ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದು ಒಂದೇ ಸಂಭ್ರಮವಲ್ಲ, ಗಿಡಗಳನ್ನೂ ಬೆಳೆಸಿ : ಡೆಕ್ಕಾ ಕಿಶೋರ್ ಬಾಬು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಪಟಾಕಿಯಿಂದ ವಾಯುಮಾಲಿನ್ಯದ ದುಷ್ಪರಿಣಾಮ : ಎಸ್ಪಿ ಡೆಕ್ಕಾ ಕಿಶೋರ್ ಬಾಬು

ಕೋಲಾರ ನವೆಂಬರ್ 03 : ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದು ಒಂದೇ ಸಂಭ್ರಮವಲ್ಲ ಜೊತೆಗೆ ಗಿಡಗಳನ್ನು ಬೆಳೆಸಿ ಎಂದು ಡೆಕ್ಕಾ ಕಿಶೋರ್ ಬಾಬು ರವರು ಅಭಿಪ್ರಾಯ ಪಟ್ಟರು.
ನಗರದ ಕಾಲೇಜು ಜೂನಿಯರ್ ಕಾಲೇಜ್ ಆವರಣದಲ್ಲಿ ಪರಿಸರ ಪ್ರೇಮಿಗಳ ಬಳಗ ಹಾಗೂ ಸ್ಕೌಟ್ಸ್ ಅಂಡ್ ಗೈಡ್ ಮತ್ತು ಸೂರ್ಯಪ್ರಿಯ ಕನ್‍ಸ್ಟ್ರಕ್ಷನ್ ಪ್ರೈ.ಲಿಮಿಟೆಡ್ ವತಿಯಿಂದ ಹಮ್ಮಿಕೊಂಡಿದ್ದ ಸಸಿಗಳ ವಿತರಣೆ ಸಮಾರಂಭದಲ್ಲಿ ಮಾತಾನಾಡಿದರು.
ಮನೆಗೊಂದು ಗಿಡ ನೆಟ್ಟು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ, ಗಾಳಿ, ನೀರು, ಆಹಾರ, ಕಲುಷಿತವಾಗಿದೆ. ಪರಿಸರ ಸಂರಕ್ಷಣೆ ಮಾಡದೆ ಹೋದರೆ ಮುಂದಿನ ಪೀಳಿಗೆಗೆ ಭವಿಷ್ಯವಿಲ್ಲ. ಬೆಳಕಿನ ಹಬ್ಬ ದೀಪಾವಳಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವ ಬದಲು ದೀಪ ಬೆಳಕಿ ಶಾಂತಿಯುತವಾಗಿ ಆಚರಿಸಿ ಪರಿಸರ ಮಾಲಿನ್ಯ ತಡೆಯಿರಿ ಎಂಬ ಘೋಷಣೆಯೊಂದಿಗೆ ನಗರದ ಪರಿಸರ ಪ್ರೇಮಿಗಳು ಇಂದು ಜಾಗೃತಿ ಆರಂಭಿಸಿದ್ದಾರೆ ಎಂದರು.
