JANANUDI.COM NETWORK
ಬೆಂಗಳೂರು,ಜೂ. 22: 10 ವರ್ಷದ ಹಿಂದೆ ಸಂದರ್ಶನ ನೀಡಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ನೈಸ್ ಕಾರಿಡಾರ್ ಕಂಪನಿ ವಿರುದ್ಧ ತಮ್ಮ ಆರೋಪವನ್ನು ಮಾಡಿದ್ದರು, ಆದರೆ ಆ ಆರೋಪವನ್ನು ಸಾಬೀತುಪಡಿಸಲು ವಿಫಲರಾಗಿರುವುದರಿಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ 2 ಕೋಟಿ ರೂ ಮಾನ ಹಾನಿಯ. ಪರಿಹಾರವಾಗಿ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
10 ವರ್ಷಗಳ ಹಿಂದೆ ಖಾಸಗಿ ಸುದ್ದಿವಾಹಿನಿಗೆ ಒಂದಕ್ಕೆ ಸಂದರ್ಶನ ನೀಡಿದ್ದ ದೇವೇಗೌಡರು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಸಂಸ್ಥೆ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳೀಕೆ ನೀಡಿದ್ದರು. ಇದನ್ನು ವಿರೋಧಿಸಿ ದೇವೇಗೌಡರ ವಿರುದ್ಧ ನೈಸ್ ಕಂಪನಿ ಮಾನನಷ್ಟ ಮೊಕದ್ದಮೆ ಹುಡಿತ್ತು. (ಆeಜಿಚಿmಚಿಣioಟಿ ಅಚಿse) ದಾಖಲಿಸಿತ್ತು. ನೈಸ್ ಕಂಪನಿಯ ವಿರುದ್ಧ ತಾವು ಮಾಡಿದ್ದ ಆರೋಪವನ್ನು ಸಾಬೀತು ಮಾಡಲು ಅವರು ಅಸಫಲರಾಗಿದ್ದಾರೆ
ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಮಲ್ಲನಗೌಡ ಮಾಜಿ ಪ್ರಧಾನಿ ದೇವೇಗೌಡರಿಗೆ 2 ಕೋಟಿ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.
ಘಟನೆಯ ಸಾರಾಂಶ:
2011ರ ಜೂನ್ 20ರಂದು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ನೈಸ್ ಕಂಪನಿ ನಮ್ಮ ರಾಜ್ಯದ ಜನರ ಹಣವನ್ನು ಲೂಟಿ ಮಾಡುವ ಯೋಜನೆಯನ್ನು ಮಾಡುತಿದ್ದಾರೆ ಎಂದು ನೈಸ್ ಯೋಜನೆಯ ವಿರುದ್ಧ ಆಕ್ರೋಶ ಭರಿತ ಮಾತುಗಳನ್ನಾಡಿದ್ದರು.
ಈ ಸಂದರ್ಶನ ಪ್ರಸಾರವಾಗುತ್ತಿದ್ದಂತೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ನೈಸ್ ಕಂಪನಿ, ದೇವೇಗೌಡರು ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಯಿಂದ ನೈಸ್ ಕಂಪನಿಯ ಗೌರವಕ್ಕೆ ಧಕ್ಕೆಯಾಗಿದೆ. ಈ ನಿಟ್ಟಿನಲ್ಲಿ ದೇವೇಗೌಡರು ನಮ್ಮ ಕಂಪನಿಗೆ 10 ಕೋಟಿ ರೂ. ಪರಿಹಾರ ನೀಡಬೇಕು ಎಂದು ನೈಸ್ ಕಂಪನಿ ಮಾನನಷ್ಟ ಮೊಕದ್ದಮೆ ಹೂಡಿತ್ತು.
ನಿನ್ನೆಯ ವಿಚಾರಣೆಯಲ್ಲಿ ನಡೆಸಿದ ಸಿಟಿ ಸಿವಿಲ್ ಕೋರ್ಟ್, ನೈಸ್ ಕಂಪನಿಯ ವಿರುದ್ಧ ದೇವೇಗೌಡರು ಮಾಡಿದ ಆರೋಪಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ, ತಮ್ಮ ದಾಖಲೆ ರಹಿತ ಆರೋಪದಿಂದ ನೈಸ್ ಕಂಪನಿಯ ಗೌರವಕ್ಕೆ ಹಾನಿ ಆಗಿದ್ದಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ತೀರ್ಪು ನೀಡಿದೆ.