ಕೆ.ಜಯದೇವ್ ಹುಟ್ಟುಹಬ್ಬದ ಅಂಗವಾಗಿ ಆಟೋಚಾಲಕರಿಗೆ
ಸಮವಸ್ತ್ರ ವಿತರಣೆ-ವಿ.ಆರ್. ಸುದರ್ಶನ್‍ರಿಂದ ಶುಭಾಷಯ

ಕೋಲಾರ:- ನಗರದ ಸಾಯಿಬಾಬಾ ಮಂದಿರದಲ್ಲಿ ಕಾಂಗ್ರೆಸ್ ಎಸ್ಸಿಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಅವರ ಹುಟ್ಟುಹಬ್ಬದ ಅಂಗವಾಗಿ ಆಟೋ ಚಾಲಕರಿಗೆ ಸಮವಸ್ತ್ರವನ್ನು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಉತ್ತಮ ಸಂವಿಧಾನ
ನೀಡಿದ್ದಾರೆ, ಅದನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಿ, ಅವರು ನೀಡಿರುವ ಸಂವಿಧಾನದ ಅಡಿಯೇ ಮುನ್ನಡೆಯಬೇಕು ಎಂದರು.
ಪ್ರತಿಯೊಬ್ಬ ನಾಗರೀಕರು, ತಮ್ಮ ಜೀವನದಲ್ಲಿ ಸಂವಿಧಾನದ ಅಂಶಗಳನ್ನು ಅಳವಡಿಸಿಕೊಂಡು ಅವರಿಗೆ ಗೌರವ ತರುವ ಕೆಲಸ ಮಾಡುವ ಸಂಕಲ್ಪ ಮಾಡಬೇಕು ಇದು ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಇದು ರಾಜಕೀಯ ಕಾರ್ಯಕ್ರಮವಲ್ಲ, ಸಾಮಾಜಿಕ ಕಾರ್ಯಕ್ರಮವಾಗಿದ್ದು, ಇಲ್ಲಿ ರಾಜಕೀಯ ಮಾತನಾಡುವುದಿಲ್ಲ ಎಂದ ಅವರು, ಆಟೋ ಚಾಲಕರಿಗೆ ಪ್ರತಿವರ್ಷ ಸಮವಸ್ತ್ರ ವಿತರಿಸುವ ಪ್ರಯತ್ನ ಶ್ಲಾಘನೀಯ ಎಂದ ಅವರು, ಸಾಯಿಬಾಬಾ ಅವರ ಆಶೀರ್ವಾದ ನಿಮಗೆ ಸದಾ ಸಿಗಲಿ ಎಂದರು.
ಜಯದೇವ್ ಅವರಿಗೆ ರಾಜಕೀಯವಾಗಿ ಉತ್ತಮ ಸ್ಥಾನಮಾನ ಸಿಗಲಿ ಎಂದು ಹಾರೈಸಿದ ಅವರು, ಸಮಾಜದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಮುಂದುವರೆಸಿಕೊಂಡು ಹೋಗಿ, ಅವಕಾಶ ಸಿಕ್ಕಾಗ ಕಷ್ಟಕ್ಕೆ ನೆರವಾದವರನ್ನು ಮರೆಯದಿರಿ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಹೊಸ ವರ್ಷದ ಶುಭಾಷಯ ಕೋರಿದ ಅವರು, ಕಳೆದ ವರ್ಷ ವರುಣನ ಕೃಪೆಯಿಂದ ಒಳ್ಳೆಯ ಮಳೆಯಾಗಿದೆ, ಇದೇ ರೀತಿ ಮುಂದಿನ ವರ್ಷವೂ ಸುಭೀಕ್ಷವಾಗಿರಲಿ, ಜನತೆ ಭಾತೃತ್ವದಿಂದ ಬದುಕ ನಡೆಸುವ ವಾತಾವರಣ ಇರಲಿ ಎಂದು ಆಶಿಸಿ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಸಾಯಿಬಾಬಾ ಮಂದಿರದಲ್ಲಿ ಜಯದೇವ್ ಹುಟ್ಟುಹಬ್ಬದ ಅಂಗವಾಗಿ ನಡೆದ ವಿಶೇಷ ಪೂಜಾಕಾರ್ಯದಲ್ಲೂ ಅವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್, ಕಾಂಗ್ರೆಸ್ ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ಉದಯಶಂಕರ್, ಕದಂಬ ಸೋಮಣ್ಣ, ಜೆ.ಕೆ.ಜಯರಾಂ, ಡಾ.ಚಂದ್ರಶೇಖರ್, ಖಾದ್ರಿಪುರ ಬಾಬು,ಗೋಕುಲ ಮಿತ್ರಬಳಗದ ಚಲಪತಿ, ಮಣಿ, ಕಿಲಾರಿಪೇಟೆ ಮುನಿವೆಂಕಟಯಾದವ್, ಚಂದು, ಕಾರ್ಗಿಲ್ ವೆಂಕಟೇಶ್, ಎಸ್ಟಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್, ಪತ್ರಕರ್ತ ಚಾಂದ್‍ಪಾಷ, ಜ್ಯೂಸ್ ನಾರಾಯಣಸ್ವಾಮಿ, ಬಾಬಾ, ದಲಿತ ನಾರಾಯಣಸ್ವಾಮಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರತ್ನಮ್ಮ, ಎಸ್ಸಿಘಟಕದ ತಾಲ್ಲೂಕು ಅಧ್ಯಕ್ಷ ಜಗನ್, ಮುಖಂಡರಾದ ಚೇತನ್ ಬಾಬು,ಮತ್ತಿಕುಂಟೆ ಕೃಷ್ಣ, ಹಾರೋಹಳ್ಳಿ ನಾರಾಯಣಸ್ವಾಮಿ, ರಾಜಕುಮಾರ್,ಸಾಹುಕಾರ್ ಶಂಕರಪ್ಪ,ವಿ.ಕೆ.ರಾಜೇಶ್, ಮುನಿಕೃಷ್ಣ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.