ಸ್ಕೌಟ್ಸ್ ಅಂಡ್ ಗೈಡ್‍ನ ಜಿಲ್ಲಾ ಆಯುಕ್ತರಾದ ಕೆ.ವಿ. ಶಂಕರಪ್ಪ ಮಾತಾನಾಡಿ ಇತ್ತೀಚೆಗμÉ್ಟೀ ಸುಪ್ರೀಂಕೋರ್ಟ್ ನೀಡಿದಾದೇಶ ಸೇರಿದಂತೆ ಪಟಾಕಿ ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುತ್ತಿದೆ. ಮುಖ್ಯವಾಗಿ ಶಾಲಾ ಮಕ್ಕಳೊಂದಿಗೆ ಜನಸಾಮಾನ್ಯರ ಬಳಿ ಹೋಗಿ ಅರಿವು ಮೂಡಿಸಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಜಯದೇವ ಮಾತಾನಾಡಿ ದೀಪಾವಳಿ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಬೇಕು. ದೀಪಾವಳಿ ಹಬ್ಬ ಬರೀ ಹಬ್ಬವಾಗಿ ಮಾರ್ಪಟ್ಟಿದೆ. ಪ್ರಸ್ತುತ ಸನ್ನಿವೇಶದಲ್ಲಿ ನಾವಿಂದು ಹೇಗೆ ಹಬ್ಬ ಆಚರಿಸಬೇಕಾಗಿದೆ ಮತ್ತಿತರ ವಿಷಯ ಕುರಿತು ನಗರದ್ಯಾಂತ ಧ್ವನಿವರ್ಧಕದ ಮೂಲಕ ಮುದ್ರಸಿದ ಧ್ವನಿಯ ಮೂಲಕ ಪರಿಸರದ ಗೀತೆಗಳು ಹಾಗೂ ಶ್ಲೋಕಗಳನ್ನು ಜನರಿಗೆ ತಿಳಿಯಪಡಿಸುತ್ತದೆ ಎಂದರು
ಪತ್ರಕರ್ತ ಗಣೇಶ್ ಮಾತಾನಾಡಿ ದೀಪಾವಳಿಯನ್ನು ಬೆಳಕು ಹೊಳಪಿನ ಹಬ್ಬವಾಗಿ ಆಚರಿಸುವುದರೊಂದಿಗೆ ಯಾವುದೇ ಕಾರಣಕ್ಕೂ ಜೀವನ ಪರ್ಯಂತ ನರಳುವಂಥ ಶಾಪ ನೀಡುವ ಹಬ್ಬವಾಗಲು ಬಿಡಬಾರದು ಎಂದರು
ಕಾರ್ಯಕ್ರಮದ ಆಯೋಜಕರಾದ ಪರಿಸರ ಪ್ರೇಮಿ ರಾಜೇಶ್ ಮಾತಾನಾಡಿ ನವರಾತ್ರಿ, ದೀಪಾವಳಿ ಸಂಭ್ರಮದಲ್ಲಿ ಸಿಡಿಸುವ ಪಟಾಕಿಗಳ ಅತೀವ ಶಬ್ಧವμÉ್ಟೀ ಅಲ್ಲ. ಇವತ್ತು ನಮ್ಮ ಪಟ್ಟಣದಲ್ಲಿ ದಿನನಿತ್ಯದ ಸದ್ದುಗದ್ದಲದ ಮಟ್ಟ ಕೂಡ ಬಹಳ ಹೆಚ್ಚಾಗಿದೆ. ಇಡೀ ವಾತಾವರಣದಲ್ಲಿ ಹಿಂದೆಗಿಂತ ಇಂದು ಈ ಪ್ರಮಾಣ ಗಾಬರಿ ಹುಟ್ಟಿಸುವಷ್ಟು ಅತಿಯಾಗಿದೆ. ಇದು ಹೆಚ್ಚುತ್ತಲೇ ಸಾಗುತ್ತಿದೆ ಆದ್ದರಿಂದ ಶಾಂತಿಯುತವಾಗಿ ಗಿಡಮರಗಳನ್ನು ನೆಡುವುದರೊಂದಿಗೆ ಪರಿಸರವನ್ನು ಉಳಿಸೋಣ ಎಂದರು
ಈ ಸಂದರ್ಭದಲ್ಲಿ ಗಲ್‍ಪೇಟೆ ಕೆ.ಸಿ.ಸಂತೋಷ್, ಕನ್ನಡಮಿತ್ರ ವೆಂಕಟಪ್ಪ, ಕವಿ ಡಾ.ಶರಣಪ್ಪ ಗಬ್ಬೂರು, ಸ್ಕೌಟ್ಸ್ ಬಾಬು, ಟೈಗರ್ ವೆಂಕಟೇಶ್, ಸ್ಕೌಟ್ಸ್ ಸುರೇಶ್, ಡಿ.ಟಿ.ಪಿ. ನಾರಾಯಣ್, ವಿಶ್ವನಾಥ, ಉಮಾದೇವಿ, ಶ್ರೀನಾಥ್, ಮಧು, ಜಾನಪದ ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ, ಮಂಜುನಾಥ್, ಸ್ಕೌಟ್ಸ್ ಗೈಡ್ಸ್‍ನ ಸ್ವಯಂ ಸೇವಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.