

ಕೋಲಾರ:- ನಗರದ ಎಂ.ಸರಿತ ಕುಮಾರಿ ಮಂಡಿಸಿದ ಪ್ರೌಢ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬೆಂಗಳೂರು ವಿವಿಯ 57 ನೇ ಘಟಿಕೋತ್ಸವಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಮತ್ತು ಉಪ ಕುಲಪತಿ ಡಾ.ಎಸ್.ಎಂ.ಜಯಕರ್ ಮತ್ತಿತರರು ಸರಿತಕುಮಾರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಕ್ರೈಸ್ತ ಮಿಷನರಿಸಂಸ್ಥೆಗಳು ಮತ್ತು ದಲಿತ ಕ್ರೈಸ್ತ ಮಹಿಳೆಯರ ಸಮಾಜೋ ಆರ್ಥಿಕ ಬದಲಾವಣೆಯ ಚಾರಿತ್ರಿಕ ಅಧ್ಯಯನ (1900-2001) ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಅವರು ಪಡೆದುಕೊಂಡಿದ್ದಾರೆ.
ಮುಳಬಾಗಿಲು ಪದವಿ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿ ಎಂ.ಸರಿತಕುಮಾರಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.