ಶ್ರೀನಿವಾಸಪುರ : ಶ್ರೀನಿವಾಸಪುರ ಕಸಬಾ ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಸದಸ್ಯರ ಗಮನಕ 2024-25ನೇ ಸಾಲಿನ ಯಶಸ್ವಿನಿ ಯೋಜನೆಯ ಪಲಾನುಭವಿಗಳಾಗಲು ಸಂಘದಿಂದ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಘದ ಷೇರುದಾರ ಸದಸ್ಯರು ಕುಟುಂಬದ ನಾಲ್ಕ ಮಂದಿಗೆ ಶುಲ್ಕ 500 ರೂಗಳಾಗಿರುತ್ತದೆ. ಒಂದು ಕುಟುಂಬದಲ್ಲಿ 10 ಸದಸ್ಯರಿಗೆ ಮಾತ್ರ ಅವಕಾಶವಿದೆ. ತಲಾ ಎರಡು ಭಾವಚಿತ್ರ, ಆಧಾರ್ಕಾರ್ಡ್, ರೇಷನ್ ಕಾರ್ಡ್ ಕಡ್ಡಾಯವಾಗಿದ್ದು, 4 ಸದಸ್ಯರಿಗಿಂತ ಹೆಚ್ಚುವರಿ ಸದಸ್ಯರು ಕುಟುಂಬದಲ್ಲಿ ನೊಂದಾಯಿಸಿಕೊಳ್ಳಲು ತಲಾ ಒಬ್ಬೊಬ್ಬರಿಗೆ 100 ರೂಗಳನ್ನು ಹೆಚ್ಟುವರಿಯಾಗಿ ಪಾವತಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಸದಸ್ಯರು ಜಾತಿ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಸದಸ್ಯರಿಗೆ ಯಾವುದೇ ಶುಲ್ಕ ಇರುವುದಿಲ್ಲ.
ನವೀಕರಣಕ್ಕೆ ಭಾವಚಿತ್ರಗಳು ಅವಶ್ಯಕತೆ ಇರುವುದಿಲ್ಲ. ನವೀಕರಣದಲ್ಲಿ ಹೊಸ ಸದಸ್ಯರನ್ನು ಸೇರಿಸಲು ಹಾಗೂ ಹೊಸ ಸದಸ್ಯತ್ವಕ್ಕೆ ಕಡ್ಡಾಯವಾಗಿ ಭಾವಚಿತ್ರ ಮತ್ತು ಮೇಲಿನ ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ.
ರೇಷನ್ ಕಾರ್ಡ್ ನಲ್ಲಿ ಹೆಸರಿದ್ದವರು ಮಾತ್ರ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ.
ಮಾ, 31 ಕೊನೆಯ ದಿನವಾಗಿದ್ದು, ಸದಸ್ಯರು ಯಶಸ್ವಿನಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಘದ ನಿರ್ದೇಶಕ ಶಬ್ಬೀರ್ ಅಹಮದ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಘದ ಕಾರ್ಯದರ್ಶಿ ಶಿವರೆಡ್ಡಿ ರವರನ್ನು 9980118301 ಸಂಪರ್ಕಿಸಬಹುದು.