ಬಂಗಾರಪೇಟೆ, ಮೇ-18 ಜಿಲ್ಲಾದ್ಯಂತ ಅವೈಜ್ಞಾನಿಕ ಅಂಡರ್ಪಾಸ್ ಅವ್ಯವಸ್ಥೆ ಸರಿಪಡಿಸಿ ಮುಂಗಾರು ಮಳೆಯಿಂದ ಜನ ಸಾಮಾನ್ಯರ ರಚನೆ ಮಾಡುವ ಜೊತೆಗೆ ರೈಲ್ವೆ ಟ್ರಾಕ್ ಅಕ್ಕಪಕ್ಕದಲ್ಲಿ ಸುರಿಯುತ್ತಿರುವ ಕಸವನ್ನು ಸ್ವಚ್ಚಗೊಳಿಸಿ ಮುಳ್ಳು ತಂತಿಯನ್ನು ಅಳವಡಿಸಿ ಜಾನುವಾರುಗಳನ್ನು ರಕ್ಷಣೆ ಮಡಬೇಕೆಂದು ರೈತ ಸಂಘದಿಂದ ರೈಲ್ವೆ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಕೋಲಾರ ರೈಲ್ವೆ ಟ್ರಾಕ್ ಹಾದು ಹೋಗುವ ಕೀಲುಕೋಟೆ, ಟವರ್, ವ್ಯಾಪ್ತಿಯಲ್ಲಿ ಸುತ್ತಮುತ್ತಲ ಮನೆಯವರು ಕಸವನ್ನೇ ರೈಲ್ವೆ ಅಳಿಗಳ ಮೇಲೆ ಸುರಿದಿರುವ ಕಸದ ರಾಶಿಯಲ್ಲಿ ಮೇವಿಗಾಗಿ ಜಾನುವಾರುಗಳು ರೈಲ್ವೆ ಕಂಬಿಗಳ ಮೇಲೆ ನಿಲ್ಲುತ್ತಿರುವುದರಿಂದ ಹಾದು ಹೋಗುವ ರೈಲಿಗೆ ಸಿಲುಕಿ ಪ್ರಾಣವನ್ನು ಕಳೆದುಕೊಳ್ಳುವ ಜೊತೆಗೆ ರಾತ್ರಿ ವೇಳೆ ಕೆಲವು ಯುವಕರು ಕಂಬಿಗಳ ಮೇಲೆ ಕುಳಿತು ಮದ್ಯಪಾನ ಮಾಡುತ್ತಿರುವ ಬಗ್ಗೆ ದೂರು ನೀಡುತ್ತಿದ್ದರೂ ಇದುವರೆಗೂ ಸಮಸ್ಯೆಯನ್ನು ಇದುವರೆಗೂ ಗಂಭೀರವಾಗಿ ಪರಿಗಣಿಸಿಲ್ಲವೆಂದು ಅವ್ಯವಸ್ಥೆ ವಿರುದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿವರ್ಷ ಮುಂಗಾರು ಮಳೆ ಪ್ರಾರಂಭವಾದಾಗ ಜಿಲ್ಲಾದ್ಯಂತ ಎಲ್ಲಾ ಅಂಡರ್ಪಾಸ್ಗಳು ಕೆರೆ ಕುಂಟೆಗಳಾಗಿ ಮಾರ್ಪಟ್ಟು ಹಳ್ಳಿಯಿಂದ ಹಳ್ಳಿಗೆ ಸಂಪರ್ಕಗಳು ಸಂಪೂರ್ಣವಾಗಿ ಖಡಿತವಾಗುತ್ತಿದ್ದರೂ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ವಿಫಲವಾಗಿದ್ದಾರೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ರೈಲ್ವೆ ಇಲಾಖೆ ಅಭಿವೃದ್ದಿ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಜಿಲ್ಲಾದ್ಯಂತ ಸಾವಿರಾರು ಕೋಟಿ ಅನುದಾನದಲ್ಲಿ ಅಭಿವೃದ್ದಿಪಡಿಸಿರುವ ಅಂಡರ್ ಪಾಸ್ಗಳು ಯಾವುದೇ ಮುಂಜಾಗ್ರತೆ ಇಲ್ಲದೆ ಸ್ಥಳೀಯರ ಜೊತೆ ಚರ್ಚೆ ಮಾಡದೆ ತಮಗೆ ಇಷ್ಟ ಬಂದ ರೀತಿ ಎಲ್ಲಿ ಬೇಕೋ ಅಲ್ಲಿ ಮಳೆ ನೀರು ಸರಾಗವಾಗಿ ಹರಿದು ಪಕ್ಕದ ರಾಜಕಾಲುವೆ ಇಲ್ಲ ಚಿಕ್ಕಕಾಲುವೆಗಳಿಗೆ ಹೋಗಬೇಕಾದ ದಾರಿಯಿಲ್ಲದೆ ಅಂಡರ್ ಪಾಸ್ಗಳನ್ನು ನಿರ್ಮಿಸಿರುವುದರಿಂದ ಮುಂಗಾರು ಮಳೆ ಪ್ರಾರಂಭವಾದರೆ ಅಂಡರ್ ಪಾಸ್ ಸುತ್ತಮುತ್ತಲಿರುವ ಗ್ರಾಮೀಣ ಪ್ರದೇಶದ ರೈತರು ವಿದ್ಯಾರ್ಥಿಗಳು ವ್ಯಾಪಾರಸ್ತರಿಗೆ ಮುಳವಾಗಿ ಪರಿಣಮಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ರೈಲ್ವೆ ಅಧಿಕಾರಿಗಳು ಜನ ಸಾಮಾನ್ಯರ ತೆರಿಗೆ ಹಣವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದರೆ ಆಕಾಶಕ್ಕೆ ಕೋಟಿ ಕೋಟಿ ಹಣವನ್ನು ವೆಚ್ಚಾ ಮಾಡಿ ಚಪ್ಪರ ಹಾಕಿದಂತೆ ಅಂಡರ್ಪಾಸ್ಗಳಿಗೆ ಶಾಶ್ವತ ಪರಿಹಾರ ಹುಡುಕುವುದನ್ನು ಬಿಟ್ಟು ಕಬ್ಬಿಣದ ರೇಖುಗಳ ಮೂಲಕ ಮೇಲ್ಛಾವಣಿಯಂತೆ ಚಪ್ಪರವನ್ನು ಹಾಕಲು ಮುಂದಾಗಿರುವುದು ನಾಚಿಕೆಗೇಡು ಎಂದು ಕಿಡಿ ಕಾರಿದರು.
