಏಕಾಏಕಿ ಸ್ಥಗಿತಗೊಳಿಸುವ ಮೂಲಕ ಅನ್ಯಾಯ ಮಾಡಿರುವುದರಿಂದಾಗಿ ಈಗಲಾದರೂ ನ್ಯಾಯ ಒದಗಿಸಬೇಕಾಗಿದೆ ಎಂದರು . ವಿದ್ಯಾರ್ಥಿ ವೇತನ , ಶುಲ್ಕ ವಿನಾಯಿತಿ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಬೇಕಿದ್ದು ಪವರ್ಗ ೧ ರಡಿ ಬರುವ ಎಲ್ಲ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ೫ ಕೋಟಿ ರೂ . ಅನುದಾನ ನಿಗದಿ ಮಾಡಬೇಕು . ವಿಶ್ವವಿದ್ಯಾಲಯಗಳಲ್ಲಿ ಪ್ರವರ್ಗ ೧ ಜಾತಿಗಳ ಕೋಶವನ್ನು ಮರು ಸ್ಥಾಪಿಸಬೇಕು , ಎಸ್ಸೆಸ್ಸೆಲ್ಸಿ , ಪಿಯುಸಿ , ಪದವಿ , ಸ್ನಾತಕೋತ್ತರ ಪದವಿ ಪಾಸಾದವರಿಗೆ ಬಹುಮಾನದ ಹಣ ನೀಡಬೇಕು , ಭೂ ಒಡೆತನ ಯೋಜನೆಯನ್ನು ಘೋಷಿಸಬೇಕು , ಉದ್ಯಮ ಸ್ಥಾಪಿಸಲು ಶೇ .೪ ಬಡ್ಡಿ ದರದಲ್ಲಿ ೧೦ ಕೋಟಿ ರೂ . ಬ್ಯಾಂಕ್ ಸಾಲ ಒದಗಿಸಬೇಕು , ಕೈಗಾರಿಕಾ ಕಾರಿಡಾರ್‌ಗಳಲ್ಲಿ ನಿವೇಶನವನ್ನು ಶೇ .೫೦ ರಿಯಾಯಿತಿ ದರದಲ್ಲಿ ನೀಡಬೇಕು , ಪ್ರವರ್ಗ -೧ ರ ಅಡಿಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು , ಜಿಲ್ಲಾ ಪಂಚಾಯತಿ , ತಾಪಂ ಮತ್ತು ಬಿಬಿಎಂಪಿ ಚುನಾವಣೆಗಳಲ್ಲಿ ಪ್ರವರ್ಗ ೧ ಕ್ಕೆ ಮೀಸಲು ನೀಡಬೇಕು , ನಿಗಮ ಮಂಡಳಿ ಅಧ್ಯಕ್ಷರು ಸದಸ್ಯರ ಆಯ್ಕೆ ಮಾಡುವಾಗ ಪವರ್ಗ ೧ ನ್ನು ಪರಿಗಣಿಸಬೇಕು , ಜಾತಿ ನಿಗಮ ಮಂಡಳಿಗಳಿಗೆ ತಲಾ ೩೦೦ ಕೋಟಿ ರೂ . ಅನುದಾನ ನೀಡಬೇಕು , ಆದಾಯ ಮಿತಿಯನ್ನು ಹೆಚ್ಚಿಸಬೇಕು . ಅಲೆಮಾರಿಗಳ ಮನೆ ನಿರ್ಮಾಣಕ್ಕೆ ೮ ಲಕ್ಷ ರೂ ನೀಡಬೇಕು . ಮುಂದಿನ ಆಯವ್ಯಯದಲ್ಲಿ ಪ್ರವರ್ಗ ೧ ಜಾತಿಗಳ ಅಭಿವೃದ್ಧಿಗೆ ೧೫೦೦
ಕೋಟಿ ರೂ . ಅನುದಾನವನ್ನು ಒದಗಿಸಬೇಕು ಎಂದು ಜೋಗಮಲ್ ಒತ್ತಾಯಿಸಿದರು .
ಪ್ರವರ್ಗ ೧ ಜಾತಿಗಳ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಬರೀಶ್ ಯಾದವ್ ಮಾತನಾಡಿ , ಅ .೧೭ ರಂದು ಭಾನುವಾರ ಬೆಳಗ್ಗೆ ೧೦ ಗಂಟೆಗೆ ನಗರದ ಟೇಕಲ್ ರಸ್ತೆಯಲ್ಲಿರುವ ಯಾದವ ಸಮುದಾಯ ಭವನದಲ್ಲಿ ಪ್ರವರ್ಗ ೧ ರ ಜಿಲ್ಲಾ ಮಟ್ಟದ ಚಿಂತನ ಮಂಥನ ಸಭೆಯನ್ನು ರಾಜ್ಯಾದ್ಯಕ್ಷ ಡಿ.ಟಿ.ಶ್ರೀನಿವಾಸ್ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು ಜನಾಂಗದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರಲಾಗುತ್ತದೆ ಎಂದು ತಿಳಿಸಿದರು . ಸುದ್ದಿಗೋಷ್ಟಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ಮಂಜುನಾಥ್