ಸೌದಿ ಅರೇಬಿಯಾದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ

JANANUDI.COM NETWORK


ರಿಯಾದ್: ಕೋವಿಡ್ 19 ನ ಹಲವು ರೂಪಾಂತರ ವೈರಸ್‍ಗಳ ಬಳಿಕ ಇದೀಗ ಒಮಿಕ್ರಾನ್ ರೂಪಾಂತರ ವೈರಸ್ ಪ್ರಪಂಚದ ದೇಶಗಳಲ್ಲಿ ಆತಂಕವನ್ನು ಮೂಡಿಸಿದೆ. ಈ ನಡುವೆ ಗಲ್ಫಿನ ಸೌದಿ ಅರೇಬಿಯಾದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಗಲ್ಫ್ ನ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಉತ್ತರ ಆಫ್ರಿಕಾ ದೇಶದಿಂದ ಬಂದಿರುವ ನಾಗರಿಕನಲ್ಲಿ ಒಮಿಕ್ರಾನ್ ರೂಪಾಂತರ ವೈರಸ್ ಪತ್ತೆಯಾಗಿದ್ದು ಸದ್ಯ ಆತನನ್ನು ಪ್ರತ್ಯೇಕವಾಗಿರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕೊವಿಡ್ 19ನ ಹಲವು ರೂಪಾಂತರಿ ವೈರಸ್ ಗಳ ಪೈಕಿ ಒಮಿಕ್ರಾನ್ ಹೆಚ್ಚಿನ ವೇಗದಲ್ಲಿ ಹರಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ವಿವಿಧ ದೇಶಗಳು ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿವೆ.