ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ಡಿ.27 : ಈಗಿನ ಪೀಳಿಗೆಗೆ ಜಾನಪದದ ಸೊಗಡಿನ ಅರಿವು ಮೂಡಿಸುವುದು ಬಹಳ ಪ್ರಾಮುಖ್ಯವಾಗಿದೆ. ಅಲ್ಲದೆ ಇಂತಹ ಜಾನಪದ, ತತ್ವಪದ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಗ್ರಾಮಗಳಲ್ಲಿ ನಡೆಸುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಯುವ ಜನಾಂಗದ ಒತ್ತಡಕ್ಕೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ ಎಂದು ದೇವಾಲಯದ ಅರ್ಚಕರಾದ ಅನಂತ ಪದ್ಮನಾಭ ಸ್ವಾಮಿಗಳು ತಿಳಿಸಿದರು.
ಕೋಲಾರ ತಾಲ್ಲೂಕು ನರಸಾಪುರ ಹೋಬಳಿ ಕುರ್ಕಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಪೆರುಪಾಳ್ಯ ಯಲ್ಲಮ್ಮ ದೇವಾಲಯದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಶ್ರೀ ಪೆರುಪಾಳ್ಯ ಯಲ್ಲಮ್ಮ ಸೇವಾ ಟ್ರಸ್ಟ್ ವತಿಯಿಂದ ಡಿಸೆಂಬರ್ 25ರಂದು ಹಮ್ಮಿಕೊಂಡಿದ್ದ ವಿಶೇಷ ಘಟಕ ಯೋಜನೆಯಡಿಯಲ್ಲಿ ಜಾನಪದ ಮತ್ತು ತತ್ವಪದ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವಾಲಯದ ಕಾರ್ಯದರ್ಶಿ ಎಂ.ಕೃಷ್ಣಪ್ಪ ಮಾತನಾಡಿ ದೇವರ ನಾಮವನ್ನು ಹಾಡುವುದರಿಂದ ಅನೇಕ ರೋಗ ರುಜಿನಗಳು ದೂರವಾಗುವುದು. ಯುವಕರು ಸಹನೆಯನ್ನು ಕಳೆದುಕೊಂಡಿದ್ದು, ಸಹನೆಯನ್ನು ರೂಡಿಸಿಕೊಳ್ಳಲು ಈ ಕಲೆಗಳು ಸಹಕಾರಿಯಾಗುತ್ತದೆ ಎಂದರು. ಹಾಗಾಗಿ ಯುವಕರು ಟಿ.ವಿ. ಮೊಬೈಲ್ ಕಂಪ್ಯೂಟರ್ ನಂತಹ ಮಾದ್ಯಮಗಳಿಗೆ ಹೆಚ್ಚು ಒತ್ತುಡದೆ ನಮ್ಮ ಪೂರ್ವಿಕರ ಜಾನಪದ ಕಲೆಯನ್ನು ಕಲಿಯುವುದು ಮತ್ತು ವೀಕ್ಷಿಸುವ ಅಭ್ಯಸ ಮಾಡಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಕೆ.ಬಿ.ಹೊಸಹಳ್ಳಿ ಸಿ.ಚಂದ್ರಶೇಖರ್, ಮೂರಂಡಹಳ್ಳಿ ರಾಮಲಿಂಗಾಚಾರಿ, ಚಿನ್ನಾಪುರ ನಾರಾಯಣಸ್ವಾಮಿ, ಮಾರ್ಜೇನಹಳ್ಳಿ ತಿಮ್ಮಣ್ಣ, ಅಲ್ಲದೆ ಹಾರ್ಮೋನಿಯಂ ಮೂರಂಡಹಳ್ಳಿ ವಿಜಯಕುಮಾರ್, ತಬಲ ಮಲ್ಲಸಂದ್ರ ದಿಲೀಪ್, ಸೊಲೆಕ್ಸ್ ಮಲ್ಲಸಂದ್ರ ಗೋಪಾಲ್ ರವರು ಸಹ ನೀಡಿದರು.