ಕೋಟ, ಜು. 22: ಮಣೂರು-ಪಡುಕರೆ ಭಾಗದಲ್ಲಿ ಈ ಬಾರಿ ಕಡಲ್ಕೊರೆತ ತೀವ್ರಗೊಂಡಿದ್ದರಿಂದ ಮೀನುಗಾರಿಕೆ ಇಲಾಖೆ ಎಂಜಿನಿಯರ್ ಡಯಾಸ್ ಹಾಗೂ ಮಾಜಿ ಸಚಿವ. ಜಯಪ್ರಕಾಶ್ ಹೆಗ್ಡೆ ಸ್ಟಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ್ದಾರೆ. ಇಲ್ಲಿನ. ಜಿ.ಎ. ಕಾಂಚನ್ ರಸ್ತೆ ಹಾಗೂ ಲಿಲ್ಲಿ ಫೆರ್ನಾಂಡಿಸ್ ರಸ್ತೆಯಲ್ಲಿ ಸುಮಾರು 300 ಮೀಟರ್ನಷ್ಟುಸ್ಥಳದಲ್ಲಿ ಶಾಸ್ವತ ತಡೆಗೋಡೆ ಇಲ್ಲ, ಹಾಗಾಗಿ ಪ್ರತಿ ವರ್ಷ ಇಲ್ಲೆ ಸಮಸ್ಯೆ ಎದುರಾಗುತ್ತದೆ. ಕಳೆದ ಮಳೆಗಾಲದಲ್ಲಿ ತೀವ್ರವಾದ ಕಡಲ್ಕೊರೆತ ಉಂಟಾಗಿತ್ತು. ಕಡಲ ಅಲೆಗಳ ಹೊಡೆತಕ್ಕೆ ಇಲ್ಲಿನ ಸಂಪರ್ಕ ರಸ್ತೆ ಕಡಿತವಾಗುವ ಭೀತಿ ಇದೆ, ಹೀಗಾಗಿ ಶಾಶ್ವತ ಪರಿಹಾರ ಕ್ರಮಗಳು ಅಗತ್ಯ. ಎಂದು, ಸ್ಥಳೀಯರು ಅಧಿಕಾರಿಗಳು ಮತ್ತು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆಯವರಲ್ಲಿ ಮನವಿ ಮಾಡಿದರು. ಮನವಿಯನ್ನು ಆಲಿಸಿದ ಅವರು ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಆರಂಭದಲ್ಲಿ ತಾತ್ಕಾಲಿಕ ಪರಿಹಾರ ಹಾಗೂ ಮುಂದೆ ಶಾಶ್ವತ ಪರಿಹಾರದ ಬಗ್ಗೆ ಕ್ರಮಕೈಗೊಳ್ಳಬೇಕು. ಎಂದು ತಿಳಿಸಿದರು. ಅಧಿಕಾರಿಗಳು ಪೂರಕ ಕ್ರಮಕೈಗೊಳ್ಳುವುದಾಗಿ ಹೇಳಿದರು.