ತಾಲ್ಲೂಕಿನಾದ್ಯಂತ ಹಸುಗಳಿಗೆ ಚರ್ಮಗಂಟು ರೋಗ ಕಾಯಿಲೆ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ: ನಿರ್ದೇಶಕ ಎನ್.ಹನುಮೇಶ್

ಶ್ರೀನಿವಾಸಪುರ 2 : ಪ್ರಸ್ತುತ ತಾಲ್ಲೂಕಿನಾದ್ಯಂತ ಹಸುಗಳಿಗೆ ಚರ್ಮಗಂಟು ರೋಗ ಕಾಯಿಲೆ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಒಕ್ಕೂಟದ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಿಂದ ತಾಲೂಕು ಶಿಬಿರ ಕಚೇರಿಯಲ್ಲಿ ಇತ್ತೀಚಿಗೆ ರಾಸು ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು.
ಪಶು ಸಂಗೋಪನೆ ಇಲಾಖೆವತಿಯಿಂದ ಪಶುವೈದ್ಯರು ಲಸಿಕೆಯನ್ನು ನೀಡಲಾಗುತ್ತಿದೆ. ಆದ್ದರಿಂದ ಹಾಲು ಉತ್ಪಾದಕರು ಹಸುಗಳಿಗೆ ಚರ್ಮಗಂಟು ರೋಗ ಕಾಯಿಲೆ ಕಂಡುಬಂದಲ್ಲಿ ತುರ್ತಾಗಿ ಶಿಬಿರದ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆದು ನಿಯಂತ್ರಣ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಎಲ್ಲಾ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳ ವಿಮೆ ಮಾಡಿಸಬೇಕು. ರಾಸು ವಿಮಾ ಪರಿಹಾರ ಚೆಕ್ ಪಡೆದಿರುವ ಫಲಾನುಭವಿಗಳು ಕಡ್ಡಾಯವಾಗಿ ರಾಸುಗಳನ್ನು ಖರೀದಿಸಿ , ತಮ್ಮ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸಬೇಕೆಂದು ಮತ್ತು ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಲು ತಿಳಿಸುತ್ತಾ, ಮೃತಪಟ್ಟ ರಾಸುಗಳ ವಿಮಾ ಪರಿಹಾರ 11 ಚೆಕ್‍ಗಳ 6.10 ಲಕ್ಷ ರೂಗಳ ಚೆಕ್‍ಗಳನ್ನು ವಿತರಿಸಿದರು.
ಉಪ ವ್ಯವಸ್ಥಾಪಕ ಕೆ.ಎಂ.ಮುನಿರಾಜು ಮಾತನಾಡಿದರು. ಉಪ ಕಛೇರಿಯ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್ , ಎನ್.ಶಂಕರ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ, ಕೆ.ಪಿ.ಶ್ವೇತ, ಜಿ.ಎನ್.ಗೋಪಾಲಕೃಷ್ಣಾರೆಡ್ಡಿ ಹಾಗು ಶಿಬಿರದ ಸಿಬ್ಬಂದಿಗಳು, ಅಧ್ಯಕ್ಷರು , ಕಾರ್ಯನಿರ್ವಾಹಕರು, ಫಲಾನುಭವಿಗಳು ಇದ್ದರು.