ಅತಿಯಾದ ಕೈಗಾರಿಕೀಕರಣ,ನಗರೀಕರಣ ಮತ್ತು ಬದಲಾದ ಜೀವನ ಶೈಲಿಯ ಪರಿಣಾಮ ಹವಾಗುಣ ವೈಪರೀತ್ಯದ ತುರ್ತು ಸಮಸ್ಯೆ ಎದುರಾಗಿದೆ . ಈಗ ನಾವು ಎಚ್ಚೆತ್ತುಕೊಂಡು ಪರಿಸರದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ಜೀವ ಸಂಕುಲದ ಅಳಿವು ಇನ್ನು ಕೆಲವು ದಶಕಗಳಲ್ಲಿ ನಿಶ್ಚಿತ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.
ಈ ದಿಸೆಯಲ್ಲಿ ಪರಿಸರ ಪರ ಕೆಲಸ ಮಾಡಲು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಪರಿಸರ ಕಾರ್ಯಕರ್ತರನ್ನು ಒಗ್ಗೂಡಿಸಿ ರಾಜ್ಯ ಮಟ್ಟದ ಒಕ್ಕೂಟ ಕಟ್ಟಲು ‘ಪರಿಸರಕ್ಕಾಗಿ ನಾವು’ ಎನ್ನುವ ರಾಜ್ಯ ಮಟ್ಟದ ಬಳಗ ರಚನೆಯಾಗಿದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲೂ ಅದರ ಉಪಘಟಕ ರಚಿಸಲಾಗಿದೆ.
ಪರಿಸರಕ್ಕಾಗಿ ನಾವು – ಇದರ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಸಂಯುಕ್ತ ಘಟಕದ ಮೊದಲ ಸಭೆ ಜನವರಿ 15, 2024 ರಂದು ಕಿನ್ನಿಗೋಳಿಯ ನೇಕಾರ ಸಂಘದ ಸಭಾ ಭವನದಲ್ಲಿ ನಡೆಯಿತು.
ದ.ಕ. ಜಿಲ್ಲೆಯಿಂದ ಅಶ್ವಿನಿ ಭಟ್ ಮತ್ತು ಭುವನ್ ದೇವಾಡಿಗ ಹಾಗೂ ಉಡುಪಿ ಜಿಲ್ಲೆಯಿಂದ ಶ್ರೀ ಕುಮಾರ್ ಮತ್ತು ದೀಪ್ತಿ ಅವರು ರಾಜ್ಯ ಸಂಚಾಲನ ಸಮಿತಿಗೆ ಈಗಾಗಲೇ ಆಯ್ಕೆ ಆಗಿದ್ದಾರೆ.ಪರಿಸರಕ್ಕಾಗಿ ನಾವು ರಾಜ್ಯ ಬಳಗದ ಆರಂಭಿಕ ಸಮಿತಿಯ ಪರವಾಗಿ ಮಮತಾ ರೈ ಹಾಗೂ ಉಭಯ ಜಿಲ್ಲೆಗಳ ಅನೇಕ ಪ್ರಮುಖ ಪರಿಸರ ಕಾರ್ಯಕರ್ತರು ಉಪಸ್ಥಿತರಿದ್ದರು.
