JANANUDI.COM NETWORK
ಕುಂದಾಪುರ, ಜ.3: ಗುಲ್ವಾಡಿ ಟಾಕೀಸ್ ಎಂಬ ಖ್ಯಾತ ನಾಮ ಗಳಿಸಿದ ಗುಲ್ವಾಡಿಯಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗುವ “ಆ 90 ದಿನಗಳು” ಚಲನ ಚಿತ್ರದ ಫಸ್ಟ್ ಲೂಕ್ ಪೋಷ್ಟರ್, ಟ್ರೇಲರ್ ಬಿಡುಗಡೆ, ಮತ್ತು ಅದೇ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.
ನಿವ್ರತ್ತ ಸೆಲ್ಸ್ ಎಂಡ್ ಟ್ಯಾಕ್ಸ್ ಸಹಾಯಕ ಕಮಿಷನರ್ತಾಗಿದ್ದ ಉಡುಪಿ ಮೂಲದವರಾದ ರೊನಾಲ್ಡ್ ಲೋಬೊ ಇವರು ಈ ಚಲನ ಚಿತ್ರದ ನಿರ್ಮಾಪಕರು, ನಿರ್ದೇಶಕರು, ಮೂಲ ಕಥಾ ಬರಹಾಗಾರಾಗಿದ್ದಾರೆ.
ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತವರು ಯಾಕುಬ್‍ಖಾದರ್ ಗುಲ್ವಾಡಿಯವರು, ಜೊತೆಗೆ ಸಹ ನಿರ್ದೇಶನ ಕೂಡ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಈ ಚಿತ್ರದ ನಿರ್ಮಾಣದಲ್ಲಿ ತೊಡಗಿದ್ದು, ಇದೀಗ ಬಿಡುಗಡೆಗೆ ಸಿದ್ದವಾಗಿದೆ.
“ಆ 90 ದಿನಗಳು” ಚಲನ ಚಿತ್ರದ ಫಸ್ಟ್ ಲುಕ್ ಪೋಷ್ಟರ್, ಟ್ರೇಲರ್ ಬಿಡುಗಡೆ, ಮತ್ತು ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಹೆಗ್ಡೆ, ಅಧ್ಯಕ್ಶರು, ರಾಜ್ಯ ಹಿಂದುಳಿದ ಆಯೋಗ, ನಾಡೋಜ ಜಿ. ಶಂಕರ್, ಪ್ರವರ್ತಕರು ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ. ರಿಷಬ್ ಶೆಟ್ಟಿ, ರಾಶ್ಟ್ರ ಪುರಸ್ಕ್ರತ ನಟ, ನಿರ್ದೇಶಕರು, ರವಿ ಬಸ್ರೂರು, ರಾಷ್ಟ್ರಪ್ರಶಸ್ತಿ ಪುರಸ್ಕøತ ಖ್ಯಾತ ಸಂಗೀತ ನಿರ್ದೇಶಕರು. ಡಾ. ಸಾಗಭೂಷಣ ಉಡುಪ, ಎ.ಎಸ್.ಎನ್. ಹೆಬ್ಬಾರ್, ಉಡುಪಿ ಜಲ್ಲಾ ಆರೋಗ್ಯಾಧಿಕಾರಿ. ಜಾನ್ಸನ್ ಡಿ’ಆಲ್ಮೇಡಾ, ಅಧ್ಯಕ್ಷರು ರೋಸರಿಕ್ರೆಡಿಟ್ ಕೋ ಆಪ್ ಸೊಸೈಟ, ಕುಂದಾಪುರ, ಬೈಕಾಡಿ ಸುಪ್ರಸಾದ್ ಶೆಟ್ಟಿ ಆಧ್ಯಕರು ಬ್ರಮ್ಮಾವರ ಸಕ್ಕರೆ ಕಾರ್ಖಾನೆ, ನೀಲಾವರ ಸುರೇ0ದ್ರ ಅಡಿಗ ಅಧ್ಯಕ್ಷರು ಉಡುಪಿ ಜಲ್ಲಾ ಕಸಾಪ, ಶಿವರಾಮ್ ಕೆ.ಎಮ್. ಅಧ್ಯಕ್ಷರು ಉಡುಪಿ ಜಲ್ಲಾ ಮೊಗವೀರಯುವ ಸಂಘಟನೆ, ವಿನಯಕುಮಾರ ಶೆಟ್ಟಿ, ಸುರೇಂದ್ರ ಶೆಟ್ಟ ಆಡಳಿತ ನಿರ್ದೇಶಕರು, ಸಹನಾ ಗ್ರೂಪ್ ಕೋಟೆಸಶ್ಚರ, ಸುದೇಶ್ ಶೆಟ್ಟಿ, ಗುಲ್ವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಡಾ. ಆದರ್ಶ ಹೆಬ್ಬಾರ ವೈದ್ಯಕೀಯ ನಿರ್ದೇಶಕರು ಅದರ್ಶ ಅಸ್ಪತ್ರೆ ಕುಂದಾಪುರ, ಡಾ. ಪ್ರಕಾಶ ತೊಳಾರ್ ನಿರ್ದೇಶಕರು ಮನಸ್ಮಿತ ಫೌಂಡೇಶನ್ ಕೋಟ, ಡಾ.ರ0ಜನ್ ಶೆಟ್ಟಿ ವೈದ್ಯಕೀಯ ನಿರ್ದೇಶಕರು ನ್ಯೂ ಮೆಡಿಕಲ್, ಕುಂದಾಪುರ, ಪ್ರಶಾಂತ ತೊಳಾರ್ ಪ್ರಭ ಕಿರಣ ಟೈಲ್ಸ್ ಗುಲ್ಡಾಡಿ, ಸುಬ್ರಹ್ಮಣ್ಯ ಶೆಟ್ಟಿ ಕಾರ್ಯದರ್ಶಿ, ಉಡುಪಿ ಜಿಲ್ಲಾ ಕಸಾಪ, ವಿವೇಕಾನ0ದ ಭಂಡಾರಿ, ದುರ್ಗಾ ಕ್ರಪಾ ಮೋಟರ್ಸ್ ಗುಲ್ವಾಡಿ, ಶೇಖರ ಶೆಟ್ಟಿ ಕೋಟೆಶ್ವರ, ರವಿಕಿರಣ ಮುರ್ಡೇಶ್ವರ ನ್ಯಾಯವಾದಿ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.