ಮಳೆ ನೀರು ಸಮರ್ಪಕವಾಗಿ ಹರಿದು ಹೋಗದೆ ಶೀಟುಗಳು ಹಾಕಿದ್ದರು ಸಂಪೂರ್ಣವಾಗಿ ಅಂಡರ್ ಪಾಸ್ಗಳು ಜಲಾವೃತವಾಗಿರುವುದರಿಂದ ಆಯಾ ತಪ್ಪಿ ಚಿಕ್ಕಮಕ್ಕಳು ಅಥವಾ ಜಾನುವಾರುಗಳು ಇಲ್ಲವೆ ತರಕಾರಿ ತುಂಬಿದ ವಾಹನಗಳೇನಾದರೂ ಅಂಡರ್ ಪಾಸ್ಗಳಲ್ಲಿ ಸಂಚಾರ ಮಾಡಿದರೆ ಕಂಡಿತವಾಗಲೂ ಪ್ರಾಣವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಅಧಿಕಾರಿಗಳ ಕಾಮಗಾರಿಗಳು ನಡೆಯುತ್ತಿದೆ ಎಂದು ಆರೋಪ ಮಾಡಿದರು.
ಒಂದು ಕಡೆ ಅವೈಜ್ಞಾನಿಕ ಅಂಡರ್ ಪಾಸ್ಗಳು ಮತ್ತೊಂದು ಕಡೆ ರೈಲ್ವೆ ಪಟ್ಟಾಗಳ ಮೇಲೆ ಜಾನುವಾರುಗಳು ಹಾಗೂ ರಾತ್ರಿವೇಳೆ ಮದ್ಯ ಸೇವಿಸುವ ಕೆಲವು ಕಿಡಿಗೇಡಿಗಳು ರೈಲ್ವೆ ಪಟ್ಟಾಗಳ ಮೇಲೆ ಕುಳಿತು ಮದ್ಯ ಪಾನ ಮಾಡುವ ದಂದೆ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ನಿಯಮದ ಪ್ರಕಾರ ರೈಲು ಪಟ್ಟಾಗಳ ಅಕ್ಕಪಕ್ಕದ 10 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಜಾನುವಾರಾಗಲೀ ಅಥವಾ ಮನುಷ್ಯರಾಗಲೀ ಓಡಾಡಬಾರದೆಂದು ಮುಳ್ಳು ತಂತಿಯನ್ನು ಅಳವಡಿಸಬೇಕಾದ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೋಟಿ ಕೋಟಿ ಹಣವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಲೂಟಿ ಮಾಡುತ್ತಿದ್ದಾರೆಂದು ದೂರು ನೀಡಿದರು.
48 ಗಂಟೆಗಳ ಜಿಲ್ಲಾಧ್ಯಂತ ಹದಗೆಟ್ಟಿರುವ ಅವೈಜ್ಞಾನಿಕ ಅಂಡರ್ಪಾಸ್ಗಳನ್ನು ಸರಿಪಡಿಸಿ ಮುಂಗಾರು ಮಳೆಯಿಂದ ಜನ ಸಾಮಾನ್ಯರ ರಕ್ಷಣೆ ಮಾಡಬೇಕೆಂದು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ರೈಲ್ವೆ ಅಧಿಕಾರಿ ವಿಕ್ರಮ್ ಜಿನೋರಿಯಾರವರು ಸಂಬಂದಪಟ್ಟ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಚಾಂದ್ಪಾಷ, ಕಿರಣ್, ಬಾಬಾಜಾನ್, ಆರೀಪ್, ಜಾವೇದ್, ಮುನಿಯಪ್ಪ, , ಸಂದೀಪ್ರೆಡ್ಡಿ,ಸಂದೀಪ್ಗೌಡ, ರಾಮಸಾಗರ ವೇಣು, ಕಿರಣ್, ಮುನಿಕೃಷ್ಣ, ಕದರಿನತ್ತ ಅಪ್ಪೋಜಿರಾವ್, ವಿಶ್ವ, ಮುನಿರಾಜು, ಯಲ್ಲಪ್ಪ, ಹರೀಶ್, ಮಂಗಸಂದ್ರ ತಿಮ್ಮಣ್ಣ, ಶೈಲಜ, ರತ್ನಮ್ಮ,ಮುಂತಾದವರಿದ್ದರು.