ಹವಾಗುಣ ವೈಪರೀತ್ಯ ದಿಂದ ಹಿಡಿದು ಉಭಯ ಜಿಲ್ಲೆಗಳನ್ನು ಕಾಡುತ್ತಿರುವ ಅತಿ ಮುಖ್ಯ ಪರಿಸರ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಆಯ್ದ ಪರಿಸರ ಸಮಸ್ಯೆಗಳ ಪರಿಹಾರಕ್ಕಾಗಿ ಆಯಾ ಕ್ಷೇತ್ರದ ಪರಿಣಿತರನ್ನು ಒಳಗೊಂಡ ಸಮಿತಿಗಳನ್ನು ರಚಿಸಿ ಕಾರ್ಯತಂತ್ರ ರೂಪಿಸಲು, ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಯೋಜನೆಗಳನ್ನು ರೂಪಿಸಲು ಹಾಗೂ ರಾಜ್ಯ ಮಟ್ಟದ “ಪರಿಸರಕ್ಕಾಗಿ ನಾವು ” ಬಳಗದ ಮಾರ್ಗದರ್ಶನದಂತೆ ಕೆಲಸ ಮಾಡಲು ನಿರ್ಧರಿಸಲಾಯಿತು. ಸಭೆಯಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಸರಕ್ಕಾಗಿ ದುಡಿಯುತ್ತಿರುವ 38 ಮಂದಿ ಸೇರಿದ್ದರು. ಅಪರಾಹ್ನ 2.40ಕ್ಕೆ ಎಲ್ಲರನ್ನೂ ಸ್ವಾಗತಿಸುವ ಮೂಲಕ ಶ್ರೀಕುಮಾರ್ ಅವರು ಸಭೆಯನ್ನು ಪ್ರಾರಂಭಿಸಿದರು. ಸರೋಜಾ ಪ್ರಕಾಶ್ ಹಾಗೂ ಅಶ್ವಿನಿ ಭಟ್ ಸೇರಿ ” ಎಲ್ಲರ ನೋವನು ಬಲ್ಲವನಾದರೆ” ಹಾಡನ್ನು ಹಾಡಿದರು ಹಾಗೂ ಉಳಿದವರು ಅವರೊಂದಿಗೆ ದನಿಗೂಡಿಸಿದರು. ಸಮಸ್ಯೆಗಳನ್ನು ಈ ಕೆಳಗಿನ ಕ್ಷೇತ್ರಗಳಿಗೆ ಅನುಗುಣವಾಗಿ ವಿಂಗಡಿಸಲಾಯಿತು.
1. ಮೇಲ್ಮೈ ನೀರು ( ನದಿ,ಕೆರೆ, ಸಮುದ್ರ)
2. ಅಂತರ್ಜಲ
3. ತ್ಯಾಜ್ಯ ನಿರ್ವಹಣೆ
4. ಅಭಿವೃದ್ಧಿಯ ಹೆಸರಿನಲ್ಲಿ ಮರ ಕಡಿಯುವುದು, ಅರಣ್ಯಗಳ ನಾಶ
5. ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ
6. ಶಿಕ್ಷಣ, ಜೀವನಶೈಲಿ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು
7. ಕೃಷಿ ಮತ್ತು ಜೀವ ಸಂಕುಲಗಳ ಮೇಲೆ ಆಗುತ್ತಿರುವ ಪರಿಣಾಮಗಳ ಅಧ್ಯಯನ
ಸದಸ್ಯರು ತಮ್ಮ ತಮ್ಮ ಆಸಕ್ತಿಯ ಪ್ರಕಾರ ಮೇಲಿನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ತಂಡಗಳನ್ನು ಸೇರಿಕೊಳ್ಳಬೇಕೆಂದು ನಿರ್ಧರಿಸಲಾಯಿತು.
For environment we – the. K. & First meeting of Udupi District Unit
Climate change has reached a state of emergency as a consequence of excessive industrialisation, urbanisation and change in lifestyle. Scientists have repeatedly warned us that unless we respond to this situation with a sense of urgency and collectively solve this problem, a catastrophic loss of life on our planet in a matter of decades is certain.
In this context, people working to save the environment all over Karnataka have come together to form a coalition called “parisarakkagi navu”, meaning “We for the environment”. Units of this coalition have been formed at the district level.
The first meeting of the Dakshina Kannada and Udupi units of Parisarakkagi Navu was jointly held on 15th January, 2024 in Nekarara Soudha of the Talipady Weavers’ Cooperative Society, Kinnigoli.
Ashwini Bhat and Bhuvan Devadiga from Dakshina Kannada and Shreekumar and Deepthi from Udupi have been chosen to represent their respective districts in the state level coordination committee. Mamatha Rai, a member of the founding group of the statewide coalition, and a number of environmental activists from the two districts attended the meeting.
The meeting began with Shreekumar welcoming the gathering. Saroja Prakash and Ashwini Bhat sang the song, “ellara novanu ballavanadare” and others joined. Impacts of climate change and a number of environmental problems experienced in the two districts were discussed. It was decided to form committees consisting of experts in various areas, to device ways of spreading awareness and to work in coordination with the state level committee. A total of 38 concerned people from the two districts were present.
The areas listed below were identified for collective action and it was decided to form teams to work on them.
1. Saving water resources (surface water such as rivers, ponds and the ocean as well as groundwater)
2. Waste management
3. Saving and growing trees and forests
4. Air and noise pollution
5. Study of human impact on biodiversity
6. Study of impact of pollution on health
7. Sustainable agriculture, lifestyle and livelihoods
8. Education and building of awareness and vigilance
People were invited to join the team(s) of their choice according to their interest, experience and skills.