“ಆ 90 ದಿನಗಳು” ಚಿತ್ರದ ನಾಯಕ ನಟ ಹ್ರತಿಕ್ ಮುರ್ಡೆಶ್ವರ್ (ರವಿಕಿರಣ್ ಮುರ್ಡೇಶ್ವರ್ ಇವರ ಪುತ್ರ, ನಾಯಕಿ ನಟಿ ಮತ್ತು ಕುಂದಾಪುರ ಮೂಲದ ಅನೇಕ ಸಹಾಯಕ ಕಲಾವಿದರು ಉಪಸ್ಥಿತರಿದ್ದರು. ಅತಿಥಿಗಳೆಲ್ಲರೂ ಚಿತ್ರದ ಯಶಸ್ವಿಗಾಗಿ ಶುಭ ಕೋರಿದರು.
ಡಾ.ಸತೀಶ ಪೂಜಾರಿ. ಅರ್ಪಾಜ್ ಉಳ್ಳಾಲ್ “ಆ 90 ದಿನಗಳು” ಚಲನ ಚಿತ್ರದ ಗಾಯಕರು ಗವಿಶಿದ್ಧಯ್ಯ ಹಳ್ಳಿಕೇರಿ ಮಠ, ಮೆಹಬೂಬ್ ಕಿಲ್ಲೆದಾರ್ ಈ ಸಂದರ್ಭದಲ್ಲಿ ಹಾಡುಗಳನ್ನು ಹಾಡಿ ರಂಜಿಸಿದರು.
ಗಿರೀಶ್ ಶೆಟ್ಟಿಗಾರ್, ನವೀನ್ ವಿಲಿಯಮ್ ಬಾರ್ಬೊಜಾ, ಯಾಕೂಬ್ ಖಾದರ್ ಗುಲ್ವಾಡಿ ಚಿತ್ರದ ಸಹ ಸಿರ್ಮಾಪಕರಾಗಿದ್ದು ಉಪಸ್ಥಿತರಿದ್ದರು. ತಾಂತ್ರಿಕ ಸಿರ್ದೇಶನ: ಬಿ. ಶಿವಾನಂದ, ಡಿಓಪಿ ಗಳಾಗಿ ಪಿ.ವಿ.ಆರ್ ಸ್ವಾಮಿ, ಗೂಗಾರೆರೆಡ್ಡಿ, ಸಂಗೀತಗಾರನಾಗಿ ರಾಧಾಕೃಷ್ಣ ಬಸ್ರೂರ್, ಸಂಕಲನಗಾರರಾಗಿ ನಾಗೇಶ್, ಎನ್,. ಕಲರಿಸ್ಟ್, ಜಿ ಗುರುಪ್ರಸಾದ್, ಧ್ವನಿ ಮತ್ತು ವಿನ್ಯಾಸ, ಬಾಲು, ಸಾಹಿತ್ಯ, ಪ್ರಮೋದ್ ಮರವಂತೆ ಇವರಾಗಿದ್ದಾರೆ. ಪ್ರಸನ್ನ ಪಣಕನಹಳ್ಳಿ, ಸಾಗರಾಜ್ ಡಿಗ್ಗಿ ಸಹ ನಿರ್ದೇಶಕರಾಗಿದ್ದಾರೆ. ಅರ್ಪಾಜ್ ಉಲ್ಲಾಳ್, ಶಶಿಕಲಾ ಸುನಿಲ್ ಹಾಡುಗಳನ್ನಾಡಿದ್ದಾರೆ.