JANANUDI.COM NETWORK

ಕಠ್ಮಂಡು, ಜೂ.17: ನೇಪಾಳ ಮತ್ತು ಭೂತಾನ್ನಲ್ಲಿ ಕಳೆದ ಮೂರು ದಿನದಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹದಿಂದ 17 ಮಂದಿ ಸಾವಗಿಡಾಗಿದ್ದು, ಹಲವರ ನಾಪತ್ತೆಯಾಗಿದ್ದಾರೆ, ಜನರು ಭಾರೀ ಮಳೆಯಿಂದ ಅಲ್ಲಿನ ಜನರುತತ್ತರಿಸಿ ಹೋಗಿದ್ದಾರೆ.
ಸುಮಾರು 200 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಅನೇಕರು ಗಾಯಗೊಂಡಿದ್ದು, ಹೆಲಿಕಾಪ್ಟರ್‌ಗಳ ಮೂಲಕ ಗಾಯಾಳುಗಳನ್ನು ಸ್ಥಳಾಂತರಿಸಲಾಗಿದೆ. ನೇಪಾಳ ಹಾಗೂ ಭೂತಾನ್ನ ಅನೇಕ ಪ್ರದೇಶಗಳು ಗುಡ್ಡ ಪ್ರದೇಶಗಳಿಂದ ಕೂಡಿರುವುದರಿಂದ ಭಾರೀ ಮಳೆಯ ಕಾರಣ ಪ್ರವಾಹ-ಭೂ ಕುಸಿತವಾಗಿದ್ದು, ಸೇತುವೆಗಳು ಕೂಡ ನಾಶವಾಗಿವೆ, ಜನರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿರುತ್ತವೆ.