

ಕುಂದಾಪುರ: ಮೇ 10ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮೊದಲ ಬಾರಿಗೆ “ಭಂಡಾರ್ಕಾರ್ಸ್ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯ ವಿದ್ಯಾರ್ಥಿಗಳಿಂದ ನಡೆಯಿತು
ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿದ್ದ ಗೌತಮ್ ಶೆಟ್ಟಿ, ಅಧ್ಯಕ್ಷರು ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಕುಂದಾಪುರ ಅವರು ಮಾತನಾಡಿ ಕ್ರೀಡಾ ಮನೋಭಾವದಿಂದ ಆಡಬೇಕು. ಅಂಪೈರ್ ತೀರ್ಮಾನ ವನ್ನು ಒಪ್ಪಿ ಯಾವುದೇ ಅಹಿತಕರ ರೀತಿಯಲ್ಲಿ ವರ್ತಿಸದೆ ಆಡಬೇಕು ಎಂದು ಆಟಗಾರರಿಗೆ ಶುಭ ಹಾರೈಸಿದರು.
ಐಪಿಎಲ್ ಮಾದರಿಯಲ್ಲಿ 150 ವಿದ್ಯಾರ್ಥಿ ಆಟಗಾರರನ್ನು 10 ತಂಡಗಳನ್ನಾಗಿ ರಚಿಸಿ 4 ಓವರ್ ಗಳ ಮ್ಯಾಚ್, 3 ದಿನಗಳ ಕಾಲ ನಡೆಯಲಿದೆ.
ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ ಪ್ರಭು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ, ಐಕ್ಯೂಎಸಿ ಸಂಯೋಜಕರಾದ ಡಾ. ವಿಜಯಕುಮಾರ್ ಕೆ.ಎಂ ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ನಿರ್ದೇಶಕರಾದ ಶಂಕರನಾರಾಯಣ ಸ್ವಾಗತಿಸಿದರು.
ವಿದ್ಯಾರ್ಥಿನಿಯರಾದ ಖುಷಿ ಕಾರ್ಯಕ್ರಮ ನಿರೂಪಿಸಿ, ಪ್ರಮೀಳಾ ವಂದಿಸಿದರು.